ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮೂಲಕ ಟೀಮ್ ಇಂಡಿಯಾ ಪ್ರವೇಶಿಸಿದ 5 ಆಟಗಾರರು ಇವರೆ!

5 Players Who got selected in the Indian National Team After a Successful IPL Season

ಐಪಿಎಲ್ ಅಂದ್ರೆ ಸಾಕು ಕ್ರಿಕೆಟ್ ಪ್ರೇಮಿಗಳಿಗೆ ಹಾಗೂ ಆಟಗಾರರಿಗೆ ನಿಜಕ್ಕೂ ಅದೊಂದು ಹಬ್ಬ. ಕನಿಷ್ಟ ಎರಡು ತಿಂಗಳು ಅಭಿಮಾನಿಗಳ ಪಾಲಿಗೆ ಮನರಂಜನೆಗೇನೂ ಕೊರತೆಯಿಲ್ಲ. ಈ ಕ್ರಿಕೆಟ್ ಜಾತ್ರೆಗೂ ಮುನ್ನ ಹರಾಜು ಪ್ರಕ್ರಿಯೆ ನಡೆಯಲಿದೆ. ಇದೇ 19ನೇ ತಾರೀಕಿನಂದು ಯಾರು ಯಾವ ತಂಡದ ಪಾಲಾಗಲಿದ್ದಾರೆ ಅನ್ನೋದು ತಿಳಿಯಲಿದೆ.

2007 ರ ವಿಶ್ವಕಪ್‌ ಗೆಲುವು ಭಾರತದಲ್ಲಿ ಐಪಿಎಲ್ ಆರಂಭಕ್ಕೆ ನಾಂದಿಯಾಯಿತು. 2008 ರಲ್ಲಿ ಐಪಿಎಲ್‌ಟೂರ್ನಿ ಆರಂಭವಾಗಿಯೇ ಬಿಟ್ಟಿತು. ದೇಶದ ಆಟಗಾರರು ಮಾತ್ರವಲ್ಲ ವಿದೇಶಿ ಅನೇಕ ಪ್ರತಿಭೆಗಳಿಕೆ ಇದು ವ ಏದಿಕೆಯಾಯಿತು. ಮಾತ್ರವಲ್ಲ ಆಟಗಾರರಿಗೆ ಆರ್ಥಿಕವಾಗಿಯೂ ಈ ಟೂರ್ನಿ ಸಾಕಷ್ಟು ನೆರವಾಗಿದೆ.

ಟೂರ್ನಿ ಆರಂಭವಾದಾಗಿನಿಂದ ಇಂದಿನವರೆಗೆ ಪ್ರತೀ ಆವೃತ್ತಿಯಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಕೇವಲ ಆಟದ ದೃಷ್ಟಿಯಿಂದ ಮಾತ್ರವಲ್ಲ ವ್ಯವಹಾರಿಕವಾಗಿಯೂ ಐಒಇಎಲ್ ಈಗ ದೊಡ್ಡ ಹೆಸರು. ಐಪಿಎಲ್‌ನ ಫ್ರಾಂಚೈಸಿಗಳು ಈಗ ದೊಡ್ಡ ಬ್ರ್ಯಾಂಡ್‌ಳಾಗಿವೆ.

ಐಪಿಎಲ್ 2020 ಹರಾಜು: 73 ಸ್ಥಾನಕ್ಕೆ 971 ಆಟಗಾರರಿಂದ ಪೈಪೋಟಿಐಪಿಎಲ್ 2020 ಹರಾಜು: 73 ಸ್ಥಾನಕ್ಕೆ 971 ಆಟಗಾರರಿಂದ ಪೈಪೋಟಿ

ವಿಶ್ವಕಪ್‌ ಗೆಲುವು ಐಪಿಎಲ್ ಆರಂಭಕ್ಕೆ ಮುನ್ನುಡಿ ಬರೆದರೆ ಅದೇ ಐಪಿಎಲ್ ಅದೆಷ್ಟೊ ಆಟಗಾರರ ಭವಿಷ್ಯಕ್ಕೆ ಮುನ್ನುಡಿ ಬರೆದಿದೆ. ಅನೇಕ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಗುರುತಿಸಲು ಇದು ಕಾರಣವಾಗಿದೆ. ಹೀಗೆ ಐಪಿಎಲ್‌ ಮೂಲಕ ಮಿಂಚಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ ಐವರು ಆಟಗಾರರನ್ನು ಬನ್ನಿ ನೋಡೋಣ:

ರವಿಚಂದ್ರನ್ ಅಶ್ವಿನ್:

ರವಿಚಂದ್ರನ್ ಅಶ್ವಿನ್:

ಐಪಿಎಲ್‌ನ ಪ್ರಮುಖ ಅನ್ವೇಷಣೆಯಲ್ಲಿ ಆರ್.ಅಶ್ವಿನ್ ಕೂಡ ಒಬ್ಬರು. ಸದ್ಯ ಭಾರತದ ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಬೌಲರ್ ಆಗಿದ್ದಾರೆ. ತನ್ನ ಬತ್ತಳಿಕೆಯಲ್ಲಿ ಪ್ರಮುಖ ಅಸ್ತ್ರಗಳನ್ನಿಟ್ಟುಕೊಂಡಿರುವ ಅಶ್ವಿನ್ ಈ ಮೂಲಕ ಆಯ್ಕೆಗಾರರನ್ನು ಆದಷ್ಟು ಬೇಗನೆ ತನ್ನತ್ತ ಸೆಳೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಕೇರಮ್ ಬಾಲ್, ಲೆಗ್ ಬ್ರೇಕ್, ಆರ್ಮ್‌ ಬಾಲ್‌ಗಳು ಅಶ್ವಿನ್ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳಾಗಿವೆ. ಸಧ್ಯ ಸೀಮಿತ ಓವರ್‌ಗಳಲ್ಲಿ ಸ್ಥಾನವನ್ನು ಪಡೆಯದಿದ್ದರೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. 70 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅಶ್ವಿನ್ 362 ವಿಕೆಟ್ ಪಡೆದಿದ್ದಾರೆ.

ಹಾರ್ದಿಕ್ ಪಾಂಡ್ಯಾ:

ಹಾರ್ದಿಕ್ ಪಾಂಡ್ಯಾ:

ಈತ ಐಪಿಎಲ್‌ನ ಇತ್ತೀಚಿನ ಅತಿದೊಡ್ಡ ಅನ್ವೇಷಣೆ. ಟೀಮ್ ಇಂಡಿಯಾದ ಪ್ರಮುಖ ಆಲ್ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯಾ ಈಗಾಗಲೇ ಅನೇಕ ಮ್ಯಾಚ್ ವಿನ್ನಿಂಗ್ ಪರ್ಫಾರ್ಮೆನ್ಸ್‌ಕೊಟ್ಟಿದ್ದಾರೆ. ಮುಂಬೈ ಇಂಡಿಯನ್ಸ್‌ ಯುವ ಆಟಗಾರರ ಹುಡುಕಾಟದಲ್ಲಿದ್ದಾಗ ಮುಂಬೈ ಮ್ಯಾನೇಜ್‌ಮೆಂಟ್‌ನ ಗಮನ ಸೆಳೆದ ಈತ 2015ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ರು. ಆರಂಭಿಕ ಸೀಸನ್‌ನಲ್ಲೇ ಅಬ್ಬರಿಸಿದ ಪಾಂಡ್ಯಾ ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳಲೇ ಇಲ್ಲ.

Syed Mushtaq Ali: ಐಪಿಎಲ್ ಹರಾಜಿಗೂ ಮುನ್ನ ಮಿಂಚಿದ 5 ಆಟಗಾರರು

ರವೀಂದ್ರ ಜಡೇಜಾ:

ರವೀಂದ್ರ ಜಡೇಜಾ:

ಟೀಮ್ ಇಂಡಿಯಾಗೆ ದೊರೆತ ಮತ್ತೊಂದು ಅದ್ಭುತ ಪ್ರತಿಭೆ ಅಂದರೆ ಅದು ರವೀಂದ್ರ ಜಡೇಜಾ. 2008ರಲ್ಲಿ ಅಂಡರ್‌-19 ವಿಶ್ವಕಪ್‌ಗೆದ್ದ ತಂಡದಲ್ಲಿದ್ದರೂ ಜಡೇಜಾ ಪ್ರದರ್ಶನ ಟೀಮ್ ಇಂಡಿಯಾ ಆಯ್ಕೆಗಾರರ ಗಮನ ಸೆಳೆಯಲು ಕಾರಣವಾಗಿದ್ದು ಐಪಿಎಲ್ ಪ್ರದರ್ಶನ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚುವ ತಾಕತ್ತಿರುವ ಆಟಗಾರ ಈಗ ಟೀಮ್ ಇಂಡಿಯಾದ ಅವಿಭಾಜ್ಯ ಅಂಗ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡಿರುವ ಈ ಆಟಗಾರ ಇನ್ನೂ ಸಾಕಷ್ಟು ಬೇಡಿಕಯನ್ನಿಟ್ಟುಕೊಂಡಿದ್ದಾರೆ.

ಯೂಸುಫ್ ಪಠಾಣ್:

ಯೂಸುಫ್ ಪಠಾಣ್:

ಮತ್ತೋರ್ವ ಸ್ಪಿನ್‌, ಆಲ್ರೌಂಡರ್ ಆಟಗಾರ ಯೂಸೂಫ್ ಪಠಾಣ್ ಐಪಿಎಲ್ ಮೊದಲ ಆವೃತ್ತಿಯಲ್ಲಿ ಮಿಂಚಿದ ಆಟಗಾರ. ರಾಜಸ್ಥಾನ ರಾಯಲ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಯೂಸುಫ್ ಮೊದಲ ಆವೃತ್ತಿಯನ್ನು ರಾಜಸ್ಥಾನ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಸ್ಫೋಟಕ ಆಟದ ಮೂಲಕ ಗಮನ ಸೆಳೆದ ಯೂಸೂಫ್ ಪಠಾಣ್ ಟೀಮ್ ಇಂಡಿಯಾವನ್ನು ಪ್ರವೇಶಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆದರೆ ಆ ಬಳಿಕ ಫಾರ್ಮ್‌ ಕೊರತೆಯನ್ನು ಅನುಭವಿಸಿದ ಪಠಾಣ್ ಹೊಸ ಕ್ರಿಕೆಟಿಗರೊಂದಿಗೆ ಸ್ಪರ್ಧೆಯನ್ನು ಮಾಡಲಾಗದೆ ಟೀಮ್ ಇಂಡಿಯಾದಿಂದ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಯಜುವೇಂದ್ರ ಚಾಹಲ್:

ಯಜುವೇಂದ್ರ ಚಾಹಲ್:

ಐಪಿಎಲ್‌ನ ಮತ್ತೊಂದು ಇತ್ತೀಚಿನ ಅನ್ವೇಷಣೆ ಅಂದರೆ ಅದು ಯಜುವೇಂದ್ರ ಚಾಹಲ್. ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಕಳೆದ ಎರಡ್ಮೂರು ವರ್ಷಗಳಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿದ್ದಾರೆ. ಮುಂಬೈ ತಂಡದ ಮೂಲಕ ಐಪಿಎಲ್‌ ಪ್ರವೇಶ ಮಾಡಿದ ಚಾಹಲ್ ಅಲ್ಲಿ ಹೆಚ್ಚಿನ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಬಳಿಕ ಆರ್‌ಸಿಬಿ ತಂಡದಲ್ಲಿ ಅವಕಾಶವನ್ನು ಪಡೆದು ಅಲ್ಲಿ ಮಿಂಚಿದರು. ಚಾಹಲ್ ಹೊಂದಿರುವ ಕೌಶಲ್ಯದ ಕಾರಣಕ್ಕೆ ಆರ್‌ಸಿಬಿ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್‌ಕೊಹ್ಲಿ ಕೂಡ ಚಾಹಲ್ ಅಭಿಮಾನಿಯಾಗಿದ್ದಾರೆ.

Story first published: Tuesday, December 3, 2019, 18:40 [IST]
Other articles published on Dec 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X