ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಹೆಡ್‌ ಕೋಚ್‌ ಸ್ಥಾನಕ್ಕೆ ಬಂದ ಅರ್ಜಿಗಳೆಷ್ಟು ಗೊತ್ತಾ?!

BCCI receives over 2000 applications for Team India head coach position?

ಬೆಂಗಳೂರು, ಆಗಸ್ಟ್ 1: ಭಾರತ ಕ್ರಿಕೆಟ್ ತಂಡ ಮುಖ್ಯ ಕೋಚ್ ಸ್ಥಾನಕ್ಕಿರುವ ಮಹತ್ವ ನಿಮಗೆಲ್ಲರಿಗೂ ತಿಳಿದೇಯಿದೆ. ಈ ಸ್ಥಾನಕ್ಕೆ ಆಯ್ಕೆ ಆಗೋ ವ್ಯಕ್ತಿಯ ಕೆಳಗೆ ದೇಶದ ಶ್ರೇಷ್ಠ ಕ್ರಿಕೆಟಿಗರು ತರಬೇತಿ, ಮಾರ್ಗದರ್ಶನ, ಸಲಹೆ ಪಡೆಯಲಿದ್ದಾರೆ. ಹಾಗಾದರೆ ಟೀಮ್ ಇಂಡಿಯಾ ಹೆಡ್‌ ಕೋಚ್ ಸ್ಥಾನಕ್ಕೆ ಬಂದ ಒಟ್ಟು ಅರ್ಜಿಗಳೆಷ್ಟು ಗೊತ್ತಾ? ಬರೋಬ್ಬರಿ 2000!.

ವಿಜಿ ಸಿದ್ಧಾರ್ಥ ಸಾವಿನ ಬಳಿಕ ಭಾವನಾತ್ಮಕ ಸಂದೇಶ ಬರೆದ ಆರ್ ಅಶ್ವಿನ್ವಿಜಿ ಸಿದ್ಧಾರ್ಥ ಸಾವಿನ ಬಳಿಕ ಭಾವನಾತ್ಮಕ ಸಂದೇಶ ಬರೆದ ಆರ್ ಅಶ್ವಿನ್

ಹಿಂದೆ ತಂಡವನ್ನು ಮುನ್ನಡೆಸಿದ್ದ ರವಿ ಶಾಸ್ತ್ರಿ ಅವರ ಅವಧಿ ಪೂರ್ಣಗೊಂಡಿದೆ. ಹೀಗಾಗಿ ಬಿಸಿಸಿಐಯು ಕ್ರಿಕೆಟ್ ತಂಡದ ಮುಖ್ಯ ಕೋಚ್ ಸೇರಿ ಬೆಂಬಲ ಸಿಬ್ಬಂದಿಗಳ ಸ್ಥಾನಗಳಿಗೆ ಅರ್ಜಿ ಕರೆದಿತ್ತು. ಆದರೆ ಬರೀ ಹೆಡ್‌ಕೋಚ್‌ ಸ್ಥಾನಕ್ಕಾಗಿಯೇ ಬಿಸಿಸಿಐ ಸುಮಾರು 2000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ ಎಂದಿದೆ ವರದಿಯೊಂದು.

ಟ್ವಿಟರ್‌ ಮೂಲಕ ದೇಶ ಪ್ರೇಮದ ಸಂದೇಶ ಸಾರಿದ ರೋಹಿತ್‌ ಶರ್ಮಾಟ್ವಿಟರ್‌ ಮೂಲಕ ದೇಶ ಪ್ರೇಮದ ಸಂದೇಶ ಸಾರಿದ ರೋಹಿತ್‌ ಶರ್ಮಾ

ಬ್ಯಾಂಗ್‌ಲೂರ್ ಮಿರರ್ (ಬೆಂಗಳೂರು ಮಿರರ್) ಪ್ರಕಟಿಸಿರುವ ವರದಿಯಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಬಂದಿರುವುದಾಗಿ ಹೇಳಲಾಗಿದೆ. ಮಾಹಿತಿಯ ಪ್ರಕಾರ ಹೆಡ್‌ ಕೋಚ್ ಸ್ಥಾನಕ್ಕೆ ಎಷ್ಟೇ ಅರ್ಜಿಗಳು ಬಂದಿದ್ದರೂ ಹಿಂದಿನ ಕೋಚ್ ಶಾಸ್ತ್ರಿಯೇ ಮತ್ತೆ ಜವಾಬ್ದಾರಿಯಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ.

ಎಂಎಸ್ ಧೋನಿ ವಿಕೆಟ್ ಕೀಪಿಂಗ್‌ ಬಗ್ಗೆ ಕಾಮೆಂಟ್ ಮಾಡಿದ ಎಂಎಸ್‌ಕೆ ಪ್ರಸಾದ್ಎಂಎಸ್ ಧೋನಿ ವಿಕೆಟ್ ಕೀಪಿಂಗ್‌ ಬಗ್ಗೆ ಕಾಮೆಂಟ್ ಮಾಡಿದ ಎಂಎಸ್‌ಕೆ ಪ್ರಸಾದ್

ಮುಖ್ಯ ಕೋಚ್ ಹುದ್ದೆಗೆ ಬಂದಿರುವ ಅರ್ಜಿಗಳಲ್ಲಿ ಆಸ್ಟ್ರೇಲಿಯನ್ ಆಲ್ ರೌಂಡರ್ ಟಾಮ್ ಮೂಡಿ, ನ್ಯೂಜಿಲೆಂಡ್ ಮಾಜಿ ಕೋಚ್ ಮತ್ತು ಸದ್ಯ ಕಿಂಗ್ಸ್ XI ಪಂಜಾಬ್ ತಂಡದ ಹೆಡ್ ಕೋಚ್ ಮೈಕ್ ಹಸನ್ ಹೆಸರುಗಳಿವೆ. ಅಲ್ಲದೆ ಭಾರತದ ರಾಬಿನ್ ಸಿಂಗ್ ಮತ್ತು ಲಾಲ್‌ಚಂದ್ ರಜಪೂತ್ ಕೂಡ ಈ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ಹೇಳಿದೆ.

ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ಐಪಿಎಲ್‌ 2020: ಮುಂಬೈ ಇಂಡಿಯನ್ಸ್‌ಗೆ ತೆಕ್ಕೆಗೆ ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌

ಆರಂಭದಲ್ಲಿ ಶ್ರೀಲಂಕಾ ಮಾಜಿ ಆಟಗಾರ, ಕೋಚ್ ಮಹೇಲಾ ಜಯವರ್ಧನೆ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಸ್ಥಾನದ ಆಕಾಂಕ್ಷಿ ಎನ್ನಲಾಗಿತ್ತು. ಆದರೆ ಜಯವರ್ಧನೆ ಇನ್ನೂ ಅರ್ಜಿ ಸಲ್ಲಿಸಿಲ್ಲ. ಅಂತೂ ಬಂದಿರುವ ದೊಡ್ಡ ಸಂಖ್ಯೆಯ ಅರ್ಜಿಗಳನ್ನು ಪರಿಶೀಲಿಸಲು ಬಿಸಿಸಿಐ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

Story first published: Thursday, August 1, 2019, 13:16 [IST]
Other articles published on Aug 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X