ಒಂದು ಔಷಧಿಗೆ 16 ಕೋಟಿ; ಮುಗ್ಧ ಮಗುವಿನ ಜೀವ ಉಳಿಸಿ ಮಾನವೀಯತೆ ಮೆರೆದ ಕಿಂಗ್ ಕೊಹ್ಲಿ

ಕೋಟಿಗಟ್ಟಲೆ ಹಣ ಕೊಟ್ಟು ಮಗುವಿನ ಜೀವ ಉಳಿಸಿದ ವಿರಾಟ್ ಕೊಹ್ಲಿ | Oneindia Kannada

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಇತ್ತೀಚಿಗಷ್ಟೆ ಕೆಟ್ಟೊ ಅಭಿಯಾನದಡಿ ಕೊರೊನಾ ವಿರುದ್ಧದ ಹೋರಾಟಕ್ಕೆ 11 ಕೋಟಿ ಹಣವನ್ನು ಸಂಗ್ರಹಿಸಿದ್ದರು. ಈ 11 ಕೋಟಿಯಲ್ಲಿ ವಿರುಷ್ಕಾ ದಂಪತಿಯದ್ದು 2 ಕೋಟಿ ದೇಣಿಗೆ ಕೂಡ ಇತ್ತು. ಇಷ್ಟು ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ ಬೆನ್ನಲ್ಲೇ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ತಾಯಿಯ ಚಿಕಿತ್ಸೆಗೆ ಹಣದ ಕೊರತೆ ಉಂಟಾದಾಗ ವಿರಾಟ್ ಕೊಹ್ಲಿ 6.67 ಲಕ್ಷ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು.

ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್ಆರ್‌ಸಿಬಿ ವಿರುದ್ಧ ನಡೆದಿದ್ದ ಆ ಘಟನೆ ನೆನೆದು ಖುಷಿಪಟ್ಟ ಸೂರ್ಯಕುಮಾರ್ ಯಾದವ್

ಇದೀಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದ ಮುಗ್ಧ ಮಗುವಿನ ಪ್ರಾಣ ಉಳಿಸುವ ಮೂಲಕ ಮತ್ತೆ ಮಾನವೀಯತೆ ಮೆರೆದಿದ್ದಾರೆ. ಅಯಾನ್ಷ್ ಗುಪ್ತಾ ಎಂಬ ಪುಟ್ಟ ಮಗು ಬೆನ್ನುಮೂಳೆಯ ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿತ್ತು. ಈ ಖಾಯಿಲೆಯ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ಮೌಲ್ಯದ ಔಷಧಿಯ ಅಗತ್ಯವಿತ್ತು. ಹೀಗಾಗಿ ಮಗುವಿನ ಪೋಷಕರು ಹಣ ಸಂಗ್ರಹಿಸಲು ಆರಂಭಿಸಿದ್ದರು.

 ಕೊಹ್ಲಿ ಅಲ್ಲ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ; ಇಲ್ಲಿದೆ ಟಾಪ್ 5 ನಾಯಕರ ಪಟ್ಟಿ ಕೊಹ್ಲಿ ಅಲ್ಲ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ; ಇಲ್ಲಿದೆ ಟಾಪ್ 5 ನಾಯಕರ ಪಟ್ಟಿ

ಈ ವಿಷಯವನ್ನು ತಿಳಿದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ 16 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ಮಗುವಿನ ಪೋಷಕರಿಗೆ ಸರಿಯಾದ ಸಮಯಕ್ಕೆ ಒದಗಿಸಿ ಔಷಧಿ ಕೊಡಿಸುವುದರ ಮೂಲಕ ಮುಗ್ಧ ಮಗುವಿನ ಪ್ರಾಣವನ್ನು ಉಳಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಾಡಿರುವ ಈ ಅತ್ಯುತ್ತಮ ಕೆಲಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಆನ್‌ಫೀಲ್ಡ್ ಮತ್ತು ಆಫ್‌ಫೀಲ್ಡ್ ಎರಡರಲ್ಲೂ ಕಿಂಗ್

ಆನ್‌ಫೀಲ್ಡ್ ಮತ್ತು ಆಫ್‌ಫೀಲ್ಡ್ ಎರಡರಲ್ಲೂ ಕಿಂಗ್

ವಿರಾಟ್ ಕೊಹ್ಲಿ ಮಾಡಿರುವ ಈ ಸಹಾಯಗಳನ್ನು ನೋಡಿದ ನೆಟ್ಟಿಗರು ವಿರಾಟ್ ಕೊಹ್ಲಿ ಮೈದಾನದಲ್ಲಿ ಮತ್ತು ಮೈದಾನದ ಹೊರಗಡೆ, ಎರಡೂ ಕಡೆ ಕೂಡ ಕಿಂಗ್ ಎಂದು ವಿರಾಟ್ ಕೊಹ್ಲಿಯ ಸಹಾಯ ಗುಣವನ್ನು ಕೊಂಡಾಡಿದ್ದಾರೆ.

ಸಹಾಯ ಬೇಕು ಎಂದ ಕೂಡಲೇ ಮಾಜಿ ಕ್ರಿಕೆಟರ್ ತಾಯಿಗೆ ದೊಡ್ಡ ಮೊತ್ತ ನೀಡಿದ್ರು ಕೊಹ್ಲಿ

ಸಹಾಯ ಬೇಕು ಎಂದ ಕೂಡಲೇ ಮಾಜಿ ಕ್ರಿಕೆಟರ್ ತಾಯಿಗೆ ದೊಡ್ಡ ಮೊತ್ತ ನೀಡಿದ್ರು ಕೊಹ್ಲಿ

ಕೆಲವು ದಿನಗಳ ಹಿಂದಷ್ಟೇ ಹೈದರಾಬಾದ್ ತಂಡದ ಮಾಜಿ ಆಟಗಾರ್ತಿ ಶ್ರಾವಂತಿ ನಾಯ್ಡು ಅವರ ತಾಯಿಯ ಚಿಕಿತ್ಸೆಗೆ 6.77 ಲಕ್ಷ ರೂಪಾಯಿಗಳ ಅಗತ್ಯತೆಯಿತ್ತು. ಈ ವಿಷಯವನ್ನು ಭಾರತದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ವಿರಾಟ್ ಕೊಹ್ಲಿಗೆ ಮುಟ್ಟಿಸಿದ ಕೂಡಲೇ ಕೊಹ್ಲಿ 6.77 ಲಕ್ಷ ರೂಪಾಯಿಗಳನ್ನು ನೀಡಿ ಶ್ರಾವಂತಿ ನಾಯ್ಡು ತಾಯಿಯ ಚಿಕಿತ್ಸೆಗೆ ನೆರವಾದರು.

ಕೊಹ್ಲಿ ಮಾತ್ರ ಅಲ್ಲ, ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ್ದೂ ಕೂಡ ದೊಡ್ಡ ಮನಸು

ಕೊಹ್ಲಿ ಮಾತ್ರ ಅಲ್ಲ, ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ್ದೂ ಕೂಡ ದೊಡ್ಡ ಮನಸು

ಒಂದೆಡೆ ವಿರಾಟ್ ಕೊಹ್ಲಿ ತಮ್ಮ ಕೈಲಾದಷ್ಟು ಸಹಾಯವನ್ನು ಕಷ್ಟದಲ್ಲಿರುವವರಿಗೆ ಮಾಡುತ್ತಿದ್ದರೆ ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರು ಇತ್ತೀಚೆಗಷ್ಟೇ ಕೊರೊನಾ ವಿರುದ್ಧದ ಹೋರಾಟಕ್ಕೆ ಬರೋಬ್ಬರಿ 45 ಕೋಟಿ ರೂಪಾಯಿಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆದಿತ್ತು.

For Quick Alerts
ALLOW NOTIFICATIONS
For Daily Alerts
Story first published: Tuesday, May 25, 2021, 14:26 [IST]
Other articles published on May 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X