ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯ ಆಡಿ 50 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟಿಗನಾದ ಜೋನ್ಸ್: ಗಮ್ಮತ್ತಿನ ಕತೆ!

Allan Jones recognised as Test cricketer 50 years after only cap

ಲಂಡನ್: ಅಂತಾರಾಷ್ಟ್ರೀಯ ಆಟಗಾರ ಅನ್ನಿಸಿಕೊಳ್ಳೋಕೆ 100 ಪಂದ್ಯಗಳನ್ನಾಡಿರಬೇಕಿಲ್ಲ. 1 ಅಂತಾರಾಷ್ಟ್ರೀಯ ಪಂದ್ಯವಾಡಿದರೂ ಆತ ಅಂತಾರಾಷ್ಟ್ರೀಯ ಆಟಗಾರ ಅನ್ನಿಸಿಕೊಳ್ಳುತ್ತಾನೆ. ಟೆಸ್ಟ್ ಕ್ರಿಕೆಟರ್‌ ಅನ್ನಿಸಿಕೊಳ್ಳೋಕೂ ಇದೇ ಅನ್ವಯವಾಗುತ್ತದೆ. ಆದರೆ ಇಲ್ಲೊಂದು ಅಪರೂಪದ ಘಟನೆಯಿದೆ. ಟೆಸ್ಟ್ ಕ್ರಿಕೆಟಿಗ ಅನ್ನಿಸಿಕೊಳ್ಳೋಕೆ ಆಟಗಾರನೊಬ್ಬ ಬರೋಬ್ಬರಿ 50 ವರ್ಷಗಳ ಕಾಲ ಕಾದಿರುವ ಗಮ್ಮತ್ತಿನ ಕತೆಯೊಂದು ಇಂಗ್ಲೆಂಡ್‌ನಲ್ಲಿ ಕಾಣಸಿಕ್ಕಿದೆ.

ಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿ

ಇಂಗ್ಲೆಂಡ್‌ ಪರ ಒಂದೇ ಟೆಸ್ಟ್ ಪಂದ್ಯವನ್ನಾಡಿ ಸರಿಯಾಗಿ 50 ವರ್ಷ ವರ್ಷಗಳ ಬಳಿಕ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಅಲನ್ ಜೋನ್ಸ್ ಟೆಸ್ಟ್ ಕ್ರಿಕೆಟಿಗನಾಗಿ ಗುರುತಿಸಿಕೊಂಡಿದ್ದಾರೆ. ಜೋನ್ಸ್ 1970 ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯವನ್ನಾಡಿದ್ದರು.

ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!

ಪ್ರತಿಭಾನ್ವಿತ ಕ್ರಿಕೆಟಿಗನೊಬ್ಬ ವಿಚಿತ್ರ ಸನ್ನಿವೇಶಕ್ಕೆ ಸಿಕ್ಕಿ ಮೂಲೆಗುಂಪಾದ ಕುತೂಹಲಕಾರಿ ಕತೆಯಿದು. ಮುಂದೆ ಓದಿ ನೋಡಿ..

ರೆಸ್ಟ್ ಆಫ್‌ ದ ವರ್ಲ್ಡ್‌ XI ವಿರುದ್ಧ ಪಂದ್ಯ

ರೆಸ್ಟ್ ಆಫ್‌ ದ ವರ್ಲ್ಡ್‌ XI ವಿರುದ್ಧ ಪಂದ್ಯ

ಅಲನ್ ಜೋನ್ಸ್ 1970ರಲ್ಲಿ ರೆಸ್ಟ್ ಆಫ್‌ ದ ವರ್ಲ್ಡ್‌ XI vs ಇಂಗ್ಲೆಂಡ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದರು. ಆದರೆ ಟೆಸ್ಟ್ ಕ್ರಿಕೆಟ್‌ನದ್ದೇ ಸ್ಥಾನಮಾನವನ್ನು ಹೊಂದಿರುವ ಪಂದ್ಯಗಳನ್ನು ನಂತರ 1972ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಡೌನ್‌ಗ್ರೇಡ್ ಮಾಡಿತು. ಹೀಗಾಗಿ ಟೆಸ್ಟ್ ಆಡಿಯೂ ಜೋನ್ಸ್‌ಗೆ ಟೆಸ್ಟ್‌ ಕ್ರಿಕೆಟರ್ ಅನ್ನಿಸಿಕೊಳ್ಳುವ ಅವಕಾಶ ಕೈತಪ್ಪಿತು.

50 ವರ್ಷಗಳ ಕಾಲ ಕಾದ ಜೋನ್ಸ್

50 ವರ್ಷಗಳ ಕಾಲ ಕಾದ ಜೋನ್ಸ್

ಆವತ್ತಿನ ಪಂದ್ಯದಲ್ಲಿ ಜೋನ್ಸ್ 0 ಮತ್ತು 5 ರನ್ನಿಗೆ ಮೈಕ್ ಪ್ರಾಕ್ಟರ್ ವಿಕೆಟ್ ಒಪ್ಪಿಸಿದ್ದರು. ಅದಾಗಿ ಜೋನ್ಸ್ ಅವರಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನವೇ ಸಿಕ್ಕಿರಲಿಲ್ಲ. ಹೀಗಾಗಿ ಜೋನ್ಸ್ 50 ವರ್ಷಗಳ ಕಾಲ ಟೆಸ್ಟ್‌ ಕ್ರಿಕೆಟರ್ ಎನ್ನುವು ಹಿರಿಮೆಯಿಂದ ಹೊರ ನಿಂತು ಕಾಯಬೇಕಾಗಿ ಬಂದಿತ್ತು.

ಇಂಗ್ಲೆಂಡ್‌ನಿಂದ ಗೌರವ ಕ್ಯಾಪ್

ಇಂಗ್ಲೆಂಡ್‌ನಿಂದ ಗೌರವ ಕ್ಯಾಪ್

ಸದ್ಯ 81ರ ಹರೆಯದವರಾಗಿವ ಜೋನ್ಸ್‌ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ ಈಗ ಅಧಿಕೃತವಾಗಿ 696ನೇ ಕ್ಯಾಪ್ ನೀಡಿ ಗೌರವಿಸಿದೆ. ಪ್ರಸ್ತುತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಕ್ಯಾಪ್ ವಿತರಣಾ ಕಾರ್ಯಕ್ರಮವನ್ನು ವೀಡಿಯೊ ಮೂಲಕ ನಡೆಸಲಾಗಿದೆ.

ಪ್ರಥಮದರ್ಜೆ ನೋಡಿ, ಅಬ್ಬಬ್ಬಾ!

ಪ್ರಥಮದರ್ಜೆ ನೋಡಿ, ಅಬ್ಬಬ್ಬಾ!

ಕ್ಯಾಪ್ ಸ್ವೀಕರಿಸಿ ತಲೆಗೇರಿಸಿದ ಜೋನ್ಸ್ 'ಈ ಕ್ಯಾಪ್ ನನ್ನ ತಲೆಗೆ ಸರಿಯಾಗಿ ಹೊಂದುತ್ತದೆ. ಈಗ ನಾನು ಹೆಲ್ಮೆಟ್‌ಗಾಗಿ ಕಾಯುತ್ತಿದ್ದೇನೆ,' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದರು. ಅಂದ್ಹಾಗೆ ಜೋನ್ಸ್ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಗಳಿಸಿದ ಒಟ್ಟು ರನ್ 36,049. ಇದು ಐಸಿಸಿ ಮಂಜೂರು ಮಾಡಿದ ಟೆಸ್ಟ್‌ನಲ್ಲಿ ಆಡದ ಆಟಗಾರನೊಬ್ಬ ಬಾರಿಸಿದ ಅತ್ಯಧಿಕ ರನ್ ಆಗಿ ಗುರುತಿಸಿಕೊಂಡಿದೆ.

ಕ್ಯಾಪ್, ಬ್ಲೇಸರ್, ಸ್ವೆಟರ್ ಧರಿಸಲಾಗಲಿಲ್ಲ

ಕ್ಯಾಪ್, ಬ್ಲೇಸರ್, ಸ್ವೆಟರ್ ಧರಿಸಲಾಗಲಿಲ್ಲ

'ಯಾವಾಗ ಅವರು ನನ್ನಲ್ಲಿದ್ದ ಸಂಪೂರ್ಣ ಇಂಗ್ಲೆಂಡ್ ಕ್ಯಾಪ್ ಅನ್ನು ನಿರ್ಲಕ್ಷಿಸಿದರೋ ಆಗ ಭಿನ್ನತೆ ಸೃಷ್ಟಿಯಾಯಿತು. ನೀವು ಸಂಪೂರ್ಣವಾಗಿ ಇಂಗ್ಲೆಂಡ್ ಆಟಗಾರನಲ್ಲ ಎಂದು ಆಗ ನಿಮಗೆ ಅನ್ನಿಸತೊಡಗುತ್ತದೆ. ನನಗೆ ಕ್ಯಾಪ್, ಬ್ಲೇಸರ್, ಸ್ವೆಟರ್, ಟೈ ಎಲ್ಲ ಸಿಕ್ಕಿತ್ತು. ಆದರೆ ಟೆಸ್ಟ್‌ ಸರಣಿಯನ್ನೇ ನನ್ನಿಂದ ಕಿತ್ತುಕೊಂಡಿದ್ದರಿಂದ ನನಗೆ ಅವುಗಳನ್ನೆಲ್ಲ ಧರಿಸಲಾಗಲಿಲ್ಲ,' ಎಂದು ಜೋನ್ಸ್ ಹೇಳಿದ್ದಾರೆ.

Story first published: Friday, June 19, 2020, 10:42 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X