ಪಂದ್ಯದ ವೇಳೆ ವಾಕಿ-ಟಾಕಿ ಬಳಕೆ, ವಿರಾಟ್ ಕೊಹ್ಲಿಗೆ ಕ್ಲೀನ್ ಚಿಟ್

Posted By:

ನವದೆಹಲಿ, ನವೆಂಬರ್ 03 :ವಾಕಿ-ಟಾಕಿ ಬಳಕೆ ಮಾಡಿ ವಿವಾದಕ್ಕೆ ಕಾರಣವಾಗಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ಲೀನ್ ಚಿಟ್ ನೀಡಿದೆ.

ನೆಹ್ರಾ ವಿದಾಯದ ಪಂದ್ಯಕ್ಕೆ ಗೆಲುವಿನ ಉಡುಗೊರೆ

ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ನವದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನವೆಂಬರ್ 01 ರಂದು ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟ್ವೆ-20 ಪಂದ್ಯದ ವೇಳೆ ಡಗೌಟ್ ನಲ್ಲಿ ಕುಳಿತುಕೊಂಡು ವಾಕಿ-ಟಾಕಿ ಬಳಕೆ ಮಾಡಿ ವಿವಾದಕ್ಕೀಡಾಗಿದ್ದರು.

Virat Kohli Uses Walkie-Talkie During Match, ICC Says He Did Nothing Wrong

ಪಂದ್ಯದ ವೇಳೆ ಅಂಪೈರ್, ಮ್ಯಾಚ್ ರೆಫರಿ ಮತ್ತು ಆಟಗಾರರು ವಾಕಿ-ಟಾಕಿ ಬಳಕೆ ಮಾಡಬಹುದಾಗಿದೆ ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತ್ವರಿತಗತಿಯಲ್ಲಿ 9 ಸಾವಿರ ರನ್ : ಟಾಪ್ 5 ಆಟಗಾರರಲ್ಲಿ ಕೊಹ್ಲಿ ನಂ.1

ವಿರಾಟ್ ಕೊಹ್ಲಿ ಅರು ವಾಕಿ-ಟಾಕಿ ಬಳಸಲು ಐಸಿಸಿ ಭ್ರಷ್ಟಾಚಾರ ವಿರೋಧಿ ಘಟಕ ಮತ್ತು ಬಿಸಿಸಿಐಯಿಂದ ಈ ಮೊದಲೇ ಅನುಮತಿ ಪಡೆದಿದ್ದರು ಎಂದು ಐಸಿಸಿ ಸ್ಪಷ್ಟಪಡಿಸಿದೆ.

Virat Kohli Uses Walkie-Talkie During Match, ICC Says He Did Nothing Wrong

ಡಗೌಟ್ ನಲ್ಲಿ ಸಹ ಆಟಗಾರರೊಂದಿಗೆ ಕುಳಿತುಕೊಂಡಿದ್ದ ವಿರಾಟ್ ಕೊಹ್ಲಿ ವೈರ್‌ ಲೆಸ್ ಉಪಕರಣದಲ್ಲಿ ಪೆವಿಲಿಯನ್ ಗೆ ಸಂಪರ್ಕ ಮಾಡುತ್ತಿದ್ದರು.

ಇದು ಟಿ.ವಿಯಲ್ಲಿ ಪ್ರಸಾರವಾಗಿತ್ತು. ಅಲ್ಲದೆ ವಿರಾಟ್ ಕೊಹ್ಲಿ ವಾಕಿ-ಟಾಕಿ ಬಳಕೆ ಮಾಡುವ ಮೂಲಕ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

Story first published: Friday, November 3, 2017, 8:25 [IST]
Other articles published on Nov 3, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ