ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ 'ಸಿಕ್ಸ್‌ ಕಿಂಗ್‌'ನ ಕಡೇ ಮಾತುಗಳು

2011 World Cup hero Yuvraj Singh retires from international cricket

ನವದೆಹಲಿ, ಜೂನ್ 10: ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಮುಂಬೈ ಇಂಡಿಯನ್ಸ್ ಪರ ಒಂದೆರಡು ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು ಬಿಟ್ಟರೆ, ಈಚಿನ ದಿನಗಳಲ್ಲಿ ಕೆಚ್ಚೆದೆಯ ಯುವರಾಜ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. ಆದರೆ ಇಂದಿಗೂ ಯುವಿಯನ್ನು ಪ್ರೀತಿಸೋ ಸಾವಿರಾರು ಕ್ರಿಕೆಟ್ ಪ್ರೇಮಿಗಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯುವಿ ನಿವೃತ್ತಿ ಘೋಷಿಸುತ್ತಿದ್ದಂತೆ ಮನಸ್ಸು ಭಾರವಾದಂತ ಭಾವನೆ ತಂದುಕೊಳ್ಳುವ ಸಾವಿರಾರು ಕ್ರಿಕೆಟ್ ಅಭಿಮಾನಿಗಳಿದ್ದಾರೆಂದರೆ ಯುವರಾಜನಲ್ಲಿ ಎಂಥದ್ದೋ ವಿಶೇಷತೆ ಇರಲೇಬೇಕಲ್ಲವೆ?

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಗುಡ್ ಬೈಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಗುಡ್ ಬೈ

ಯುವರಾಜ್ ಯಾಕೆ ಸದಾ ನೆನಪಾಗಿ ಕಾಡಿಸುವ ಬ್ಯಾಟ್ಸ್ಮನ್ ಅನ್ನೋದಕ್ಕೆ ಇಲ್ಲೊಂದಿಷ್ಟು ಮಾಹಿತಿಯಿದೆ. 2019ರ ಜೂನ್ 10ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳುವಾಗ ಯುವಿ ಆಡಿದ ಮಾತುಗಳೂ ಇಲ್ಲಿದೆ.

ನಾನು ಅದೃಷ್ಟವಂತ

ನಾನು ಅದೃಷ್ಟವಂತ

ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮುನ್ನ ಯುವರಾಜ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 'ಭಾರತ ದೇಶಕ್ಕಾಗಿ ಸುಮಾರು 400 ಪಂದ್ಯಗಳನ್ನಾಡುವ ಅವಕಾಶ ಲಭಿಸಿದ್ದು ನನ್ನ ಅದೃಷ್ಟ. ನಾನು ಮೊದಲು ಕ್ರಿಕೆಟ್ ಆಡಲು ಆರಂಭಿಸಿದಾಗ ಇಷ್ಟು ಸಂಖ್ಯೆಯಲ್ಲಿ ದೇಶವನ್ನು ಪ್ರತಿನಿಧಿಸಬಲ್ಲೆ ಅಂದುಕೊಂಡಿರಲಿಲ್ಲ' ಎಂದರು (ಚಿತ್ರಕೃಪೆ: ಎಎನ್‌ಐ).

ಸಿಕ್ಸ್‌ ಸಿಕ್ಸ್ ದಾಖಲೆ!

ಸಿಕ್ಸ್‌ ಸಿಕ್ಸ್ ದಾಖಲೆ!

ಅನೇಕ ಪಂದ್ಯಗಳಲ್ಲಿ ಯುವಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಕ್ರಿಕೆಟ್ ಜಗತ್ತಿನಲ್ಲಿನ ಸ್ಫೋಟಕ ಬ್ಯಾಟ್ಸ್ಮನ್‌ ಎಂದು ಗುರುತಿಸಿಕೊಂಡಿದ್ದರು. ಆದರೆ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಸಿಂಗ್ ಗಟ್ಟಿಯಾಗಿ ನೆಲೆ ನಿಂತಿದ್ದು ಸಿಕ್ಸ್ ಸಿಕ್ಸ್ ಸಾಧನೆಯಿಂದ. 2007ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ನ ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆದಿದ್ದ ಐಸಿಸಿ ವರ್ಲ್ಡ್ ಟಿ20 ಪಂದ್ಯದಲ್ಲಿ 19ನೇ ಓವರ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಆರೂ ಎಸೆತಗಳಿಗೆ ಸಿಕ್ಸ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಭಾರತ 18 ರನ್ ರೋಚಕ ಜಯ ಗಳಿಸಿತ್ತು.

ಲವ್-ಹೇಟ್ ಸಂಬಂಧ

ಲವ್-ಹೇಟ್ ಸಂಬಂಧ

'ಕ್ರಿಕೆಟ್‌ಗೂ ನನಗೂ ಲವ್-ಹೇಟ್ ಸಂಬಂಧವಿತ್ತು. ಅದು ಹೇಗೆ ಅನ್ನೋದನ್ನು ನಾನು ನಿಜಕ್ಕೂ ವಿವರಿಸಲಾರೆ. ಈ ಆಟ ನನಗೆ ಹೋರಾಡೋದನ್ನು ಕಲಿಸಿಕೊಟ್ಟಿತು. ಕ್ರಿಕೆಟ್ ಆಡುತ್ತ ನಾನು ಗೆದ್ದಿದ್ದಕ್ಕಿಂತಲೂ ಹೆಚ್ಚೇ ಸೋಲನುಭವಿಸಿದೆ. ಆದರೆ ಯಾವತ್ತೂ ಗೆಲುವಿನೆಡೆಗಿನ ನನ್ನ ಪ್ರಯತ್ನ ನಿಲ್ಲಿಸಲಿಲ್ಲ' ಎಂದು ಕೆಚ್ಚೆದೆಯ ಮಹರಾಜ ಹೇಳಿದರು.

ಸಿಕ್ಸ್‌ ಫೋರ್‌ನಲ್ಲಿ ಕಿಂಗ್

ಸಿಕ್ಸ್‌ ಫೋರ್‌ನಲ್ಲಿ ಕಿಂಗ್

ಯುವರಾಜ್ ಸಿಂಗ್ ಒಟ್ಟು 62 ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಇದರಲ್ಲಿ 260 ಫೋರ್, 22 ಸಿಕ್ಸ್‌ಗಳು ಸೇರಿ 1900 ರನ್ ಗಳಿಸಿದ್ದಾರೆ. 278 ಏಕದಿನ ಇನ್ನಿಂಗ್ಸ್ ಗಳಲ್ಲಿ 8701 ರನ್ (908 ಫೋರ್, 155 ಸಿಕ್ಸ್), 58 ಅಂತಾರಾಷ್ಟ್ರೀಯ ಟಿ20 ಇನ್ನಿಂಗ್ಸ್ ಗಳಲ್ಲಿ 1177 ರನ್ (77 ಫೋರ್, 74 ಸಿಕ್ಸ್) ದಾಖಲೆ ಯುವಿ ಮಾಡಿದ್ದಾರೆ.

ವೇಗದ ಅರ್ಧ ಶತಕ

ವೇಗದ ಅರ್ಧ ಶತಕ

ಅಂತಾರಾಷ್ಟ್ರೀಯ ಟಿ20ಯಲ್ಲಿ ಸಿಕ್ಸ್ ಸಿಕ್ಸ್ ಬಾರಿಸಿದ ಪ್ರಪ್ರಥಮ ಬ್ಯಾಟ್ಸ್ಮನ್ ಯುವರಾಜ್ ಸಿಂಗ್. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀವೇಗದ ಅರ್ಧಶತಕದ ದಾಖಲೆಯೂ ಯುವಿ ಹೆಸರಿನಲ್ಲಿದೆ. 2007ರಲ್ಲಿ ಡರ್ಬನ್‌ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸಿಕ್ಸ್ ಸಿಕ್ಸ್ ಬಾರಿಸಿದರಲ್ಲ? ಅದೇ ಪಂದ್ಯದಲ್ಲಿ ಕೇವಲ 12 ಎಸೆತಗಳಿಗೆ ಯುವಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

Story first published: Monday, June 10, 2019, 16:03 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X