ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಯಸೂರ್ಯ, ಜಯವರ್ಧನೆ ಮಾತಿಗೆ ಲಂಕಾದ ಬೃಹತ್ ಸ್ಟೇಡಿಯಮ್ ನಿರ್ಮಾಣ ರದ್ದುಗೊಳಿಸಿದ ಪ್ರಧಾನಿ

Sri Lankan Pm Scrapped Build Stadium Plane Ofter Discussion With Jayawardene And Jayasuriya

40 ಮಿಲಿಯನ್ ಡಾಲರ್ ಮೊತ್ತದಲ್ಲಿ ಶ್ರೀಲಂಕಾದಲ್ಲಿ ಕ್ರಿಕೆಟ್ ಸ್ಟೇಡಿಯಮ್ ನಿರ್ಮಾಣದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆದರೆ ಆ ನಿರ್ಧಾರವನ್ನು ಶ್ರೀಲಂಕಾ ಪ್ರಧಾನಮಂತ್ರಿ ಕೈಬಿಟ್ಟಿದ್ದಾರೆ. ಶ್ರೀಲಂಕಾದ ದಿಗ್ಗಜ ಆಟಗಾರರಾದ ಸನತ್ ಜಯಸೂರ್ಯ ಮತ್ತು ಜಯವರ್ಧನೆ ಜೊತೆಗಿನ ಮಾತಿನ ಬಳಿಕ ಶ್ರೀಲಂಕಾ ಪ್ರಧಾನಿ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ದುಬಾರಿ ವೆಚ್ಚದಲ್ಲಿ ಶ್ರೀಲಂಕಾದದಲ್ಲಿ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ನಿರ್ಮಾಣ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಆದರೆ ಇದು ದುಂದುವೆಚ್ಚ. ಈಗ ಇರುವ ಕ್ರೀಡಾಂಗಣಗಳನ್ನೇ ಶ್ರೀಲಂಕಾದಲ್ಲಿ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿಲ್ಲ. ಮತ್ತೊಂದು ಬೃಹತ್ ಸ್ಟೇಡಿಯನ್ ನಿರ್ಮಾಣ ಬಿಳಿಯಾನೆಯನ್ನು ಸಾಕಿದಂತೆ ಎಂದು ಜಯಸೂರ್ಯ ಮತ್ತು ಜಯವರ್ಧನೆ ಶ್ರೀಲಂಕಾ ಪ್ರಧಾನಿಎ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಐಸಿಸಿ ಮುಖ್ಯಸ್ಥರ ಸ್ಥಾನಕ್ಕೆ ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ: ಗ್ರೇಮ್ ಸ್ಮಿತ್ಐಸಿಸಿ ಮುಖ್ಯಸ್ಥರ ಸ್ಥಾನಕ್ಕೆ ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ: ಗ್ರೇಮ್ ಸ್ಮಿತ್

ಕ್ರೀಡಾಂಗಣಕ್ಕೆ ಬಳಸಲು ಉದ್ದೇಶಿಸಿರುವ ಈ ಮೊತ್ತವನ್ನು ಯುವ ಕ್ರಿಕೆಟಿಗರ ಸಹಾಯಕ್ಕಾಗಿ ಬಳಿಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯವನ್ನು ಈ ಇಬ್ಬರೂ ಕ್ರಿಕೆಟಿಗರು ತಿಳಿಸಿದ್ದಾರೆ. ಈ ಮಾತಿಗೆ ಸಹಮತವನ್ನು ಶ್ರೀಲಂಕಾದ ಪ್ರಧಾನಿ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶ್ರೀಲಂಕಾದ ಪ್ರಧಾನಿ ಮಹಿಂದ ರಾಜಪಕ್ಷ ಶ್ರೀಲಂಕಾದ ಹೊಮಗಾಮದಲ್ಲಿ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದ ಸ್ಟೇಡಿಯಮ್ ವಿಚಾರವಾಗಿ ಹಿರಿಯ ಕ್ರಿಕೆಟಿಗರ ಜೊತೆಗೆ ಮಾತುಕತೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಇಷ್ಟು ಮೊತ್ತದ ಹಣವನ್ನು ಸ್ಟೇಡಿಯಮ್‌ನ ಬದಲಾಗಿ ಕ್ರಿಕೆಟ್ ಶಾಲೆಯನ್ನು ನಿರ್ಮಾಣ ಮಾಡುವುದು ಉತ್ತಮ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಗೊತ್ತಿರುವುದನ್ನೇ ಮಾತನಾಡಬೇಡ: ಬಾಬರ್ ವಿರುದ್ಧ ಗುಡುಗಿದ ಅಖ್ತರ್, ಲತೀಫ್ಗೊತ್ತಿರುವುದನ್ನೇ ಮಾತನಾಡಬೇಡ: ಬಾಬರ್ ವಿರುದ್ಧ ಗುಡುಗಿದ ಅಖ್ತರ್, ಲತೀಫ್

2005ರಿಂದ 2010ರ ಮಧ್ಯೆ ರಾಜಕಪಕ್ಷ ಶ್ರೀಲಂಕಾದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ 35,000 ಪ್ರೇಕ್ಷಕರ ಸಾಮರ್ಥ್ಯದ ಕ್ರೀಡಾಂಗಣವನ್ನು ಅವರ ತವರು ಕ್ಷೇತ್ರ ಹಂಬಂತೊಟದಲ್ಲಿ ನಿರ್ಮಾಣ ಮಾಡಿದ್ದರು. ಆದರೆ ಆದರೆ ಈ ಮೈದಾನವನ್ನು ನಿರ್ವಹಣೆ ಮಾಡುವುದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಪಾಲಿಗೆ ಬಿಳಿಯಾನೆಯನ್ನು ಸಾಕಿದಂತಾಗಿದೆ.

Story first published: Friday, May 22, 2020, 15:47 [IST]
Other articles published on May 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X