ಟಿ20 ವಿಶ್ವಕಪ್‌ನಲ್ಲಿ ಬಲು ದೊಡ್ಡ ಬದಲಾವಣೆಗೆ ಐಸಿಸಿ ಗ್ರೀನ್‌ ಸಿಗ್ನಲ್: ವರದಿ

ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಐಸಿಸಿ ಚಿಂತನೆಯನ್ನು ನಡೆಸುತ್ತಿದೆ. ಟಿ20 ವಿಶ್ವಕಪ್‌ನಲ್ಲಿ 20 ತಂಡಗಳಿಗೆ ಅವಕಾಶವನ್ನು ನೀಡಲು ಐಸಿಸಿ ಯೋಜನೆ ರೂಪಿಸುತ್ತಿದೆ. ಕ್ರಿಕೆಟ್‌ಅನ್ನ ವಿಶ್ವಾದ್ಯಂತ ಪಸರಿಸುವ ದೃಷ್ಟಿಯಿಂದ ಈ ಬದಲಾವಣೆಗೆ ಐಸಿಸಿ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ನ ಚುಟುಕು ಮಾದರಿ ವಿಶ್ವಾದ್ಯಂತ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹೀಗಾಗಿ ವಿಶ್ವಕಪ್‌ನಂತಾ ವೇದಿಕೆಯಲ್ಲಿ ಹೆಚ್ಚಿನ ತಂಡಗಳಿಗೆ ಅವಕಾಶವನ್ನು ನೀಡಿದರೆ ಕ್ರೀಡೆ ಮತ್ತಷ್ಟು ಬೆಳವಣಿಗೆಗೆ ಕಾರಣವಾಗಲಿದೆ ಎಂಬುದು ಐಸಿಸಿಯ ಲೆಕ್ಕಾಚಾರವಾಗಿದೆ.

ಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕಐಪಿಎಲ್ ಪುನರಾರಂಭಿಸೋದು ನಿಜಕ್ಕೂ ಕಷ್ಟ: ರಾಜಸ್ಥಾನ್ ಮಾಲೀಕ

ಯಾವಾಗ ಈ ಬದಲಾವಣೆ

ಯಾವಾಗ ಈ ಬದಲಾವಣೆ

ಈಗ ಟಿ20 ವಿಶ್ವಕಪ್‌ನಲ್ಲಿ 16 ತಂಡಗಳು ಭಾಗಿಯಾಗುತ್ತಿದೆ. 2021ರ ವಿಶ್ವಕಪ್ ಟೂರ್ನಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ. 2024ರ ಟಿ20 ವಿಶ್ವಕಪ್‌ನಿಂದ ಈ ಬದಲಾವಣೆಗಳನ್ನು ಮಾಡಿಕೊಳ್ಳುವ ಸಂಭವವಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಟಿ20 ವಿಶ್ವಕಪ್‌ಅನ್ನು ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಿ ಟೂರ್ನಿ ಆಯೋಜಿಸುವ ಸಾಧ್ಯತೆಯಿದೆ.

ಏಕದಿನ ವಿಶ್ವಕಪ್‌ನಲ್ಲಿಯೂ ಈ ಬದಲಾವಣೆ ಸಾಧ್ಯತೆ

ಏಕದಿನ ವಿಶ್ವಕಪ್‌ನಲ್ಲಿಯೂ ಈ ಬದಲಾವಣೆ ಸಾಧ್ಯತೆ

ಮಹಿಳಾ ವಿಭಾಗದ ಟೂರ್ನಮೆಂಟ್‌ನಲ್ಲಿ ಈ ಬದಲಾವಣೆಯನ್ನು ಮಾಡಿಕೊಳ್ಳುತ್ತಿರುವುದಾಗಿ ಐಸಿಸಿ ಈಗಾಗಲೇ ಖಚಿತಪಡಿಸಿದೆ. ಈ ಬದಲಾವಣೆಯನ್ನು ಮುಂದಿನ ದಿನಗಳಲ್ಲಿ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಅಳವಡಿಸಿಕೊಳ್ಳುವ ಸಾಧ್ಯತೆಯಿದೆ.

ನಿರಂತರವಾಗಿ ತಂಡಗಳ ಸಂಖ್ಯೆ ಕಡಿಮೆ

ನಿರಂತರವಾಗಿ ತಂಡಗಳ ಸಂಖ್ಯೆ ಕಡಿಮೆ

ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಬಂದಿತ್ತು ಐಸಿಸಿ. ಟೂರ್ನಿಯ ಪ್ರಸಾರಕರ ಒತ್ತಡವೇ ಇದಕ್ಕೆ ಕಾರಣವಾಗಿದೆ. ಪಂದ್ಯಗಳೆಲ್ಲಾ ಏಕಮುಖಿಯಾಗುವ ಸಾಧ್ಯತೆಯ ಭೀತಿಯಿಂದ ಬಲಿಷ್ಠ ತಂಡಗಳನ್ನಷ್ಟೇ ಉಳಿಸಿಕೊಳ್ಳುವ ಒತ್ತಡ ಐಸಿಸಿ ಮುಂದಿತ್ತು.

2019ರ ವಿಶ್ವಕಪ್‌ನಲ್ಲಿ 10 ತಂಡಗಳು

2019ರ ವಿಶ್ವಕಪ್‌ನಲ್ಲಿ 10 ತಂಡಗಳು

2007ರಲ್ಲಿ 16 ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಭಾಗಿಯಾಗಿತ್ತು. ಇದು 2011 ಹಾಗೂ 2015ರಲ್ಲಿ 14 ತಂಡಗಳಿಗೆ ಇಳಿಕೆಯಾಗಿತ್ತು. 2019ರ ವಿಶ್ವಕಪ್‌ನಲ್ಲಿ ಕೇವಲ 10 ತಂಡಗಳು ಪಾಲ್ಗೊಂಡಿದ್ದವು. ಆದರೆ ಇದರಲ್ಲಿಯೂ ಮುಂದಿನ ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚಿದೆ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, May 14, 2021, 14:08 [IST]
Other articles published on May 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X