11ನೇ ಇಂಡೋರ್ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ

ಸಿಡ್ನಿ, ಜನವರಿ 22: ಅಕ್ಟೋಬರ್ 10ರಿಂದ 17ರ ವರೆಗೆ ನಡೆಯಲಿರುವ 11ನೇ ಆವೃತ್ತಿಯ ಇಂಡೋರ್ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿಕೊಳ್ಳಲಿದೆ. ಟೂರ್ನಿಯ ಪಂದ್ಯಗಳು ಮೆಲ್ಬರ್ನ್‌ನ ಕೇಸಿ ಸ್ಟೇಡಿಯಂ ಮತ್ತು ಸಿಟಿಪವರ್ ಸೆಂಟರ್ ಸ್ಟೇಡಿಯಂಗಳಲ್ಲಿ ನಡೆಯಲಿರುವುದಾಗಿ ವಿಶ್ವ ಇಂಡೋರ್ ಕ್ರಿಕೆಟ್ ಫೆಡರೇಷನ್ ಘೋಷಿಸಿದೆ.
ಇಂಡೋರ್ ಕ್ರಿಕೆಟ್ ವಿಶ್ವಕಪ್ ಕಡೆಯ ಆವೃತ್ತಿ 2017ರಲ್ಲಿ ದುಬೈನಲ್ಲಿ ನಡೆದಿತ್ತು. ಪುರಷರ ಮತ್ತು ಮಹಿಳೆಯರ ಎರಡೂ ವಿಭಾಗದಲ್ಲಿ ಆಸ್ಟ್ರೇಲಿಯಾ ಹಾಲಿ ಚಾಂಪಿಯನ್ ಎನಿಸಿಕೊಂಡಿದೆ. ಈ ಬಾರಿಯೂ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಆಸೀಸ್ ಕಣ್ಣಿಟ್ಟಿದೆ.
ಈ ಟೂರ್ನಿಯಲ್ಲಿ ಒಟ್ಟು 10 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ನಾಲ್ಕು ಗುಂಪುಗಳ ಮಧ್ಯೆ ಪಂದ್ಯಗಳು ನಡೆಯಲಿವೆ. ಅಲ್ಲದೆ ಅಂಡರ್ 21 ಪುರುಷರು, ಮಹಿಳೆಯರು ಮತ್ತು ಓಪನ್ ವಿಭಾಗದ ಪುರುಷರು, ಮಹಿಳೆಯ ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ.
ಕ್ರಿಕೆಟ್ ಆಸ್ಟ್ರೇಲಿಯಾದ ಕಮ್ಯುನಿಟಿ ಕ್ರಿಕೆಟ್‌ನ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಆಗಿರುವ ಬೆಲಿಂಡಾ ಕ್ಲಾರ್ಕ್ ಈ ಬಗ್ಗೆ ಮಾತನಾಡಿ, '2020ರ ಇಂಡೋರ್ ಕ್ರಿಕೆಟ್ ವಿಶ್ವಕಪ್‌ಗಾಗಿ ನಾವು ವಿಶ್ವದ ಶ್ರೇಷ್ಠ ಆಟಗಾರರನ್ನು ಆಹ್ವಾನಿಸಲು ಎದುರು ನೋಡುತ್ತಿದ್ದೇವೆ,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications