ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕರ್ನಾಟಕ ಫುಟ್ಬಾಲ್ ಗೆ ಮತ್ತೊಂದು ಹಿರಿಮೆಯ ಗರಿ 'ಬಿಡಿಯುಎಫ್ಎ'

Bengaluru Dream United: Another feather in the crown of Karnataka football

ಬೆಂಗಳೂರು, ಸೆಪ್ಟೆಂಬರ್ 3: ಉನ್ನತ ದರ್ಜೆಯ ಫುಟ್ಬಾಲ್ ಕೇಂದ್ರವಾದ ಬೆಂಗಳೂರು ಡ್ರೀಮ್ ಯುನೈಟೆಡ್ ನಿಂದ ತರಬೇತಿ ಪಡೆದ ವೃತ್ತಿಪರ ಫುಟ್ಬಾಲ್ ಆಟಗಾರರ ತಂಡವೊಂದು ಕಣಕ್ಕಿಳಿಯಲಿದೆ. ಬೆಂಗಳೂರು ಡ್ರೀಮ್ ಯುನೈಟೆಡ್ ಎಂದು ತಂಡಕ್ಕೆ ಹೆಸರಿಡಲಾಗಿದ್ದು, ಈ ಬಾರಿಯ ಸೂಪರ್ ಡಿವಿಷನ್ ಲೀಗ್ ನಲ್ಲಿ ಸ್ಪರ್ಧೆಗಿಳಿಯಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಲೆಸ್ಟರ್ ಕುಕ್ ನಿವೃತ್ತಿ ಘೋಷಣೆಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಲೆಸ್ಟರ್ ಕುಕ್ ನಿವೃತ್ತಿ ಘೋಷಣೆ

ಸೋಮವಾರ (ಸೆಪ್ಟೆಂಬರ್ 3) ಬೆಂಗಳೂರಿನ ಆಕ್ಟೇವ್ ಸೂಟ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಡ್ರೀಮ್ ಯುನೈಟೆಡ್ ಫುಟ್ಬಾಲ್ ಅಕಾಡೆಮಿ (ಬಿಡಿಯುಎಫ್ಎ) ತಂಡಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಫುಟ್ಬಾಲ್ ಸಂಸ್ಕೃತಿಗೆ ಹೊಸ ಆಯಾಮನ್ನು ನೀಡುವ ಉದ್ದೇಶದಿಂದ ಹೊಸ ತಂಡ ಮುಂದಡಿಯಿಟ್ಟಿತು.

ಡ್ರೀಮ್ ಯುನೈಟೆಡ್ ತಂಡದ ಸ್ಥಾಪಕ, ಭಾರತೀಯ ರಕ್ಷಣಾ ಸಚಿವಾಲಯದ ಫುಟ್ಬಾಲ್ ತಂಡ, ಸಿಐಎಲ್ ತಂಡದ ಆಟಗಾರನಾಗಿ ಹಾಗೂ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಶರತ್ ಕಾಮತ್ ಅವರನ್ನೊಳಗೊಂಡ ಹೊಸ ತಂಡ ಈ ಬಾರಿ ಸೂಪರ್ ಲೀಗ್ ಡಿವಿಷನ್ ನಲ್ಲಿ ಮೈದಾನಕ್ಕಿಳಿಯಲಿದೆ.

ಫುಟ್ಬಾಲ್ ಬೆಳೆಸುವುದೇ ಉದ್ದೇಶ

ಫುಟ್ಬಾಲ್ ಬೆಳೆಸುವುದೇ ಉದ್ದೇಶ

ಶರತ್ ಅವರು ಮಾತನಾಡಿ, 'ವಿದೇಶಿ ತರಬೇತುದಾರರನ್ನು ಕರೆತಂದು ಪಂದ್ಯಾವಳಿಯನ್ನು ಗೆಲ್ಲುವುದು ನಮ್ಮ ಉದ್ದೇಶವಲ್ಲ. ಭಾರತೀಯ ಕ್ರೀಡಾ ಸಂಸ್ಕೃತಿಯಲ್ಲಿ ಫುಟ್ಬಾಲನ್ನು ಬೆಳಗಿಸುವುದು, ಆಟಗಾರರ ಅಭಿವೃದ್ಧಿ ಹಾಗು ಪೂಟ್ಬಾಲ್ ನಲ್ಲಿ ವೃತ್ತಿಪರತೆಯನ್ನು ನಿರಂತರವಾಗಿ ಉಳಿಸುವುದು ನಮ್ಮ ಉದ್ದೇಶ' ಎಂದರು.

ತಂಡ ಕಟ್ಟುವಲ್ಲಿ ತಂಡವೇ ಶ್ರಮ

ತಂಡ ಕಟ್ಟುವಲ್ಲಿ ತಂಡವೇ ಶ್ರಮ

ಯುವ ಫುಟ್ಬಾಲ್ ತಂಡವನ್ನು ಕಟ್ಟುವಲ್ಲಿ ಶ್ರಮಿಸಿದವರಲ್ಲಿ ಶರತ್ ಪ್ರಮುಖರು. ಆದರೆ ಇವರೊಟ್ಟಿಗೆ ಹೆಗಲು ಸೇರಿಸಿದವರೂ ಇದ್ದಾರೆ. ಅಂತಾರಾಷ್ಟ್ರೀಯ ನಿರ್ವಹಣಾ ತರಬೇತುದಾರರಾದ ಅಭಿಷೇಕ್ ಜಗನ್, ಕೋಚ್ ಎಸ್ ಪಿ ಶಾಜಿ ಅವರ ಸಹಕಾರದೊಂದಿಗೆ ತಂಡ ಬೆಳೆದು ನಿಂತಿದೆ. ರಾಮನ್ ಶಿಕ್ಷಣ ಸಂಸ್ಥೆ, ಜಿಎಮ್ ಇನ್ಫೈನೈಟ್, ಡೆಕಾಥ್ಲಾನ್, ಫಾಸ್ಟ್ ಆ್ಯಂಡ್ ಅಪ್ ಸಂಸ್ಥೆಗಳ ಸಹಕಾರವೂ ದೊರೆತಿದೆ.

ಕಡಿಮೆ ಅವಧಿಯಲ್ಲಿ ಉತ್ತಮ ತರಬೇತಿ

ಕಡಿಮೆ ಅವಧಿಯಲ್ಲಿ ಉತ್ತಮ ತರಬೇತಿ

ಬಿಡಿಯುಎಫ್ಸಿ ಪ್ರಧಾನ ಕೋಚ್ ಶಾಜಿ ಮಾತನಾಡಿ, 'ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಆಟಗಾರರನ್ನು ತರಬೇತಿಗೊಳಿಸುವ ವಿಶ್ವಾಸ ನಮಗಿದೆ. ಬೆಂಗಳೂರಿನ ಯುವ ಪ್ರತಿಭೆಗಳನ್ನು ಸೀನಿಯರ್ ಹಂತದಲ್ಲಿ ಆಡಲು ಬೇಕಾದ ತರಬೇತಿ ನೀಡುತ್ತಿದ್ದೇವೆ. 16 ರಿಂದ 18 ವಯಸ್ಸಿನ ಪ್ರತಿಭಾವಂತರಿಗೆ ತೃತ್ತಿಪರ ಪರಬೇತಿ ನೀಡಲಾಗಿದೆ' ಎಂದು ತಿಳಿಸಿದರು.

ಜೆರ್ಸಿ ಅನಾವರಣ

ಜೆರ್ಸಿ ಅನಾವರಣ

ಈ ಸಂದರ್ಭ ಬೆಂಗಳೂರು ಡ್ರೀಮ್ಸ್ ಯುನೈಟೆಡ್ ತಂಡದ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ಬಿಡಿಯುಎಫ್ಸಿಯ ಪದಾಧಿಕಾರಿಗಳು, ಆಟಗಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Story first published: Monday, September 3, 2018, 23:11 [IST]
Other articles published on Sep 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X