ಪಿವಿ ಸಿಂಧುಗೆ ಕೊರಿಯಾ ಸೂಪರ್ ಸೀರಿಸ್ ಕಿರೀಟ

Posted By:

ಬೆಂಗಳೂರು, ಸೆ. 17: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಕೊರಿಯಾ ಸೂಪರ್ ಸಿರೀಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಭಾನುವಾರದಂದು ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ನಲ್ಲಿ ಜಪಾನಿನ ಸ್ಪರ್ಧಿಯನ್ನು ಸೋಲಿಸಿದರು.

ಕೊರಿಯಾ ಸೂಪರ್ ಸಿರೀಸ್, ಫೈನಲ್ ಪ್ರವೇಶಿಸಿದ ಸಿಂಧು

ನಾಲ್ಕನೇ ಸೀಡೆಡ್ ಪಿ.ವಿ. ಸಿಂಧು ಅವರು ಫೈನಲ್‌ ಪಂದ್ಯದಲ್ಲಿ ಜಪಾನಿನ ನೋಜೊಮಿ ಒಕುಹರಾ ವಿರುದ್ಧ 22-12, 11-21, 21-18 ರಲ್ಲಿ ಗೆಲುವು ಸಾಧಿಸಿದರು.

Super Sindhu crowned champion in Korea

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಚೀನಾದ ಬಿಂಗ್ ಜಿವೊ ಅವರನ್ನು ಪಿ.ವಿ.ಸಿಂಧು 21-10, 17-21, 21-16 ಅಂತರದಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.

ಪಿವಿ ಸಿಂಧುರಿಂದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಒಕುಹರಾ ಅವರ ವಿರುದ್ಧ ಸಿಂಧು ಸೋಲು ಕಂಡಿದ್ದರು. ಈಗ ಈ ಗೆಲುವಿನ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

Story first published: Sunday, September 17, 2017, 13:16 [IST]
Other articles published on Sep 17, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ