ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್ ನಂತರ ಆಸ್ಟ್ರೇಲಿಯಾದ ಮತ್ತೋರ್ವನ ಜೊತೆ ಸನ್ ರೈಸರ್ಸ್ ಕಿರಿಕ್!

Simon Katich quits Sunrisers Hyderabad after franchise neglects his pre action plans: Report

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರೇಕ್ಷಕರಲ್ಲಿ ಹಲವಾರು ದಿನಗಳಿಂದ ಇದ್ದ ಯಾವ ಆಟಗಾರರು ಯಾವ ಫ್ರಾಂಚೈಸಿಗಳ ಪಾಲಾಗಲಿದ್ದಾರೆ ಎಂಬ ಪ್ರಶ್ನೆ ಹಾಗೂ ಕುತೂಹಲಗಳಿಗೆ ಕಳೆದ ಶನಿವಾರ ಹಾಗೂ ಭಾನುವಾರದಂದು ನಡೆದ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಉತ್ತರವನ್ನು ನೀಡಿದೆ. ಹೌದು, ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ನಡೆದ ಈ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 590 ಆಟಗಾರರು ಭಾಗವಹಿಸಿದ್ದು, 203 ಆಟಗಾರರು ಯಶಸ್ವಿಯಾಗಿ ಬಿಕರಿಯಾಗಿದ್ದಾರೆ. ಹೀಗೆ ಯಶಸ್ವಿಯಾಗಿ ಹರಾಜಾದ ಆಟಗಾರರ ಪೈಕಿ 66 ವಿದೇಶಿ ಆಟಗಾರರಿದ್ದರೆ, ಇನ್ನುಳಿದ 137 ಆಟಗಾರರು ಭಾರತೀಯರಾಗಿದ್ದಾರೆ. ಇನ್ನು ಈ ಆಟಗಾರರನ್ನು ಖರೀದಿಸಲು ಎಲ್ಲಾ 10 ಫ್ರಾಂಚೈಸಿಗಳು ಖರ್ಚು ಮಾಡಿರುವ ಒಟ್ಟು ಮೊತ್ತ 551.7 ಕೋಟಿ ರೂಪಾಯಿಗಳು. ಅಷ್ಟೇ ಅಲ್ಲದೆ ಇದಕ್ಕೂ ಮುನ್ನ ನಡೆದ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು 33 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು 324.2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದವು.

ಹೀಗೆ ಬಹುದಿನಗಳ ನಂತರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಎಲ್ಲಾ 10 ಫ್ರಾಂಚೈಸಿಗಳು ತಮಗೆ ಅಗತ್ಯವೆನಿಸುವ ಆಟಗಾರರ ಮೇಲೆ ಕೋಟಿ ಕೋಟಿ ಸುರಿದು ಖರೀದಿ ಮಾಡಿದ್ದು, ಸಾಲು ಸಾಲು ಯುವ ಆಟಗಾರರಿಗೂ ಕೂಡ ಮಣೆ ಹಾಕಿವೆ. ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತೀ ಕಳಪೆ ತಂಡವಾಗಿ ಹೊರಹೊಮ್ಮಿದ್ದ ಸನ್ ರೈಸರ್ಸ್ ಹೈದರಾಬಾದ್ ಅತಿ ಹೆಚ್ಚಾಗಿ ಯುವ ಆಟಗಾರರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಖರೀದಿಸಿದ್ದು, ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯಗೊಂಡ ನಂತರ ತಂಡದಲ್ಲಿ 23 ಆಟಗಾರರನ್ನು ಹೊಂದಿದೆ.

ಐಪಿಎಲ್ 2022: ಕೊಹ್ಲಿ ನಂತರ ಆರ್‌ಸಿಬಿ ನಾಯಕನಾಗಲು ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರುಐಪಿಎಲ್ 2022: ಕೊಹ್ಲಿ ನಂತರ ಆರ್‌ಸಿಬಿ ನಾಯಕನಾಗಲು ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರು

ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ತೀರಾ ಕೆಟ್ಟ ಪ್ರದರ್ಶನ ನೀಡಿದ್ದ ಸನ್ ರೈಸರ್ಸ್ ಹೈದರಾಬಾದ್ ಆಸ್ಟ್ರೇಲಿಯಾ ಮೂಲದ ಆಟಗಾರ ಡೇವಿಡ್ ವಾರ್ನರ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೇ ಟೂರ್ನಿ ಮಧ್ಯದಲ್ಲಿಯೇ ತಂಡದಿಂದಲೂ ಕೂಡ ಹೊರಹಾಕುವುದರ ಮೂಲಕ ಭಾರೀ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಹಾಯಕ ತರಬೇತುದಾರನಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ತಂಡದಿಂದ ಹೊರ ನಡೆದಿದ್ದರು.

ಹೀಗೆ ಸೈಮನ್ ಕ್ಯಾಟಿಚ್ ದಿಢೀರನೆ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತ್ಯಜಿಸುವುದಕ್ಕೆ ಕಾರಣವೇನೆಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು. ಸದ್ಯ ಈ ಕುರಿತಾಗಿ ವರದಿಯೊಂದು ಬಂದಿದ್ದು, ಈ ವರದಿಯ ಪ್ರಕಾರ ಸೈಮನ್ ಕ್ಯಾಟಿಚ್ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯನ್ನು ತೊರೆಯಲು ಕಾರಣ ಫ್ರಾಂಚೈಸಿ ತನ್ನ ಯೋಜನೆಗಳ ವಿರುದ್ಧವಾಗಿ ನಡೆದುಕೊಂಡದ್ದು ಎನ್ನಲಾಗಿದೆ. ಹೌದು, ಮೆಗಾ ಹರಾಜಿಗೂ ಮುನ್ನ ಯಾವ ರೀತಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸೈಮನ್ ಕ್ಯಾಟಿಚ್ ಹಾಕಿಕೊಳ್ಳಲಾಗಿದ್ದ ಯೋಜನೆಯನ್ನು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕಡೆಗಣಿಸಿದ ಕಾರಣ ಸೈಮನ್ ಕ್ಯಾಟಿಚ್ ಸನ್ ರೈಸರ್ಸ್ ಫ್ರಾಂಚೈಸಿಯನ್ನು ತ್ಯಜಿಸಿದರು ಎಂದು ವರದಿ ತಿಳಿಸಿದೆ.

'ನಾನು ಹೇಳುತ್ತಿದ್ದೇನೆ ರಿವ್ಯೂ ತಗೋ' ಎಂದ ಕೊಹ್ಲಿಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ಹೀಗಿತ್ತು'ನಾನು ಹೇಳುತ್ತಿದ್ದೇನೆ ರಿವ್ಯೂ ತಗೋ' ಎಂದ ಕೊಹ್ಲಿಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ಹೀಗಿತ್ತು

ಶ್ರೇಯಸ್ ವರ್ಷದ ದುಡಿಮೆ ಎಷ್ಟು?? ಹೇಗಿದೆ ಲೈಫ್ ಸ್ಟೈಲ್?? | Oneindia Kannada

ಇದೇ ಸಮಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಆಸ್ಟ್ರೇಲಿಯಾ ಮೂಲದ ಆಟಗಾರರ ಜೊತೆ ಹೆಚ್ಚು ಮನಸ್ತಾಪವನ್ನು ಮಾಡಿಕೊಳ್ಳುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕಳೆದ ಬಾರಿಯ ಐಪಿಎಲ್ ಟೂರ್ನಿಯ ವೇಳೆ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಅವರನ್ನು ಹೊರಹಾಕಿದ್ದ ಸನ್ ರೈಸರ್ಸ್ ಹೈದರಾಬಾದ್ ಇದೀಗ ಆಸ್ಟ್ರೇಲಿಯಾದ ಸೈಮನ್ ಕ್ಯಾಟಿಚ್ ಅವರ ಯೋಜನೆಯನ್ನು ತಿರಸ್ಕರಿಸುವ ಮೂಲಕ ಅವರನ್ನು ಕೂಡ ಕಳೆದುಕೊಂಡಿದೆ. ಅಷ್ಟೇ ಅಲ್ಲದೆ ತಂಡದ ಕೋಚ್‌ಗಳಾಗಿದ್ದ ಆಸ್ಟ್ರೇಲಿಯಾ ಮೂಲದ ಟ್ರೆವರ್ ಬೇಲಿಸ್ ಮತ್ತು ಬ್ರಾಡ್ ಹಡಿನ್ ಕೂಡ ಸನ್ ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿಯನ್ನು ತ್ಯಜಿಸಿದ್ದರು. ಹೀಗೆ ಆಸ್ಟ್ರೇಲಿಯಾ ಮೂಲದವರು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯನ್ನು ತ್ಯಜಿಸಿ ಹೊರ ನಡೆದಿರುವುದು ಸದ್ಯ ತುಸು ವಿವಾದಾತ್ಮಕ ರೂಪವನ್ನು ಪಡೆದುಕೊಳ್ಳುತ್ತಿದೆ.

Story first published: Friday, February 18, 2022, 11:19 [IST]
Other articles published on Feb 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X