ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವಿರುದ್ಧ ಭಾರತದ ಹೋರಾಟಕ್ಕೆ ದೇಣಿಗೆ ನೀಡಿದ ಬ್ರೆಟ್ ಲೀ

Brett Lee donates to Crypto Relief for purchase of oxygen supplies for Indian hospitals

ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ನಂತರ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಕೂಡ ಕೊರೊನಾ ವೈರಸ್ ವಿರುದ್ದದ ಭಾರತದ ಹೋರಾಟಕ್ಕೆ ಆರ್ಥಿಕವಾಗಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗಾಗಿ ಒಂದು ಬಿಟ್‌ಕಾಯಿನ್ ಅನ್ನು ದೇಣಿಗೆಯಾಗಿ ಕ್ರಿಫ್ಟೋ ರಿಲೀಫ್‌ಗೆ ನೀಡುವುದಾಗಿ ಬ್ರೆಟ್ ಲೀ ಘೋಷಿಸಿದ್ದಾರೆ.

"ನನ್ನ ಪಾಲಿಗೆ ಭಾರತ ಎರಡನೇ ಮನೆ ಇದ್ದ ಹಾಗೆ. ನಿವೃತ್ತಿಗೂ ಮುನ್ನ ಹಾಗೂ ನಿವೃತ್ತಿಯ ನಂತರವೂ ಭಾರತದಿಂದ ನಾನು ಪಡೆದ ಪ್ರೀತಿ ಹಾಗೂ ವಾತ್ಸಲ್ಯದಿಂದಾಗಿ ಭಾರತ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈಗ ಭಾರತದ ಜನರು ಈ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವುದು ನೋಡಲು ತುಂಬಾ ಬೇಸರವಾಗುತ್ತಿದೆ"

ಮುಂಬೈ ಆಟಗಾರರು ಮುಂದಿನ ವಾರ ಲಸಿಕೆ ಪಡೆಯಲಿದ್ದಾರೆ: ಕ್ರಿಸ್ ಲಿನ್ಮುಂಬೈ ಆಟಗಾರರು ಮುಂದಿನ ವಾರ ಲಸಿಕೆ ಪಡೆಯಲಿದ್ದಾರೆ: ಕ್ರಿಸ್ ಲಿನ್

"ಹಾಗಾಗಿ ಭಾರತಕ್ಕೆ ಸಹಾಯವನ್ನು ಮಾಡುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ಹೀಗಾಗಿ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕಗಳನ್ನು ಪೂರೈಕೆ ಮಾಡಲು ಸಹಾಯವಾಗುವಂತೆ ಒಂದು ಬಿಟ್‌ಕಾಯಿನ್ ಅನ್ನು ನಾನು ದಾನ ಮಾಡಲು ಬಯಸುತ್ತೇನೆ" ಎಂದು ಬ್ರೆಟ್ ಲೀ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಮುಂದುವರಿದು ಬ್ರೆಟ್ ಲೀ "ಈಗ ನಾವೆಲ್ಲಾ ಒಗ್ಗಟ್ಟಾಗುವ ಸಮಯ, ನಮ್ಮ ಕೈಯಿಂದಾಗುವಷ್ಟು ಸಮಾಯವನ್ನು ಅಗತ್ಯವಿರುವವರಿಗೆ ಮಾಡುವ ನಿರ್ಧಾರ ಕೈಗೊಳ್ಳಬೇಕು. ಈ ಕಠಿಣ ಸಂದರ್ಭದಲ್ಲಿ ಸಮಯಗಳನ್ನು ಪರಿಗಣಿಸದೆ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ" ಎಂದಿದ್ದಾರೆ.

"ಎಲ್ಲರೂ ಎಚ್ಚರಿಕೆಯಿಂದರಿ ಹಾಗೂ ಮನೆಯಲ್ಲಿಯೇ ಇರಿ. ಕೈಗಳನ್ನು ಸ್ವಚ್ಚಗೊಳಿಸುತ್ತಿರಿ. ತೀರ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಿ. ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ. ಸಹಾಯದ ಹಸ್ತವನ್ನು ನೀಡಿದ ಪ್ಯಾಟ್ ಕಮ್ಮಿನ್ಸ್ ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ" ಎಂದು ಬ್ರೆಟ್ ಲೀ ತಿಳಿಸಿದ್ದಾರೆ.

Story first published: Tuesday, April 27, 2021, 19:14 [IST]
Other articles published on Apr 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X