ಕೆಪಿಎಲ್ ಶುಭಾರಂಭ: ಟೂರ್ನಿ ಬಗ್ಗೆ ಎಬಿಸಿಡಿ
ಬೆಂಗಳೂರು, ಆ.28: ಕರ್ನಾಟಕ ಪ್ರಿಮಿಯರ್ ಲೀಗ್ 2014(ಕೆಪಿಎಲ್) ಪಂದ್ಯಾವಳಿ ಆ.28ರಿಂದ ಅರಮನೆ ನಗರಿ ಮೈಸೂರಿನಲ್ಲಿ ಆರಂಭವಾಗಲಿದೆ. ಈ ಟೂರ್ನಿಯ ಪಂದ್ಯಗಳ ಪ್ರಸಾರದ ಹಕ್ಕನ್ನು ಸೋನಿ ಸಿಕ್ಸ್ ಪಡೆದುಕೊಂಡಿದ್ದು, ಮೊದಲ ಪಂದ್ಯದಿಂದಲೇ ರೋಚಕತೆ ನಿರೀಕ್ಷಿಸಲಾಗಿದೆ.
ಕೆಎಸ್ ಸಿಎ ಅಧ್ಯಕ್ಷರಾಗಿದ್ದ ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಸ್ಮರಣಾರ್ಥ ನಾಗಿ ಕೆಪಿಎಲ್ ಟೂರ್ನಿಗೆ 'ಒಡೆಯರ್ ಕಪ್' ಎಂದು ಹೆಸರಿಡಲಾಗಿದೆ. ಕೆಪಿಎಲ್ ಟೂರ್ನಿಯ ಮೊದಲೆರಡು ಪಂದ್ಯಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ ಎಂದು ಕೆಎಸ್ ಸಿಎ ಹೇಳಿದೆ. ಸೋನಿ ಸಿಕ್ಸ್ HD ಹಾಗೂ SD ಎರಡೂ ಮಾದರಿಯಲ್ಲೂ ಪಂದ್ಯಗಳ ನೇರ ಪ್ರಸಾರ ವೀಕ್ಷಿಸಬಹುದಾಗಿದೆ. [ಕೆಪಿಎಲ್ ಪಂದ್ಯ ಎಲ್ಲಿ ನೋಡೋದು?]
ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಹುಬ್ಳಿ ಟೈಗರ್ಸ್, ಬಳ್ಳಾರಿ ಟೈಗರ್ಸ್, ಮಂಗಳೂರು ಯುನೈಟೆಡ್ ಹಾಗೂ ಮೈಸೂರು ವಾರಿಯರ್ಸ್ ತಂಡದ ಜೊತೆಗೆ ಸಿನಿಮಾ ಜಗತ್ತಿನ ಸೆಲೆಬ್ರಿಟಿಗಳ ರಾಕ್ ಸ್ಟಾರ್ಸ್ ತಂಡ ಕೂಡಾ ಸ್ಪರ್ಧಿಸುತ್ತಿವೆ. [ಕೆಪಿಎಲ್ ವೇಳಾಪಟ್ಟಿ ನೋಡಿ]
[ಕೆಪಿಎಲ್ : ಕಿಚ್ಚ ಸುದೀಪ್ ರಾಕ್ ಸ್ಟಾರ್ಸ್ ತಂಡ]
[ಕೆಪಿಎಲ್ 2014 : ಮಂಗಳೂರಿನ ಯುನೈಟೆಡ್ ತಂಡ]
[ಕೆಪಿಎಲ್ ತಂಡ: ಹುಬ್ಬಳ್ಳಿಯ ಟೈಗರ್ಸ್ ತಂಡ ಹೀಗಿದೆ]
[ಕೆಪಿಎಲ್ ತಂಡ: ಮಿಥುನ್ ಇರುವ ಬಿಜಾಪುರ ಬುಲ್ಸ್]
[ಕೆಪಿಎಲ್ ತಂಡ: ಇವರು ಮೈಸೂರು ವಾರಿಯರ್ಸ್]
[ಕೆಪಿಎಲ್ ತಂಡ: ಉತ್ತಪ್ಪ ಅವರ ಬಳ್ಳಾರಿ ಟಸ್ಕರ್ಸ್]
[ಕೆಪಿಎಲ್ ತಂಡ: ವಿನಯ್ ಅವರ ಬೆಳಗಾವಿ ಪ್ಯಾಂಥರ್ಸ್]
ಕರ್ನಾಟಕ ಪ್ರಿಮಿಯರ್ ಲೀಗ್ 2014(ಕೆಪಿಎಲ್) ಬಗ್ಗೆ :
* ಕರ್ನಾಟಕ ಪ್ರಿಮಿಯರ್ ಲೀಗ್ 2014(ಕೆಪಿಎಲ್) ಗೆ ಈಗ ಬಿಸಿಸಿಐನ ಅಧಿಕೃತ ಟೂರ್ನಿ ಎಂಬ ಮಾನ್ಯತೆ ಸಿಕ್ಕಿದೆ. ಆ.28 ರಿಂದ ಸೆ.12ರವರೆಗೆ ನಡೆಯಲಿದ್ದು, ಕರ್ನಾಟಕದ ಆಟಗಾರರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.
* ಕೆಪಿಎಲ್ ಮೊಟ್ಟ ಮೊದಲ ಬಾರಿಗೆ 2009ರಲ್ಲಿ ಆರಂಭವಾಗಿತ್ತು. ನಂತರ 2010ರಲ್ಲೂ ಯಶಸ್ವಿಯಾಗಿತ್ತು. ಆದರೆ, 2011,2012 ಹಾಗೂ 2013 ಟೂರ್ನಿ ನಡೆದಿರಲಿಲ್ಲ.
* ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ಜಾವಗಲ್ ಶ್ರೀನಾಥ್ ಅವರು ಕೆಪಿಎಲ್ ಟೂರ್ನಿಗೆ ವಿರೋಧ ವ್ಯಕ್ತಪಡಿಸಿದ್ದರು.
* 2014ರ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಟೂರ್ನಿಯನ್ನು ದಿವಂಗತ ಕೆಎಸ್ ಸಿಎ ಅಧ್ಯಕ್ಷ ಶ್ರೀಕಂಠದತ್ತ ಒಡೆಯರ್ ಸ್ಮರಣಾರ್ಥ 'ಒಡೆಯರ್ ಕಪ್' ಎಂದು ಕರೆಯಲಾಗುತ್ತಿದೆ.
* 2014ರ ಕೆಪಿಎಲ್ ನಲ್ಲಿ ಬೆಂಗಳೂರಿನ ಒಂದೂ ತಂಡ ಕೂಡಾ ಇಲ್ಲ.
* ದೇಶದಲ್ಲೇ ಮೊದಲ ಬಾರಿಗೆ ಟಿ20 ಟೂರ್ನಿಯೊಂದರಲ್ಲಿ ಸೆಲೆಬ್ರಿಟಿಗಳ ತಂಡ (ರಾಕ್ ಸ್ಟಾರ್ಸ್) ಪಾಲ್ಗೊಳ್ಳುತ್ತಿದ್ದು, ವೃತ್ತಿಪರರ ಆಟಗಾರರೊಂದಿಗೆ ಸೆಣಸಲಿದ್ದಾರೆ.

* ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು), ಗಂಗೋತ್ರಿ ಗ್ಲೇಡ್ಸ್(ಮೈಸೂರು) ಹಾಗೂ ಡಾ. ದರಾ ಬೇಂದ್ರೆ ಕೆಎಸ್ ಸಿಎ ಸ್ಟೇಡಿಯಂ (ಹುಬ್ಬಳ್ಳಿ) ನಲ್ಲಿ ಪಂದ್ಯಾವಳಿ ನಡೆಯಲಿದೆ.
* ಪಂದ್ಯಗಳು ನಡೆಯುವ ವೇಳೆ: 10AM, 1PM, 2PM, 3PM, 6PM
* ತಂಡಗಳು: ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಹುಬ್ಳಿ ಟೈಗರ್ಸ್, ಬಳ್ಳಾರಿ ಟೈಗರ್ಸ್, ಮಂಗಳೂರು ಯುನೈಟೆಡ್ ಹಾಗೂ ಮೈಸೂರು ವಾರಿಯರ್ಸ್ ಹಾಗೂ ರಾಕ್ ಸ್ಟಾರ್ಸ್.
* ನಾಯಕರು: ಆರ್ ವಿನಯ್ ಕುಮಾರ್ (ಬೆಳಗಾವಿ), ಸಿ ರಘು (ಬಳ್ಳಾರಿ), ದೀಪಕ್ ಚೌಗುಲೆ(ಬಿಜಾಪುರ), ಬಿ ಅಖಿಲ್(ಹುಬ್ಬಳ್ಳಿ), ರೋಹಿತ್ ಶಬರ್ ವಾಲ್ (ಮಂಗಳೂರು), ಮನೀಶ್ ಪಾಂಡೆ (ಮೈಸೂರು), ಸುದೀಪ್ (ರಾಕ್ ಸ್ಟಾರ್ಸ್ )
* 2.5 ಲಕ್ಷ ರು-ಸೆಮಿಸ್ ನಲ್ಲಿ ಸೋಲುವ ಎರಡು ತಂಡಗಳಿಗೆ ಸಿಗುವ ಬಹುಮಾನದ ಮೊತ್ತ
* 3ನೇ ಕೆಪಿಎಲ್ ಪಂದ್ಯಾವಳಿಯಾಗಿದ್ದು, 3 ವರ್ಷದ ನಂತರ ಮೈದಾನಕ್ಕೆ ಮರಳಿದೆ.
* 5 ಲಕ್ಷ ರು ಬಹುಮಾನ ಮೊತ್ತ ಎರಡನೇ ಸ್ಥಾನ ಪಡೆಯುವ ತಂಡಕ್ಕೆ ಸಿಗಲಿದೆ.
* 7 ತಂಡಗಳೂ ಪ್ರಶಸ್ತಿಗಾಗಿ ಸೆಣಸಾಡಲಿವೆ.
* 10 ಲಕ್ಷ ರು ಬಹುಮಾನ ಮೊತ್ತ ಕೆಪಿಎಲ್ ವಿಜೇತ ತಂಡಕ್ಕೆ ಸಿಗಲಿದೆ.
* 14 ದಿನಗಳು ಪಂದ್ಯಗಳು ನಡೆಯಲಿವೆ.
* 20 ಲಕ್ಷ ರುಪಾಯಿ ಒಟ್ಟಾರೆ ಹರಾಜು ಪ್ರಕ್ರಿಯೆಯಲ್ಲಿ ತಂಡವೊಂದು ಬಳಸಬಹುದಾದ ಮೊತ್ತವಾಗಿದೆ.
* 24 ಟಿ20 ಪಂದ್ಯಗಳು ನಡೆಯಲಿವೆ.
* 25 ರುಪಾಯಿಗೆ ಟಿ20 ಪಂದ್ಯದ ಟಿಕೆಟ್ ಲಭ್ಯವಾಗಲಿದೆ.
* 42 ವರ್ಷ ವಯಸ್ಸಿನ ಆನಂದ್ ಕಟ್ಟಿ (ಹುಬ್ಳಿ ಟೈಗರ್ಸ್), ಯೇರೆ ಗೌಡ (ಮೈಸೂರು ವಾರಿಯರ್ಸ್) ಅತಿ ಹಿರಿಯ ಆಟಗಾರರಾಗಿದ್ದಾರೆ.
* 45 ರುಪಾಯಿ ಟಿಕೆಟ್ ನ ಗರಿಷ್ಠ ಬೆಲೆಯಾಗಿದೆ.
* 121 ಆಟಗಾರರು ಕೆಪಿಎಲ್ 2014ರಲ್ಲಿ ಭಾಗವಹಿಸಿದ್ದಾರೆ.
* 10,000 ರುಪಾಯಿ ಅತಿ ಕಡಿಮೆ ಬಿಡ್ಡಿಂಗ್ ಮೊತ್ತವಾಗಿತ್ತು.
* 530,000 ರು ಬಿಡ್ಡಿಂಗ್ ಪಡೆದ ರಾಬಿನ್ ಉತ್ತಪ್ಪ(ಬಳ್ಳಾರಿ) ಅತಿ ಹೆಚ್ಚು ಬಿಡ್ಡಿಂಗ್ ಪಡೆದ ಆಟಗಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications