ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌: ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಆವೇಶ್ ಖಾನ್

T20 World Cup 2021: Pacer Avesh Khan set to join Team India as net bowler

ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್‌ನ ವೇಗಿ ಆವೇಶ್ ಖಾನ್ ಮುಂಬರಲಿರುವ ಟಿ20 ವಿಶ್ವಕಪ್‌ ಟೂರ್ನಿ ವೇಳೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಿ20 ವಿಶ್ವಕಪ್‌ ವೇಳೆ ಭಾರತೀಯ ತಂಡಕ್ಕೆ ನೆಟ್ ಬೌಲರ್ ಆಗಿ ಖಾನ್ ತಂಡದ ಜೊತೆಗಿರಲಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ ಮುಕ್ತಾಯದ ಬಳಿಕ ಖಾನ್ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲೇ ಉಳಿದುಕೊಳ್ಳುವಂತೆ ಖಾನ್ ಅವರಿಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಹೇಳಿದೆ.

ಕಪ್‌ ಕೈ ತಪ್ಪಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮಿನ ಭಾವನಾತ್ಮಕ ಕ್ಷಣಗಳು: ವಿಡಿಯೋಕಪ್‌ ಕೈ ತಪ್ಪಿದ ಬಳಿಕ ಆರ್‌ಸಿಬಿ ಡ್ರೆಸ್ಸಿಂಗ್ ರೂಮಿನ ಭಾವನಾತ್ಮಕ ಕ್ಷಣಗಳು: ವಿಡಿಯೋ

24ರ ಹರೆಯದ ಆವೇಶ್ ಖಾನ್ ಟಿ20 ವಿಶ್ವಕಪ್‌ ವೇಳೆ ನೆಟ್ ಬೌಲರ್ ಆಗಿ ಜೊತೆಗಿರುವ ಎರಡನೇ ವೇಗಿಯಾಗಿ ಕಾಣಿಸಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ವೇಗಿ ಜಮ್ಮು ಆ್ಯಂಡ್ ಕಾಶ್ಮೀರದ ಉಮ್ರನ್ ಮಲಿಕ್ ಅವರನ್ನೂ ಈಗಾಗಲೇ ಬಿಸಿಸಿಐ ತಂಡಕ್ಕೆ ನೆಟ್ ಬೌಲರ್ ಆಗಿ ಹೆಸರಿಸಿದೆ.

ಮೀಸಲು ಆಟಗಾರನಾಗಲು ಆವೇಶ್‌ಗೆ ಅವಕಾಶ

ಮೀಸಲು ಆಟಗಾರನಾಗಲು ಆವೇಶ್‌ಗೆ ಅವಕಾಶ

ಟಿ20 ವಿಶ್ವಕಪ್‌ ವೇಳೆ ನೆಟ್ ಬೌಲರ್ ಆಗಿ ತಂಡದ ಜೊತೆಗಿರುವ ಆವೇಶ್ ಖಾನ್‌ಗೆ ಮೀಸಲು ಆಟಗಾರನಾಗಿ ತಂಡದ ಜೊತೆಗಿರುವ ಅವಕಾಶವೂ ಇದೆ. ಅಕ್ಟೋಬರ್ 17ರ ಭಾನುವಾರ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಖಾನ್ ಮೀಸಲು ಆಟಗಾರರಾಗಿ ತಂಡದ ಜೊತೆಗಿರುವ ಸಾಧ್ಯತೆಯಿದೆ. ಅಕ್ಟೋಬರ್ 24ರಿಂದ ಭಾರತದ ಸ್ಪರ್ಧೆ ಆರಂಭಗೊಳ್ಳಲಿದೆ. ಮೊದಲ ಪಂದ್ಯವಾಗಿ ಪಾಕಿಸ್ತಾನ ತಂಡದ ವಿರುದ್ಧ ಭಾರತದ ಸ್ಪರ್ಧೆ ನಡೆಯಲಿದೆ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಖಾನ್ ಪ್ರತಿಭೆ ಗುರುತಿಸಿಕೊಂಡಿದೆ. 2021ರ ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಆವೇಶ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಆವೇಶ್ ಖಾನ್ ಭಾರತದ ಅಂಡರ್-19 ತಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಅಗ್ರ ಸ್ಥಾನದಲ್ಲಿ ಆರ್‌ಸಿಬಿಯ ಹರ್ಷಲ್ ಪಟೇಲ್

ಅಗ್ರ ಸ್ಥಾನದಲ್ಲಿ ಆರ್‌ಸಿಬಿಯ ಹರ್ಷಲ್ ಪಟೇಲ್

ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಆವೇಶ್ ಖಾನ್ ದ್ವಿತೀಯ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹರ್ಷಲ್ ಪಟೇಲ್ ಮೊದಲನೇ ಸ್ಥಾನದಲ್ಲಿದ್ದಾರೆ. ಆವೇಶ್ 15 ಇನ್ನಿಂಗ್ಸ್‌ಗಳಲ್ಲಿ 23 ವಿಕೆಟ್ ಪಡೆದಿದ್ದರೆ, ಹರ್ಷಲ್ 15 ಇನ್ನಿಂಗ್ಸ್‌ಗಳಲ್ಲಿ 32 ವಿಕೆಟ್‌ ದಾಖಲೆ ಹೊಂದಿದ್ದಾರೆ. ಆರ್‌ಸಿಬಿ ಈಗಾಗಲೇ ಎಲಿಮಿನೇಟರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತು ಹೊರ ಬಿದ್ದಿದೆ. ಡೆಲ್ಲಿ ದ್ವಿತೀಯ ಕ್ವಾಲಿಫೈಯರ್‌ನಲ್ಲಿ ಕೆಕೆಆರ್ ವಿರುದ್ಧ ಆಡಲಿದೆ. ಆದರೆ ವಿಕೆಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಟೇಲ್ ಅವರನ್ನು ಕೆಳಗಿಳಿಸಲು ಆವೇಶ್ ಖಾನ್‌ಗೆ ಸಾಧ್ಯವಿಲ್ಲ.

Virat Kohli ಅಸಲಿಗೆ Umpire ವಿರುದ್ಧ ಕಿಡಿಕಾರಿದ್ದೇಕೆ | Oneindia Kannada
ಆಯ್ಕೆದಾರರು ಬಯಸಿದರೆ ಖಾನ್‌ಗೆ ಭಡ್ತಿ

ಆಯ್ಕೆದಾರರು ಬಯಸಿದರೆ ಖಾನ್‌ಗೆ ಭಡ್ತಿ

"ಮಿಕ್ಸ್‌ ತಂಡದಲ್ಲಿ ಆವೇಶ್ ಖಾನ್ ಅವರಿಗೆ ಅವಕಾಶ ನೀಡಲು ರಾಷ್ಟ್ರೀಯ ಆಯ್ಕೆದಾರರು ನಿರ್ಧರಿಸಿದ್ದಾರೆ. ಸದ್ಯಕ್ಕೆ ಖಾನ್ ನೆಟ್ ಬೌಲರ್ ಆಗಿ ತಂಡದ ಜೊತೆಗಿರಲಿದ್ದಾರೆ. ಆದರೆ ಆಯ್ಕೆದಾರರು ಬಯಸಿದರೆ ಖಾನ್‌ಗೆ ಭಡ್ತಿ ಸಿಗಲೂಬಹುದು," ಎಂದು ಆಯ್ಕೆ ಸಮಿತಿಗೆ ಹತ್ತಿರದ ಬಿಸಿಸಿಐ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ. ಆವೇಶ್ 142 kmphನಿಂದ 145 kmph ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಹೀಗಾಗಿ ಖಾನ್ ಆಯ್ಕೆದಾರರ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ಅಕ್ಟೋಬರ್‌ 17ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ ನವೆಂಬರ್‌ 14ಕ್ಕೆ ಕೊನೆಗೊಳ್ಳಲಿದೆ. 16 ತಂಡಗಳ ಈ ಅದ್ದೂರಿ ಕ್ರಿಕೆಟ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್‌ ಮತ್ತು ಓಮನ್‌ನಲ್ಲಿ ನಡೆಯಲಿದೆ. ಗ್ರೂಪ್‌-ಎ, ಗ್ರೂಪ್‌-ಬಿ, ಗ್ರೂಪ್‌-1, ಗ್ರೂಪ್-2 ಹೀಗೆ ನಾಲ್ಕು ಗುಂಪುಗಳಲ್ಲಿ ಟೂರ್ನಿ ನಡೆಯಲಿದೆ. ಇದರಲ್ಲಿ ಭಾರತ ತಂಡ ಗ್ರೂಪ್‌-2ರಲ್ಲಿದೆ.

Story first published: Wednesday, October 13, 2021, 9:54 [IST]
Other articles published on Oct 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X