ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಪುನಾರಂಭ : ಭಾರತ ಮತ್ತು ಬಾಂಗ್ಲಾದ ಪ್ರತಿಕ್ರಿಯೆಗೆ ಕಾಯುತ್ತಿದೆ ಶ್ರೀಲಂಕಾ

Sri Lanka Awaiting India and Bangladesh Responses Over July Tour

ಕೊರೊನಾ ವೈರಸ್ ಕಾರಣದಿಂದಾಗಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳೂ ಕಳೆದ ಎರಡು ತಿಂಗಳಿನಿಂದ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಇದೀಗ ಮತ್ತೆ ಕ್ರಿಕೆಟ್ ಆರಂಭಕ್ಕೆ ಕೆಲ ದೇಶಗಳು ಸಿದ್ಧತೆಯನ್ನು ನಡೆಸುತ್ತಿದೆ. ಈ ಮಧ್ಯೆ ಜುಲೈ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಿದ್ದ ಸರಣಿಗಾಗಿ ಶ್ರೀಲಂಕಾ ಎದುರು ನೋಡುತ್ತಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ಜುಲೈ ತಿಂಗಳಿನಲ್ಲಿ ಭಾರತದ ಜೊತೆಗೆ ಮತ್ತು ಬಾಂಗ್ಲಾ ದೇಶದ ಜೊತೆಗೆ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗೆ ಆಹ್ವಾನವನ್ನು ನೀಡಿತ್ತು. ಅದಕ್ಕಾಗಿ ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳಿಂದ ಬರುವ ಉತ್ತರಕ್ಕೆ ಎಸ್‌ಎಲ್‌ಸಿ ಎದುರು ನೋಡುತ್ತಿದೆ.

ತನ್ನ ಬಯೋಪಿಕ್‌ನಲ್ಲಿ ನಟನೆಗೆ ಸಿದ್ಧ ಆದರೆ ಕಂಡಿಷನ್ ಅಪ್ಲೈ ಎಂದ ವಿರಾಟ್ ಕೊಹ್ಲಿತನ್ನ ಬಯೋಪಿಕ್‌ನಲ್ಲಿ ನಟನೆಗೆ ಸಿದ್ಧ ಆದರೆ ಕಂಡಿಷನ್ ಅಪ್ಲೈ ಎಂದ ವಿರಾಟ್ ಕೊಹ್ಲಿ

ಶ್ರೀಲಂಕಾ ಕ್ರಿಕೆಟ್ ಮಂಡಳಿ ಭಾರತಕ್ಕೆ ಮೂರು ಏಕದಿನ ಮತ್ತು ಕೆಲ ಟಿ20 ಸರಣಿಗಾಗಿ ಪ್ರವಾಸ ಕೈಗೊಳ್ಳಲು ಆಹ್ವಾನವನ್ನು ನೀಡಿತ್ತು. ಇದೇ ಸಂದರ್ಭದಲ್ಲಿ ಬಾಂಗ್ಲಾದೇಶಕ್ಕೂ ಕೂಡ ಕೊರೊನಾ ವೈರಸ್ ಆರಂಭದ ಬಳಿಕ ಮೊದಲ ಬಾರಿಗೆ ಪ್ರವಾಸಕ್ಕೆ ಬರಲು ಆಹ್ವಾನವನ್ನು ಎಸ್‌ಎಲ್‌ಸಿ ನೀಡಿತ್ತು.

ಈ ಆಹ್ವಾನದ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಆಶ್ಲೆ ಡಿ ಸಿಲ್ವ ಪ್ರತಿಕ್ರಿಯಿಸಿದ್ದಾರೆ. ಭಾರತ ಅಥವಾ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಈ ಆಹ್ವಾನಕ್ಕೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಎರಡೂ ದೇಶಗಳ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ಐಪಿಎಲ್‌ ಇತಿಹಾಸದ ಐಪಿಎಲ್‌ ಇತಿಹಾಸದ "ಚೂಸಿ" ಭಾರತೀಯ ಬೌಲರ್‌ಗಳು ಇವರು!

ಇದೇ ಸಂದರ್ಭದಲ್ಲಿ ಆಶ್ಲೆ ಡಿ ಸಿಲ್ವ ಈ ಕ್ಷಣದವರೆಗೂ ಪ್ರವಾಸವನ್ನು ಮುಂದೂಡುವ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಭಾರತದ ಗೃಹಸಚಿವಾಲಯ ಬಿಡುಗಡೆ ಮಾಡಿದ ನಾಲ್ಕನೇ ಲಾಕ್‌ಡೌನ್ ಮಾರ್ಗಸೂಚಿಯನ್ವಯ ಕ್ರೀಡಾ ವಿಭಾಗಕ್ಕೆ ಒಂದಷ್ಟು ಸಡಿಲಿಕೆಯಾಗಿದ್ದು ಮುಂದೆ ಬಿಸಿಸಿಐ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

Story first published: Monday, May 18, 2020, 20:26 [IST]
Other articles published on May 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X