ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾನಿಯಾ ಮಿರ್ಜಾಗೆ ಕಿರುಕುಳ ಆರೋಪ, ಬಾಂಗ್ಲಾ ಕ್ರಿಕೆಟರ್ ಗೆ ನಿಷೇಧ

By Mahesh
Bangladeshi Cricketer Who Eve-teased Sania Mirza Faces Six-month Ban

ಬೆಂಗಳೂರು, ಸೆಪ್ಟೆಂಬರ್ 03: ಬಾಂಗ್ಲಾದೇಶದ ವಿವಾದಿತ ಕ್ರಿಕೆಟರ್ ಸಬ್ಬೀರ್ ರೆಹಮಾನ್ ಅವರಿಗೆ ಕೊನೆಗೂ ನಿಷೇಧ ಹೇರಲಾಗಿದೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಫೇಸ್ ಬುಕ್ ನಲ್ಲಿ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಸಬ್ಬೀರ್ ಅವರಿಗೆ 6 ತಿಂಗಳ ನಿಷೇಧ ಹೇರಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ(ಬಿಸಿಬಿ) ಪ್ರಕಟಿಸಿದೆ.

ಈ ಅವಧಿಯಲ್ಲಿ ಫೆಬ್ರವರಿ 2019ರ ತನಕ ಸಬ್ಬೀರ್ ಅವರು ಯಾವುದೇ ದೇಶಿ ಹಾಗೂ ಆಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಬಿಸಿಬಿ ಸೂಚಿಸಿದೆ.

ಢಾಕಾಗೆ ತೆರಳಿ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ನಲ್ಲಿ ಆಡುತ್ತಿದ್ದೆ. ಅಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟರ್ ರೊಬ್ಬರು ಪಂದ್ಯ ನೋಡಲು ಬಂದಿದ್ದ ನನ್ನ ಪತ್ನಿ ಸಾನಿಯಾಗೆ ಕಿರುಕುಳ ನೀಡಿದ್ದರು ಎಂದು ಸಾನಿಯಾ ಪತಿ, ಪಾಕಿಸ್ತಾನಿ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಅವರು ಬಾಂಗ್ಲಾ ಕ್ರಿಕೆಟ್​ ಮಂಡಳಿಗೆ ದೂರು ನೀಡಿದ್ದರು.

Bangladeshi Cricketer Who Eve-teased Sania Mirza Faces Six-month Ban

ನಾಲ್ಕು ವರ್ಷಗಳ ಹಿಂದೆ ಸಾನಿಯಾ ಬಗ್ಗೆ ಫೇಸ್ ಬುಕ್ ನಲ್ಲಿ ಸಬ್ಬೀರ್ ಅವರು ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಸಬ್ಬೀರ್ ವರ್ತನೆಯಿಂದ ಬೇಸರಕ್ಕೊಳಗಾಗಿದ್ದ ಪತಿ ಶೋಯಿಬ್ ಮಲ್ಲಿಕ್, ಡಾಕಾ ಕ್ರಿಕೆಟ್ ಸಮಿತಿಗೆ ಲಿಖಿತ ದೂರು ನೀಡಿದ್ದರು

ಈ ಕುರಿತಂತೆ ಕ್ರಿಕೆಟ್ ಸಮಿತಿಯು ತನಿಖೆ ಪೂರ್ಣಗೊಳಿಸಿ, ಸಬ್ಬೀರ್ ಗೆ ನಿಷೇಧ ಹೇರಲಾಗಿದೆ. ಅಭಿಮಾನಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಈಗಾಗಲೇ ನಿಷೇಧ ಅನುಭವಿಸುತಿದ್ದಾರೆ. 11 ಟೆಸ್ಟ್. 54 ಏಕದಿನ ಹಾಗೂ 41 ಟಿ20 ಪಂದ್ಯಗಳನ್ನಾಡಿರುವ ಸಬ್ಬೀರ್ ಅವರು ತಮ್ಮ ನಡವಳಿಕೆ ಕಾರಣದಿಂದ ಏಷ್ಯಾ ಕಪ್ ಗೂ ಆಯ್ಕೆಯಾಗಲು ಸಾಧ್ಯವಾಗಿಲ್ಲ.

Story first published: Monday, September 3, 2018, 13:44 [IST]
Other articles published on Sep 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X