2022ರ ಐಪಿಎಲ್‌ನಲ್ಲಿ ಮನೀಷ್ ಪಾಂಡೆಯನ್ನು ನಾಯಕನನ್ನಾಗಿ ಆರಿಸಬಹುದಾದ 3 ತಂಡಗಳು!

ಹೊಸ ನಾಯಕನ ಹುಡುಕಾಟದಲ್ಲಿ SRH ತಂಡ | Oneindia Kannada

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಂಡವೊಂದು ಯಶಸ್ವಿಯಾಗಿ ಕಪ್ ಗೆಲ್ಲುವುದರಲ್ಲಿ ಹಲವಾರು ಅಂಶಗಳು ಪ್ರಭಾವವನ್ನು ಬೀರುತ್ತವೆ. ಅದರಲ್ಲಿ ಪ್ರಮುಖವಾದದ್ದು ನಾಯಕತ್ವ, ಹೌದು ತಂಡವೊಂದು ಯಶಸ್ವಿಯಾಗಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವುದರಲ್ಲಿ ನಾಯಕನ ಪಾತ್ರ ಅತಿದೊಡ್ಡ ಮಟ್ಟದಲ್ಲಿಯೇ ಪ್ರಭಾವವನ್ನು ಬೀರುತ್ತದೆ. ಉದಾಹರಣೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾರಂತಹ ಚಾಣಾಕ್ಷ ನಾಯಕರ ನಾಯಕತ್ವದಲ್ಲಿ ಅನೇಕ ಟ್ರೋಫಿಗಳನ್ನು ಗೆದ್ದಿರುವುದು. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ತಂಡ ಇದುವರೆಗೂ ಅನೇಕ ನಾಯಕರನ್ನು ಬದಲಾಯಿಸಿದರೂ ಸಹ ಯಾವೊಬ್ಬ ನಾಯಕನೂ ತಂಡಕ್ಕೆ ಟ್ರೋಫಿಯನ್ನು ತಂದುಕೊಡಲಿಲ್ಲ. ಬಹುಶಃ ಅತಿಯಾದ ನಾಯಕನ ಬದಲಾವಣೆ ಪಂಜಾಬ್ ಕಿಂಗ್ಸ್ ತಂಡ ಟ್ರೋಫಿಯನ್ನು ಗೆಲ್ಲದೇ ಪದೇಪದೆ ಮುಗ್ಗರಿಸುತ್ತಿರುವುದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.

ಇನ್ನು ನಾಯಕತ್ವದ ಕುರಿತು ಮಾತನಾಡಿದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಉತ್ತಮ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಗೌತಮ್ ಗಂಭೀರ್ ಕೊಲ್ಕತ್ತಾ ತಂಡದ ನಾಯಕತ್ವವನ್ನು ವಹಿಸಿಕೊಂಡ ಮೇಲೆ ಎರಡು ಬಾರಿ ಟ್ರೋಫಿಯನ್ನು ಗೆದ್ದದ್ದು ಉತ್ತಮ ನಾಯಕತ್ವದ ಪ್ರಭಾವವನ್ನು ತೋರಿಸುತ್ತದೆ. ಕನ್ನಡಿಗ ಮನೀಷ್ ಪಾಂಡೆ ಕೂಡ ಇದೇ ರೀತಿಯ ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ ಎನ್ನುವುದಕ್ಕೆ ಅವರ ನಾಯಕತ್ವದಲ್ಲಿ ಸಾಲು ಸಾಲು ಜಯಗಳಿಸಿರುವ ಕರ್ನಾಟಕ ರಣಜಿ ತಂಡವೇ ಸಾಕ್ಷಿ. ಹೀಗೆ ಉತ್ತಮ ನಾಯಕತ್ವದ ಗುಣವನ್ನು ಹೊಂದಿರುವ ಮನೀಷ್ ಪಾಂಡೆ ಐಪಿಎಲ್ ಇತಿಹಾಸದಲ್ಲಿ ದಶಕಕ್ಕೂ ಹೆಚ್ಚಿನ ಕಾಲದ ಅನುಭವವನ್ನು ಹೊಂದಿದ್ದಾರೆ.

ಹೀಗಾಗಿ ಮುಂದಿನ ಐಪಿಎಲ್ ಟೂರ್ನಿಯಲ್ಲಿ ಹೈದರಾಬಾದ್ ತಂಡ ಒಂದುವೇಳೆ ಮನೀಷ್ ಪಾಂಡೆ ಅವರನ್ನು ತಂಡದಿಂದ ಕೈ ಬಿಟ್ಟರೆ ಈ ಕೆಳಕಂಡ 3 ತಂಡಗಳು ಅವರನ್ನು ಖರೀದಿಸಿ ಮುಂಬರುವ ಐಪಿಎಲ್ ಟೂರ್ನಿಗಳಲ್ಲಿ ನಾಯಕ ಸ್ಥಾನವನ್ನು ನೀಡಬಹುದು.

1. ಕೊಲ್ಕತ್ತಾ ನೈಟ್ ರೈಡರ್ಸ್

1. ಕೊಲ್ಕತ್ತಾ ನೈಟ್ ರೈಡರ್ಸ್

ಮೊದಲೇ ಹೇಳಿದಂತೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೌತಮ್ ಗಂಭೀರ್ ನಾಯಕತ್ವದಲ್ಲಿ 2 ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಮೂಲಕ ಅತ್ಯದ್ಭುತ ಪ್ರದರ್ಶನವನ್ನು ನೀಡಿತ್ತು. ಆದರೆ ಗಂಭೀರ್ ತಂಡದಿಂದ ಹೊರ ಹೋದ ಮೇಲೆ ಕೊಲ್ಕತ್ತಾ ತಂಡ ಅಕ್ಷರಶಃ ಮಂಕಾಗಿದೆ. 2018ರಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನೂತನ ನಾಯಕನನ್ನಾಗಿ ನೇಮಿಸಲಾಯಿತು, ಆದರೆ 2020ರ ಐಪಿಎಲ್ ಟೂರ್ನಿಯಲ್ಲಿ ಕಾರ್ತಿಕ್ ನಾಯಕತ್ವದಲ್ಲಿ ಕೆಕೆಆರ್ ಮುಗ್ಗರಿಸಿತು. ಹೀಗಾಗಿ ಟೂರ್ನಿಯ ಮಧ್ಯದಲ್ಲಿಯೇ ದಿನೇಶ್ ಕಾರ್ತಿಕ್ ಬದಲು ಇಯಾನ್ ಮಾರ್ಗನ್ ಹೆಗಲಿಗೆ ಕೆಕೆಆರ್ ತಂಡದ ನಾಯಕತ್ವವನ್ನು ಹಾಕಲಾಯಿತು. ಆದರೆ ಪ್ರಸ್ತುತ ಟೂರ್ನಿಯಲ್ಲಿ ಇಯಾನ್ ಮಾರ್ಗನ್ ನಾಯಕತ್ವದಲ್ಲಿಯೂ ಸಹ ಕೆಕೆಆರ್ ಮುಗ್ಗರಿಸಿದ್ದು ಮುಂದಿನ ಆವೃತ್ತಿಗಳಲ್ಲಿ ಒಂದೊಳ್ಳೆ ನಾಯಕನನ್ನು ಖರೀದಿಸುವ ಅಗತ್ಯತೆಯಲ್ಲಿ ಕೆಕೆಆರ್ ತಂಡವಿದೆ. ಹೀಗಾಗಿ ಮನೀಷ್ ಪಾಂಡೆ ಅವರನ್ನು ಕೆಕೆಆರ್ ತಂಡ ಖರೀದಿಸುವುದರ ಮೂಲಕ ತಂಡಕ್ಕೆ ಒಬ್ಬ ಉತ್ತಮ ನಾಯಕನನ್ನು ಪಡೆದುಕೊಳ್ಳಬಹುದು.

2. ಪಂಜಾಬ್ ಕಿಂಗ್ಸ್

2. ಪಂಜಾಬ್ ಕಿಂಗ್ಸ್

ಪಂಜಾಬ್ ಕಿಂಗ್ಸ್ ತಂಡವಂತೂ ಈಗಾಗಲೇ ಹಲವಾರು ನಾಯಕರನ್ನು ಬದಲಾಯಿಸಿಬಿಟ್ಟಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ತಂಡದ ಭಾಗವಾಗಿದ್ದಾಗಲೂ ಸಹ ಮ್ಯಾಕ್ಸ್‌ವೆಲ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ಹಾಕಿತ್ತು, ಆದರೆ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪಂಜಾಬ್ ತಂಡ ಸಾಲುಸಾಲು ಸೋಲನ್ನು ಕಂಡ ನಂತರ ಮುರಳಿ ವಿಜಯ್ ಅವರನ್ನು ಆ ಆವೃತ್ತಿಯ ಮಧ್ಯದಲ್ಲಿಯೇ ನೂತನ ನಾಯಕನನ್ನಾಗಿ ಆರಿಸಲಾಯಿತು. ಇನ್ನು 2018ರಲ್ಲಿ ರವಿಚಂದ್ರನ್ ಅಶ್ವಿನ್ ಬದಲಿಗೆ ಕೆ ಎಲ್ ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಕೆಎಲ್ ರಾಹುಲ್ ಉತ್ತಮ ನಾಯಕತ್ವವನ್ನು ನಿಭಾಯಿಸುತ್ತಿದ್ದರೂ ಸಹ 2020ರಲ್ಲಿ ಪಂಜಾಬ್ ಪ್ಲೇ ಆಫ್‌ಗೆ ಅರ್ಹತೆಯನ್ನು ಗಿಟ್ಟಿಸುವಲ್ಲಿ ವಿಫಲವಾಯಿತು ಹಾಗೂ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿಯೂ ಸಹ ಪಂಜಾಬ್ ಕಿಂಗ್ಸ್ ಆರನೇ ಸ್ಥಾನದಲ್ಲಿದೆ. ಹೀಗಾಗಿ ಮನೀಷ್ ಪಾಂಡೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಂದೊಳ್ಳೆ ನಾಯಕನ ಆಯ್ಕೆ ಎಂದೇ ಹೇಳಬಹುದು.

3. ಚೆನ್ನೈ ಸೂಪರ್ ಕಿಂಗ್ಸ್

3. ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕತ್ವದ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಸಹ ಹೊಂದಿಲ್ಲ. ಆರಂಭದಿಂದಲೂ ಸಹ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ಟ್ರೋಫಿಗಳನ್ನು ಗೆದ್ದು ಬೀಗಿದೆ. ಚೆನ್ನೈ ನಾಯಕತ್ವದಲ್ಲಿ ಯಾವುದೇ ತೊಂದರೆಯನ್ನು ಹೊಂದಿಲ್ಲದೆ ಇದ್ದರೂ ಸಹ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ಗೆ ವಿದಾಯ ಹೇಳುವ ಸನಿಹದಲ್ಲಿದ್ದಾರೆ. ಹೀಗಾಗಿ ಧೋನಿ ನಂತರ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ಮತ್ತೊಬ್ಬ ನಾಯಕನ ಅಗತ್ಯತೆ ತಂಡಕ್ಕಿದ್ದು ಮನೀಷ್ ಪಾಂಡೆ ಅವರನ್ನು ಚೆನ್ನೈ ತಂಡ ಖರೀದಿಸಬಹುದಾಗಿದೆ. ಚೆನ್ನೈ ತಂಡದಲ್ಲಿ ಅನುಭವವಿರುವ ಸುರೇಶ್ ರೈನಾ ಮತ್ತು ಫಾಫ್ ಡು ಪ್ಲೆಸಿಸ್ ಇದ್ದರೂ ಸಹ ಅವರು ಕೂಡ ತಂಡದಲ್ಲಿ ಹೆಚ್ಚುಕಾಲ ಉಳಿಯದೆ ಹೋಗಬಹುದು ಹೀಗಾಗಿ ಅವರಿಗೆ ನಾಯಕತ್ವವನ್ನು ನೀಡಿ ಸಾಹಸ ಮಾಡುವ ಬದಲು ಮನೀಷ್ ಪಾಂಡೆ ಅವರನ್ನು ಖರೀದಿಸುವುದು ಚೆನ್ನೈ ತಂಡಕ್ಕೆ ಒಂದೊಳ್ಳೆ ಆಯ್ಕೆಯಾಗಲಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, May 11, 2021, 20:39 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X