ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಯುಎಇನಲ್ಲಿ ನಡೆಯುವುದು ಆರ್‌ಸಿಬಿಗೆ ದೊಡ್ಡ ಲಾಭ ಎಂದ ಆಕಾಶ್ ಚೋಪ್ರಾ!

Aakash Chopra Explains Why Virat Kohli-led Rcb Might Find Success If Ipl Happens In Uae

ಈ ಬಾರಿಯ ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡುವ ತೀರ್ಮಾನವನ್ನು ಅಧಿಕೃತವಾಗಿ ತಿಳಿಸಿದೆ. ಹೀಗಾಗಿ ಈ ಅವಕಾಶವನ್ನು ಐಪಿಎಲ್ ಆಯೋಜಿಸಲು ಬಳಸಿಕೊಳ್ಳಲು ಬಿಸಿಸಿಐ ಸಜ್ಜಾಗುತ್ತಿದೆ. ಈ ಮಧ್ಯೆ ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಯುವ ಬಗ್ಗೆ ನಿನ್ನೆ ಐಪಿಎಲ್ ಚೇರ್‌ಮೆನ್ ಬೃಜೇಶ್ ಪಟೇಲ್ ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಐಪಿಎಲ್ ಮಧ್ಯಪ್ರಾಚ್ಯ ನಾಡಿನಲ್ಲಿ ನಡೆದರೆ ಏನೆಲ್ಲಾ ಸವಾಲಾಗಲಿದೆ ಎಂಬುದರ ಬಗ್ಗೆ ಭಾರತ ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರಾ ಮಾತನ್ನಾಡಿದ್ದಾರೆ. ಯುಎಇನ ಉರಿ ಬಿಸಿಲಿನಲ್ಲಿ ಆಟಗಾರರು ಸಾಕಷ್ಟು ಬಳಲಿಕೆಗ ಒಳಗಾಗಲಿದ್ದಾರೆ ಎಂದು ಚೋಪ್ರಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರ ಜೊತೆಗೆ ಆರ್‌ಸಿಬಿ ತಂಡಕ್ಕೆ ಯುಎಇನಲ್ಲಿ ಪಂದ್ಯ ನಡೆಯವುದು ಲಾಭವಾಗಲಿದೆ ಎಂಬ ಮಾತನ್ನೂ ಅವರು ಹೇಳಿದ್ದಾರೆ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

ಬಿಸಿಲಿನ ವಾತಾವರಣವೇ ಸವಾಲು

ಬಿಸಿಲಿನ ವಾತಾವರಣವೇ ಸವಾಲು

ಯುಎಇನಲ್ಲಿ ಸಾಕಷ್ಟು ಬಿಸಿಲಿನ ವಾತಾವರಣ ಇರುವ ಕಾರಣ ಆಟಗಾರರು ಧಗೆಯ ಕಾರಣದಿಂದಾಗಿ ನೀರಿನ ಬಾಟಲ್‌ಗಳನ್ನು ಜೊತೆಯಲ್ಲೇ ಇರಿಸಿಕೊಳ್ಳಬೇಕಾಗುತ್ತದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ಯುಎಇನಲ್ಲಿ ಹವಾಮಾನ ಚೆನ್ನಾಗಿದೆ. ಸ್ವಲ್ಪ ಬಿಸಿಲಿನೊಂದಗೆ ಆಡುವುದು ಉತ್ತಮವೇ. ಇದೇ ವಾತಾವರಣ ಸೆಪ್ಟೆಂಬರ್‌ವರೆಗೂ ಮುಂದುವರಿಯಲಿದೆ ಎಂದರು.

ಆರು ವಾರಗಳ ಟೂರ್ನಿ

ಆರು ವಾರಗಳ ಟೂರ್ನಿ

ನಿಗದಿಯಾಗಿರುವ ಪ್ರಕಾರ ಸೆಪ್ಟೆಂಬರ್ 26 ರಿಂದ ಐಪಿಎಲ್ ಆರಂಭವಾಗಿ ನವೆಂಬರ್ 7ರ ವರೆಗೆ ನಡೆಯಲಿದೆ. ಹಾಗಾಗಿ ಈ ಆರು ವಾರಗಳ ಸಮಯಾವಕಾಶ ಮಾತ್ರವೇ ಸಿಗುವುದರಿಂದ ಡಬಲ್ ಹೆಡ್ಡರ್‌ಗಳು(ಒಂದು ದಿನದಲ್ಲಿ ಎರಡು ಪಂದ್ಯ) ಹೆಚ್ಚಾಗಿ ನಡೆಯಬೇಕಾಗುತ್ತದೆ. ಈ ಕಾರಣದಿಂದಾಗಿ ಸಮಸ್ಯೆಗಳು ಎದುರಾಗಲಿದೆ ಎಂದು ಹೇಳಿದ್ದಾರೆ. ಬ್ಯಾಟ್ಸ್‌ಮನ್‌ಗಳು ಈ ಸಂದರ್ಭದಲ್ಲಿ ಡಿಹೈಡ್ರೇಶನ್‌ಗೆ ಒಳಗಾಗಲಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಆರ್‌ಸಿಬಿಗೆ ಲಾಭ

ಆರ್‌ಸಿಬಿಗೆ ಲಾಭ

ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆದರೆ ಅದರ ಲಾಭ ಆರ್‌ಸಿಬಿಗೆ ಆಗಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಯುಎಇ ಕ್ರೀಡಾಂಗಣಗಳು ದೊಡ್ಡದಾಗಿರುವುದರಿಂದ ಬೌಲಿಂಗ್ ವಿಭಾಗ ಪ್ರಭಲವಾಗಿಲ್ಲದಿದ್ದರೂ ಹೆಚ್ಚಿನ ಪರಿಣಾಮ ಬೀರದು. ಇದರ ಉಪಯೋಗ ಆರ್‌ಸಿಬಿಗೆ ಆಗಲಿದೆ ಎಂದಿದ್ದಾರೆ ಆಕಾಶ್ ಚೋಪ್ರಾ.

ಬ್ಯಾಟ್ಸಮನ್‌ಗಳಿಗೆ ಪರಿಣಾಮವಿಲ್ಲ

ಬ್ಯಾಟ್ಸಮನ್‌ಗಳಿಗೆ ಪರಿಣಾಮವಿಲ್ಲ

ಎಲ್ಲಾ ದೃಷ್ಟಿಕೋನದಿಂದ ನೋಡಿದಾಗ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಸಮಸ್ಯೆಯನ್ನು ಎದುರಿಸಲಾರರು. ಆದರೆ ಹೆಚ್ಚಿನ ದಿನ ಎರಡು ಪಂದ್ಯಗಳು ನಡೆಯುವ ಕಾರಣದಿಂದಾಗಿ ಬಿಸಿಲಿನ ಧಗೆಯ ಬಗ್ಗೆ ಎಚ್ಚರದಿಂದಿರಬೇಕಾಗುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

Story first published: Thursday, July 23, 2020, 21:44 [IST]
Other articles published on Jul 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X