ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನಲ್ಲಿ 1971ರ ಭಾರತದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ 50 ವರ್ಷ!

1971 series win in England lifted spirits of Team India, says Ravi Shastri

ಹೆಡಿಂಗ್ಲಿ: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಆಗಸ್ಟ್ 25ರಂದು ಆತಿಥೇಯ ಇಂಗ್ಲೆಂಡ್ ವಿರುದ್ಧ ತೃತೀಯ ಟೆಸ್ಟ್ ಪಂದ್ಯ ಆಡಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ 1971ರಲ್ಲಿ ಭಾರತೀಯ ತಂಡದ ಐಪಿಹಾಸಿಕ ಟೆಸ್ಟ್‌ ಸರಣಿ ಜಯದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ. ಅಂದಿನ ಸರಣಿ ಜಯ ಭಾರತೀಯ ತಂಡದಲ್ಲಿ ಎಷ್ಟೆಲ್ಲ ಹುರುಪು ತುಂಬಿತ್ತು, ಏನೆಲ್ಲಾ ಬದಲಾವಣೆಗಳಿಗೆ ಕಾರಣವಾಗಿತ್ತು ಎಂದು ಶಾಸ್ತ್ರಿ ವಿವರಿಸಿದ್ದಾರೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಭಾರತೀಯ ಅಥ್ಲೀಟ್‌ಗಳ ಪಟ್ಟಿಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ಭಾರತೀಯ ಅಥ್ಲೀಟ್‌ಗಳ ಪಟ್ಟಿ

2021 ಆಗಸ್ಟ್ 24ಕ್ಕೆ 1971ರಲ್ಲಿ ಭಾರತೀಯ ತಂಡ ಇಂಗ್ಲೆಂಡ್‌ ನೆಲದಲ್ಲಿ ಕಂಡ ಟೆಸ್ಟ್‌ ಸರಣಿ ಗೆಲುವಿಗೆ ಭರ್ತಿ 50 ವರ್ಷ ತುಂಬುತ್ತದೆ. ಆವತ್ತು ಅಜಿತ್ ವಾಡೆಕರ್ ಮುಂದಾಳತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿ ಗೆದ್ದಿತ್ತಲ್ಲದೆ, ಇಂಗ್ಲೆಂಡ್ ನೆಲದಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್‌ ಸರಣಿ ಗೆದ್ದ ಅಪರೂಪದ ದಾಖಲೆಗೂ ಕಾರಣವಾಗಿತ್ತು. ವೆಸ್ಟ್‌ ಇಂಡೀಸ್ ವಿರುದ್ಧ 1971ರ ಮಾರ್ಚ್‌ನಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ಈ ಗೆಲುವು ದೊರಕಿತ್ತು.

ಆವತ್ತಿನ ಪಂದ್ಯದಲ್ಲಿನ ಪ್ರತೀ ಎಸೆತವೂ ನೆನಪಿದೆ

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಪೋಸ್ಟ್‌ ಒಂದರಲ್ಲಿ ಮಾತನಾಡಿರುವ ರವಿ ಶಾಸ್ತ್ರಿ, "ನನಗಾಗ 9ರ ಹರೆಯದ. ನನಗೆ ಆವತ್ತಿನ ಪಂದ್ಯದಲ್ಲಿನ ಪ್ರತೀ ಎಸೆತವೂ ನೆನಪಿದೆ ಯಾಕೆಂದರೆ ಆವತ್ತು ನಾನು ರೇಡಿಯೋ ಕೇಳ್ತಿದ್ದೆ. ಆವತ್ತಿನ ಪಂದ್ಯದಲ್ಲಿ ಭಾರತದ ಫಾರೂಕ್ ಇಂಜಿನಿಯರ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಸ್ಕೋರ್‌ ಮಾಡಿದ್ದನ್ನು ನಾನು ನೆನಪಿಸಿಕೊಳ್ಳಬಲ್ಲೆ. ವಿಶಿ (ಗುಂಡಪ್ಪ ವಿಶ್ವನಾಥ್, ಕರ್ನಾಟಕದ ದಂತಕತೆ, ಭದ್ರಾವತಿಯವರು), ಸ್ವಲ್ಪ ರನ್ ಗಳಿಸಿದ್ದನ್ನು, ಅಜಿತ್ ವಾಡೆಕರ್ ಸ್ವಲ್ಪ ರನ್ ಗಳಿಸಿದ್ದನ್ನು ನೆನಪಿಸಿಕೊಳ್ಳಬಲ್ಲೆ," ಎಂದಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಟ್ವಟರ್‌ನಲ್ಲಿ ಪೋಸ್ಟ್ ಮಾಡಿದೆ. 'ಒಂದು ವಿಶೇಷ ಸರಣಿ ಜಯ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಒಬ್ಬ ವಿಶೇಷ ನಾಯಕ. ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾದ 1971ರ ಐತಿಹಾಸಿಕ ವಿಜಯಕ್ಕೆ ಇಂದಿಗೆ 50 ವರ್ಷ. ಆ ಅಪರೂಪದ ಸರಣಿ ಬಗ್ಗೆ ಮುಖ್ಯ ಕೋಚ್ ರವಿ ಶಾಸ್ತ್ರಿ ನೆನಪುಗಳನ್ನು ಹಂಚಿಕೊಂಡಿದ್ದಾರೆ' ಎಂದು ಟ್ವೀಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ಭಾರತೀಯ ಕ್ರಿಕೆಟ್‌ಗೆ ದೊಡ್ಡ ಮಟ್ಟದಲ್ಲಿ ಸ್ಫೂರ್ತಿ ತುಂಬಿತು

"ಆವತ್ತು ಬಿಎಸ್ ಚಂದ್ರಶೇಖರ್ ಅದ್ಭುತ ಬೌಲಿಂಗ್ ನೀಡಿದ್ದರು. ಕೇವಲ 38 ರನ್‌ಗೆ ಬರೋಬ್ಬರಿ 6 ವಿಕೆಟ್‌ ಉರುಳಿಸಿ ಚಂದ್ರಶೇಖರ್ ಅಂದು ಗೇಮ್ ಅನ್ನು ತಿರುಗಿಸಿದ್ದರು. ಈಗಲೂ ನಾನು ಆ ಬೌಲಿಂಗ್‌ ಫಿಗರ್ ಅನ್ನು ನೆನಪಿಸಿಕೊಳ್ಳಬಲ್ಲೆ. 1971ರಲ್ಲಿ ಇಂಗ್ಲೆಂಡ್‌ನಲ್ಲಿ ಭಾರತದ ಟೆಸ್ಟ್ ಸರಣಿ ಗೆಲುವು ಭಾರತೀಯ ಕ್ರಿಕೆಟ್‌ಗೆ ದೊಡ್ಡ ಮಟ್ಟದಲ್ಲಿ ಸ್ಫೂರ್ತಿ ತುಂಬಿತು. ಭಾರತೀಯ ಕ್ರಿಕೆಟಿಗರಿಗೆ ಆ ಗೆಲುವು, ನಾವು ವಿದೇಶಕ್ಕೆ ಹೋಗಿ ಅಲ್ಲೂ ಗೆಲ್ಲಬಲ್ಲೆವು ಎಂಬ ವಿಶ್ವಾಸ ನೀಡಿತು. ಅದೂ ಇಂಗ್ಲೆಂಡ್‌ನಲ್ಲಿ ಈ ಗೆಲುವು ಸಾಧ್ಯವಾಗಿದ್ದು ಯಾವತ್ತಿಗೂ ಇತಿಹಾಸ. ಆ ವಿಜಯ ಸಿಕ್ಕಿ ಐವತ್ತು ವರ್ಷ ಕಳೆದಾಗಿದೆ. ಆವತ್ತು ಆ ಆಟಗಾರರೆಲ್ಲ ಆ ಸಂಭ್ರಮಕ್ಕೆ ಕಾರಣರಾಗಿದ್ದರು. ಅವರಿಗೆಲ್ಲ ಹ್ಯಾಟ್ಸ್‌ಆಫ್," ಎಂದು ಶಾಸ್ತ್ರಿ ಹೇಳಿದ್ದಾರೆ. ಈಗ ವಿರಾಟ್ ಕೊಹ್ಲಿ ಪಡೆ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ತೆರಳಿದ್ದು, ಎರಡು ಪಂದ್ಯಗಳಲ್ಲಿ 1-0ಯ ಮುನ್ನಡೆಯಲ್ಲಿದೆ. ಬಹಳ ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆಲ್ಲುವ ಅವಕಾಶ ಲಭಿಸಿದೆ.

ವಿರಾಟ್ ಕೊಹ್ಲಿ ಬ್ಲಾಕ್ ವಾಟರ್ ಯಾಕೆ ಕುಡಿತಾರೆ? ಇದರಲ್ಲೇನಿದೆ ಗೊತ್ತಾ? | Oneindia Kannada

ಇಂಗ್ಲೆಂಡ್‌ನಲ್ಲಿ ಭಾರತ 1971ರ ಟೆಸ್ಟ್‌ ಸರಣಿಯ ಪೂರ್ಣ ಚಿತ್ರಣ

1971ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಭಾರತ ತಂಡ ಜುಲೈ 23ರಿಂದ ಆಗಷ್ಟ್ 23ರ ವರೆಗೆ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಮೊದಲ ಮತ್ತು ಎರಡನೇ ಟೆಸ್ಟ್‌ ಪಂದ್ಯಗಳು ಡ್ರಾ ಎನಿಸಿದ್ದವು. ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ 4 ವಿಕೆಟ್‌ ಜಯ ಗಳಿಸಿತ್ತು. ಅಂದರೆ ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು 1-0ಯಿಂದ ಗೆದ್ದಿತ್ತು. ಪಂದ್ಯ ಗೆದ್ದ ಆ ಕೊನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಜಾನ್ ಜೇಮ್ಸನ್ 82, ಜಾನ್ ಎಡ್ರಿಕ್ 41, ಅಲನ್ ನಾಟ್ 90, ರಿಚರ್ಡ್ ಹಟ್ಟನ್ 81 ರನ್ ಸೇರ್ಪಡೆಯೊಂದಿಗೆ 108.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 355 ರನ್ ಗಳಿಸಿದ್ದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ರಿಯಾನ್ ಲಕ್‌ಹರ್ಸ್ಟ್ 33 ರನ್‌ನೊಂದಿಗೆ 45.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 101 ರನ್ ಗಳಿಸಿತ್ತು. ಇದೇ ಇನ್ನಿಂಗ್ಸ್‌ ಅಂದರೆ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ ವೇಳೆ ಬಿಎಸ್ ಚಂದ್ರಶೇಖರ್ 38 ರನ್‌ಗೆ 6 ವಿಕೆಟ್‌ ಪಡೆದಿದ್ದರು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಅಜಿತ್ ವಾಡೆಕರ್ 48, ದಿಲೀಪ್ ಸರ್ದೇಸಾಯ್ 54, ಏಕನಾಥ್ ಸೋಲ್ಕರ್ 44, ಫಾರೂಕ್ ಇಂಜಿನಿಯರ್ 59 ರನ್‌ನೊಂದಿಗೆ 117.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 284 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಜಿತ್ ವಾಡೆಕರ್ 45, ದಿಲೀಪ್ ಸರ್ದೇಸಾಯ್ 40, ಗುಂಡಪ್ಪ ವಿಶ್ವನಾಥ್ 33, ಫಾರೂಕ್ ಇಂಜಿನಿಯರ್ 28 ರನ್‌ನೊಂದಿಗೆ 101 ಓವರ್‌ಗೆ 6 ವಿಕೆಟ್ ಕಳೆದು 174 ರನ್ ಬಾರಿಸಿ ಐತಿಹಾಸಿ ಗೆಲುವನ್ನಾಚರಿಸಿತ್ತು.

Story first published: Tuesday, August 24, 2021, 16:13 [IST]
Other articles published on Aug 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X