ಬೆಂಗಳೂರಲ್ಲಿ ಸಚಿನ್ ಸಾಗಾ ಕ್ರಿಕೆಟ್ ಗೇಮ್ ಲೋಕಾರ್ಪಣೆ

Posted By:

ಬೆಂಗಳೂರು, ಡಿಸೆಂಬರ್ 07: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಬಹು ನಿರೀಕ್ಷಿತ ಗೇಮ್ 'ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ಸ್' ಬೆಂಗಳೂರಿನಲ್ಲಿ ಗುರುವಾರದಂದು ಲೋಕಾರ್ಪಣೆ ಮಾಡಿದರು.

ಡಿಜಿಟಲ್ ಎಂಟರ್ ಟೈನ್ಮೆಂಟ್ ಹಾಗೂ ಗೇಮಿಂಗ್ ಕಂಪನಿ ಜೆಟ್ ಸಿಂಥೆಸಿಸ್ ವಿನ್ಯಾಸಗೊಳಿಸಿರುವ ಈ ಗೇಮ್ ಸಚಿನ್ ಅವರ ಅಧಿಕೃತ ಗೇಮಿಂಗ್ ಅಪ್ಲಿಕೇಷನ್ ಆಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ಅವರ ಆಟದ ಅನುಭವ ಪಡೆಯಬಹುದು.

Tendulkar launches ‘Sachin Saga Cricket Champions’

'ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ಸ್' ಅಧಿಕೃತ ಮೊಬೈಲ್ ಗೇಮಿಂಗ್ ಆಪ್ ಲೋಕಾರ್ಪಣೆ ಮಾಡಿದ ಸಚಿನ್ ಅವರು ಮಾತನಾಡಿ. ಆಟದ ಜತೆಗೆ ನನ್ನ ಜೀವನ ಪಯಣವನ್ನು ಹತ್ತಿರದಿಂದ ಕಾಣಲು ಎಲ್ಲಾ ಅಭಿಮಾನಿಗಳಿಗೆ ಇದು ಸೂಕ್ತವಾದ ವೇದಿಕೆ ಒದಗಿಸಲಿದೆ.

Tendulkar launches ‘Sachin Saga Cricket Champions’

ಎಲ್ಲಾ ಬಗೆಯ ಫೋನ್ ಗಳಲ್ಲಿ ಈ ಗೇಮ್ ಆಡುವಂತೆ ಇರಬೇಕು ಎಂದು ಕೇಳಿಕೊಂಡಿದ್ದೆ. ಅದರಂತೆ ವಿನ್ಯಾಸಗೊಳಿಸಲಾಗಿದೆ ಎಂದರು.

ಲೆಜೆಂಡರಿ ಮೋಡ್ ನಲ್ಲಿ ಮಾಸ್ಟರ್ ಬ್ಲಾಸ್ಟರ್ ನೇರವಾಗಿ ಕಣಕ್ಕಿಳಿಯಲಿದ್ದು, 24 ವರ್ಷಗಳ ಜರ್ನಿಯ ಅನುಭವ ಕಾಣಬಹುದು.

ಗೇಮ್ ಪ್ಲೇನಲ್ಲಿ ಆಟದ ಅಸಲಿ ಮಜಾ ಅನುಭವಿಸಬಹುದು, ರಿಪ್ಲೇ ಕೆಮೆರಾದ ಮೂಲಕ ಸ್ಲೋ ಮೋಷನ್ ಚಿತ್ರಣವನ್ನು ಪಡೆಯಬಹುದು.

Story first published: Thursday, December 7, 2017, 21:15 [IST]
Other articles published on Dec 7, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ