ರೋಹಿತ್ ಅದ್ಭುತ ನಾಯಕ: ಬೌಲರ್‌ಗಳ ನಿರ್ವಹಣೆ ವಿಚಾರವಾಗಿ ಶಬ್ಬಾಷ್‌ಗಿರಿ ನೀಡಿದ ಇರ್ಫಾನ್ ಪಠಾಣ್

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ರೋಹಿತ್ ಶರ್ಮಾ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿದ್ದರೂ ತಂಡದಲ್ಲಿ ಬೌಲರ್‌ಗಳನ್ನು ನಿರ್ವಹಣೆ ಮಾಡಿರುವ ವಿಚಾರವಾಗಿ ಪಠಾಣ್ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ. ರೋಹಿತ್ ಶರ್ಮಾರನ್ನು ಅದ್ಭುತ ನಾಯಕ ಎಂದು ಕೊಂಡಾಡಿದ್ದಾರೆ ಇರ್ಫಾನ್ ಪಠಾಣ್.

ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ದ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮಾ ಅವರ ಕೆಲ ನಿರ್ಧಾರಗಳ ಬಗ್ಗೆ ಸಾಕಷ್ಟು ಟೀಕೆಗಳು ಬಂದಿದೆ. ಕೆಲ ನಿರ್ಧಾರಗಳ ವಿಚಾರವಾಗಿ ಪ್ರಶ್ನೆಗಳು ಎದ್ದಿದೆ. ಆದರೆ ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರನ್ನು ಇರ್ಫಾನ್ ಪಠಾಣ್ ಮೆಚ್ಚಿಕೊಂಡು ಮಾತನಾಡಿದ್ದಾರೆ. ಈ ಮೂಲಕ ಭಾರತೀಯ ನಾಯಕನಿಗೆ ಬೆಂಬಲ ಸೂಚಿಸಿದ್ದಾರೆ.

IND vs PAK: ಸೂಪರ್ 4 ಸೋಲಿಗೆ ಅರ್ಷ್‌ದೀಪ್ ಕ್ಯಾಚ್ ಬಿಟ್ಟದ್ದೇ ಕಾರಣ; ಕೊಹ್ಲಿ ಹೇಳಿದ್ದಿಷ್ಟು!IND vs PAK: ಸೂಪರ್ 4 ಸೋಲಿಗೆ ಅರ್ಷ್‌ದೀಪ್ ಕ್ಯಾಚ್ ಬಿಟ್ಟದ್ದೇ ಕಾರಣ; ಕೊಹ್ಲಿ ಹೇಳಿದ್ದಿಷ್ಟು!

ಇರ್ಫಾನ್ ಪಠಾಣ್ ಭಾರತೀಯ ನಾಯಕನ ಬಗ್ಗೆ ಮಾತನಾಡುತ್ತಾ "ಒಬ್ಬ ನಾಯಕನನ್ನು ಎರಡು ವಿಷಯಗಳ ಮೇಲೆ ಪರೀಕ್ಷಿಸಬಹುದು, ವಿಶೇಷವಾಗಿ ಬೌಲರ್ ಅನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಮೊದಲ ಅಂಶವಾಗಿದೆ. ವಿಶೇಷವಾಗಿ ಬೌಲರ್‌ಗಳು ಹೊಸಬರಾಗಿರುವಾಗ ಮತ್ತು ರನ್ ರಕ್ಷಣೆ ಮಾಡುವ ವಿಚಾರವಾಗಿ. ಈ ವಿಚಾರವಾಗಹಿ ನಾನು ರೋಹಿತ್ ಶರ್ಮಾ ನಿಭಾಯಿಸುವ ರೀತಿಯನ್ನು ಅನೇಕ ಬಾರಿ ನೋಡಿದ್ದೇನೆ. ಆತನೋರ್ವ ಅದ್ಭುತ ನಾಯಕ. ಅವರು ಬೌಲರ್‌ಗಳನ್ನು ಚೆನ್ನಾಗಿ ನಿರ್ವಹಿಸುತ್ತಾರೆ. ಯಾವ ಬೌಲರ್ ಅನ್ನು ಯಾವಾಗ ಆಡಬೇಕೆಂದು ಅವರಿಗೆ ತಿಳಿದಿದೆ" ಎಂದು ಪಠಾಣ್ ಸ್ಟಾರ್ ಸ್ಪೋರ್ಟ್ಸ್ ಶೋ 'ಫಾಲೋ ದಿ ಬ್ಲೂಸ್'ನಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಏಷ್ಯಾಕಪ್ 2022 ಟೂರ್ನಿ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಸೂಪರ್ 4 ಹಂತದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸುವ ಮೂಲಕ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಿದ್ದು ಮುಂದಿನ ಪಂದ್ಯಗಳು ಕುತೂಹಲ ಮೂಡಿಸಿದೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕಾರಣ ಭಾರತ ತಂಡ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ. ಹಾಗಿದ್ದರೆ ಮಾತ್ರವೇ ಫೈನಲ್ ಹಾದಿ ಸಾಧ್ಯ.

ಏಷ್ಯಾ ಕಪ್‌ನ ಸೂಪರ್ 4 ಹಂತದ ಪಂದ್ಯಗಳು ನಡೆಯುತ್ತಿದ್ದು ಭಾರತ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿರುವ ಭಾರತ ಮುಂದಿನ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದರೆ ಮಾತ್ರವೇ ಫೈನಲ್ ಸ್ಥಾನದ ಮೇಲೆ ಕಣ್ಣಿಡಲು ಸಾಧ್ಯ. ಶ್ರೀಲಂಕಾ ವಿರುದ್ಧ ಮಂಗಳವಾರ ಭಾರತ ಸೆಣೆಸಾಡಲಿದ್ದು ಈ ಕಾರಣದಿಂದಾಗಿ ಹೆಚ್ಚು ಕುತೂಹಲ ಮೂಡಿಸಿದೆ.

IND vs PAK: ಅರ್ಷ್‌ದೀಪ್ ಕ್ಯಾಚ್ ಬಿಟ್ಟಿದ್ದಕ್ಕೆ ಮೈದಾನದಲ್ಲೇ ರೋಹಿತ್ ಆಕ್ರೋಶ; ವಿಡಿಯೋ ವೈರಲ್IND vs PAK: ಅರ್ಷ್‌ದೀಪ್ ಕ್ಯಾಚ್ ಬಿಟ್ಟಿದ್ದಕ್ಕೆ ಮೈದಾನದಲ್ಲೇ ರೋಹಿತ್ ಆಕ್ರೋಶ; ವಿಡಿಯೋ ವೈರಲ್

ಶ್ರೀಲಂಕಾ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಲು ಯಶಸ್ವಿಯಾಗಿತ್ತು. ಈ ಮೂಲಕ ಲೀಗ್ ಹಂತದ ಹೀನಾಯ ಸೋಲಿಗೆ ಶ್ರೀಲಂಕಾ ತಿರುಗೇಟು ನೀಡಿದೆ. ಇದೀಗ ಭಾರತಕ್ಕೂ ಕಠಿಣ ಪೈಪೋಟಿ ನೀಡುವ ಹುಮ್ಮಸ್ಸಿನಲ್ಲಿರುವ ಶ್ರೀಲಂಕಾ ಫೈನಲ್ ಹಂತಕ್ಕೇರಲು ಸರ್ವ ಪ್ರಯತ್ನ ನಡೆಸಲಿದೆ.

ಸಂಪೂರ್ಣ ಸ್ಕ್ವಾಡ್
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್, ಯುಜುವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ , ಆವೇಶ್ ಖಾನ್

ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಷೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ, ದಿನೇಶ್ ಚಂಡಿಮಲ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸೆ, ಅಶೇನ್ ಬಂಡಾರ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮತೀಶ ಪತಿರಣ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, September 5, 2022, 23:54 [IST]
Other articles published on Sep 5, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X