For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ವಿರುದ್ಧ ದೂರು ಪ್ರಕರಣ: ವರದಿಯನ್ನು ತಿರಸ್ಕರಿಸಿದ ಬಿಸಿಸಿಐ ಖಜಾಂಚಿ

BCCI treasurer Arun Dhumal denied reports of complaints against Virat Kohli

ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿಯ ವಿರುದ್ಧ ಟೀಮ್ ಇಂಡಿಯಾದ ಕೆಲ ಹಿರಿಯ ಆಟಗಾರರು ದೂರು ನೀಡಿದ್ದರು ಎಂಬ ವರದಿ ಮಂಗಳವಾರ ಸಾಕಷ್ಟು ಸುದ್ದಿಯಾಗಿತ್ತು. ಕ್ರಿಕೆಟ್ ಪ್ರೇಮಿಗಳ ವಲಯದಲ್ಲಿ ಈ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ಈ ವಿಚಾರವಾಗಿ ಬಿಸಿಸಿಐ ಖಜಾಂಜಿ ಅರುಣ್ ಧುಮಲ್ ಪ್ರತಿಕ್ರಿಯೆ ನಿಡಿದ್ದು ಅಂಥಾ ಯಾವುದೇ ಘಟನೆಗಳು ನಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಮಾಧ್ಯಮಗಳು ಹೀಗೆ ಕೆಟ್ಟದಾಗಿ ಬರೆಯುವದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಬಿಸಿಸಿಐನ ಮುಖ್ಯ ಕಾರ್ಯದರ್ಶಿ ಜಯ್ ಶಾಗೆ ಕರೆ ಮಾಡಿ ನಾಯಕ ವಿರಾಟ್ ಕೊಹ್ಲಿಯ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು. ನ್ಯೂಜಿಲೆಂಡ್ ತಂಡದ ವಿರುದ್ಧ ಸೌಥಾಂಪ್ಟನ್‌ನಲ್ಲಿ ನಡೆದ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಸೋತ ಬಳಿಕ ನಾಯಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಈ ಹಿರಿಯ ಆಟಗಾರರ ವಿರುದ್ಧ ಸಿಡಿದಿದ್ದರು ಎನ್ನಲಾಗಿದ್ದು ಅದಾದ ಬಳಿಕ ಈ ಬಿಕ್ಕಟ್ಟು ಉಂಟಾಗಿದೆ ಎಂದು ವರದಿಯಾಗಿತ್ತು.

ಈ ವರದಿಯ ಪ್ರಕಾರ ಅನುಭವಿ ಆಟಗಾರರಾದ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಕರೆ ಮಾಡಿ ತಮ್ಮ ವಿರುದ್ಧ ನಾಯಕ ವಿರಾಟ್ ಕೊಹ್ಲಿ ವರ್ತಿಸಿದ ರೀತಿಯನ್ನು ವಿವರಿಸಿದ್ದಾರೆ ಎಂದು ವರದಿಗಳು ಹೇಳಿದೆ. ಆದರೆ ಅರುಣ್ ಧುಮಲ್ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಇದೆಲ್ಲಾ ಕೇವಲ ಆಧಾರವಿಲ್ಲದ ವದಂತಿಗಳು ಮಾತ್ರ. ಇವುಗಳನ್ನು ಗಂಭೀರಾವಾಗಿ ಪರಿಗಣಿಸಬಾರದು ಎಂದಿದ್ದಾರೆ ಅರುಣ್ ಧುಮಲ್.

"ಮಾಧ್ಯಮಗಳು ಹೀಗೆ ಕೆಟ್ಟದಾಗೊ ಬರೆಯುವುದನ್ನು ನಿಲ್ಲಿಸಬೇಕು. ಈ ವಿಚಾರವಾಗಿ ನಾನು ಅಧಿಕೃತವಾಗಿ ಹೇಳುತ್ತಿದ್ದೇನೆ, ಯಾವುದೇ ಭಾರತೀಯ ಕ್ರಿಕೆಟ್ ಆಟಗಾರ, ಮೌಖಿಕವಾಗಿ ಅಥವಾ ಲಿಖಿತವಾಗಿ ಬಿಸಿಸಿಐಗೆ ದೂರನ್ನು ನೀಡಿಲ್ಲ. ಬಿಸಿಸಿಐ ಎಲ್ಲಾ ಸುಳ್ಳು ವರದಿಗಳಿಗೆ ಉತ್ತರಿಸುತ್ತಾ ಕೂರಲು ಸಾಧ್ಯವಿಲ್ಲ. ಇದಕ್ಕೂ ಮೊದಲು ಟೀಮ್ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಬದಲಾವನೆ ಮಾಡಲಾಗುತ್ತದೆ ಎಂದು ಕೂಡ ವರದಿಯಾಗಿತ್ತು. ಯಾರು ಹೇಳಿದ್ರು ಇದನ್ನು? ಎಂದು ಧುಮಲ್ ಪ್ರತಿಕ್ರಿಯಿಸಿದ್ದಾರೆ.

ಟೀಮ ್ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ20 ವಿಶ್ವಕಪ್‌ನ ನಂತರ ಟೀಮ್ ಇಂಡಿಯಾ ಟಿ20 ನಾಯಕಯತ್ವದಿಂದ ಹೊರಗುಳಿಯುವುದಾಗಿ ಘೋಷಿಸಿದ್ದರು. ಅದಾದ ಬಳಿಕ ಕೆಲ ವರದಿಗಳು ಬಿಸಿಸಿಐ ಕೊಹ್ಲಿ ರಾಜೂನಾಮೆ ಕೇಳಿತ್ತು ಎಂದು ವರದಿಯಾಗಿತ್ತು. ನಂತರ ಬಂದ ವರದಿಗಳಲ್ಲಿ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಏಕದಿನ ಹಾಗೂ ಟಿ20 ಎರಡೂ ತಂಡಗಳ ನಾಯಕತ್ವವನ್ನು ವಿರಾಟ್ ಕೊಹ್ಲಿ ತ್ಯಜಿಸಬೇಕೆಂದು ಬಯಸಿದ್ದರು ಎಂದು ವರದಿಯಾಗಿತ್ತು. ಈ ಎಲ್ಲಾ ವರದಿಗಳೂ ಭಾರತೀಯ ಕ್ರಿಕೆಟ್ ತಂಡಕ್ಕೆ ಸಾಕಷ್ಟು ಹಾನಿ ಮಾಡುತ್ತವೆ ಎಂದಿದ್ದಾರೆ ಅರುಣ್ ಧುಮಲ್.

"ಈ ರೀತಿಯ ಆಧಾರರಹಿತ ವರದಿಗಳು ಭಾರತೀಯ ಕ್ರಿಕೆಟದ ತಂಡಕ್ಕೆ ಹಾನಿಯುಂಟುಮಾಡುತ್ತದೆ. ಹಿರಿಯ ಪತ್ರಕರ್ತರು ನಿಜಕ್ಕೂ ಈ ಬಗ್ಗೆ ಮಾಹಿತಿಗಳನ್ನು ಕಲೆಹಾಕಿ ವರದಿಗಳನ್ನು ಮಾಡಿ, ಭಾರತೀಯ ಕ್ರಿಕೆಟ್ ತಮಡ ಹೀಗೆ ಮಾಡಬೇಕೆಂದು ಹೇಳಿಕೊಂಡಿದ್ದರೆ ನಾವು ಅವುಗಳನ್ನು ಗೌರವಿಸುತ್ತಿದ್ದೆವು. ಅದು ಅವರ ಅವಲೋಕನಗಳು ಮತ್ತು ಅವರ ಕರ್ತವ್ಯ. ಉತ್ತಮವಾದ ವರದಿಗಳನ್ನು ಓದುವಾಗ ನಾನು ಕೂಡ ಖುಷಿ ಪಡುತ್ತೇನೆ. ಆದರೆ ಯಾರ ಹೇಳಿಕೆಯನ್ನು ದೃಢೀಕರಿಸದೆ ಈ ರೀತಿಯ ವರದಿಗಳನ್ನು ಮಾಡುವುದು ಸರಿಯಲ್ಲ" ಎಂದಿದ್ದಾರೆ.

Story first published: Thursday, September 30, 2021, 13:32 [IST]
Other articles published on Sep 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+