ರೋಹಿತ್ ಶರ್ಮಾ ಗಿಂತಲೂ ಧೋನಿ ಕಳಪೆಯೇ: ಅಭಿಮಾನಿಗಳ ಆಕ್ರೋಶ

Posted By:
BCCI giving less money to MS Dhoni than Rohit Sharma

ನವ ದೆಹಲಿ, ಮಾರ್ಚ್ 08: ಬಿಸಿಸಿಐ ಬಿಡುಗಡೆ ಮಾಡಿರುವ ಭಾರತ ಕ್ರಿಕೆಟ್ ತಂಡದ ಆಟಗಾರರ ನೂತನ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ ಧೋನಿ ಅವರಿಗೆ ಎರಡನೇ ದರ್ಜೆ ಆಟಗಾರನ ಸ್ಥಾನ ನೀಡಲಾಗಿದೆ.

ಇದೇ ಮೊದಲ ಬಾರಿಗೆ ಎ+ ವಿಭಾಗವನ್ನು ಪರಿಚಯಿಸಿರುವ ಬಿಸಿಸಿಐ ಧೋನಿ ಅವರನ್ನು ಈ ಪಟ್ಟಿಯಿಂದ ಹೊರಗಿಟ್ಟಿದೆ. ಈ ಪಟ್ಟಿಯಲ್ಲಿ ನಾಯಕ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬುಮ್ರಾ ಅವರಿಗೆ ಮಾತ್ರ ಸ್ಥಾನ ನೀಡಲಾಗಿದ್ದು, ಈ ಪಟ್ಟಿಯಲ್ಲಿರುವವರಿಗೆ ವಾರ್ಷಿಕವಾಗಿ 7 ಕೋಟಿ ರೂಪಾಯಿಗಳನ್ನು ಬಿಸಿಸಿಐ ಸಂಭಾವನೆಯಾಗಿ ನೀಡುತ್ತಿದೆ.

ಸ್ಟಾರ್ ಆಟಗಾರರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರನ್ನು ಎರಡನೇ ದರ್ಜೆ ಆಟಗಾರರ ಪಟ್ಟಿಗೆ ಸೇರಿಸಿದ್ದು, ಅವರಿಗೆ ವಾರ್ಷಿಕ ಕೇವಲ 5 ಕೋಟಿ ಸಂಭಾವನೆ ನೀಡಲಾಗುತ್ತಿದೆ. ದೇಶಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಆಟಗಾರನನ್ನು ಎರಡನೇ ದರ್ಜೆ ಆಟಗಾರರ ಪಟ್ಟಿಗೆ ಸೇರಿಸಿರುವುದಕ್ಕೆ ಧೋನಿ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ರೋಹಿತ್ ಶರ್ಮಾ ಗಿಂತಲೂ ಧೋನಿ ಕಳಪೆ ಆಟಗಾರನೇ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಫಾರಮ್‌ನಲ್ಲಿ ಇಲ್ಲದ ರೋಹಿತ್ ಶರ್ಮಾ ಅವರಿಗೆ ಪ್ರಥಮ ದರ್ಜೆ ಸ್ಥಾನ ನೀಡಿ ತಂಡದ ಗೆಲುವಿಗೆ ಬೆನ್ನೆಲುಬಾಗಿ ನಾಯಕ ಕೊಹ್ಲಿಗೆ ಅಂಗಳದಲ್ಲಿ ಸಾಥ್ ನಿಡುವ ಧೋನಿಯನ್ನು ಎರಡನೇ ದರ್ಜೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಸಿ ದರ್ಜೆಯ ಆಟಗಾರರ ಪಟ್ಟಿಯಲ್ಲಿ ಅನುಭವಿ ಆಟಗಾರ ಸುರೇಶ್ ರೈನಾ ಅವರಿಗೆ ಸ್ಥಾನ ನೀಡಿರುವ ಬಗ್ಗೆಯೂ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

Story first published: Thursday, March 8, 2018, 12:28 [IST]
Other articles published on Mar 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ