ಐಪಿಎಲ್ ನಡೆಯದಿದ್ದರೂ ವಿಶ್ವಕಪ್‌ನಲ್ಲಿ ಈ ಆಲ್‌ರೌಂಡರ್ ಭಾರತಕ್ಕೆ ಅಗತ್ಯ: ಹರ್ಭಜನ್ ಸಿಂಗ್

ಕೊರೊನಾ ವೈರಸ್‌ನ ಭೀಕರ ಹಾವಳಿಗೆ ವಿಶ್ವವೇ ಸ್ಥಬ್ಧವಾಗಿದೆ. ಎಲ್ಲಾ ಕ್ರೀಡಾ ಕೂಟಗಳೂ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಮುಂದೆ ವಿಶ್ವಕಪ್ ಇರುವುದರಿಂದ ಅದರ ಭವಿಷ್ಯವೂ ಸ್ಪಷ್ಟವಾಗಿಲ್ಲ. ಆದರೆ ವಿಶ್ವಕಪ್‌ಗೆ ಮುನ್ನ ತಂಡದಲ್ಲಿ ಸ್ಥಾನವನ್ನು ಪಡೆಯಲು ಐಪಿಎಲ್ ಮೂಲಕ ವೇದಿಕೆ ಪಡೆದುಕೊಳ್ಳಬೇಕೆಂದು ಕೊಂಡ ಅನೇಕ ಕ್ರಿಕೆಟಿಗರಿಗೆ ಇದೊಂದು ನಿಜಕ್ಕೂ ಅಗ್ನಿಪರೀಕ್ಷೆಯಾಗಿದೆ.

ಇಂತಾ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಟಗಾರನೋರ್ವ ಐಪಿಎಲ್ ನಡೆಯದೇ ಹೋದರೂ ಆತ ತಂಡದಲ್ಲಿ ಸ್ಥಾನ ಪಡೆಯಲೇಬೇಕು, ಆತನ ಅನಿವಾರ್ಯತೆ ಟೀಮ್ ಇಂಡಿಯಾಗೆ ಇದೆ ಎಂದು ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಅಧಿಕೃತವಾಗಿ 'ಇಂಡಿಯನ್ ಪ್ರೀಮಿಯರ್ ಲೀಗ್ 2020' ರದ್ದುಗೊಳಿಸಿದ ಬಿಸಿಸಿಐ!ಅಧಿಕೃತವಾಗಿ 'ಇಂಡಿಯನ್ ಪ್ರೀಮಿಯರ್ ಲೀಗ್ 2020' ರದ್ದುಗೊಳಿಸಿದ ಬಿಸಿಸಿಐ!

ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಬಗ್ಗೆ ಹರ್ಭಜನ್ ಸಿಂಗ್ ಈ ಮಾತನ್ನು ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯಾ ಗಾಯದ ಸಮಸ್ಯೆಗೆ ತುತ್ತಾದ ಕಾರಣ ಹಲವು ಸಮಯಗಳಿಂದ ಟೀಮ್ ಇಂಡಿಯಾದಿಂದ ದೂರವಾಗಿದ್ದರು. ಇತ್ತೀಚೆಗಷ್ಟೇ ಸಂಪೂರ್ಣ ಚೇತರಿಸಿಕೊಂಡು ಕ್ರಿಕೆಟ್ ಅಂಗಳಕ್ಕೆ ಪಾಂಡ್ಯಾ ಮತ್ತೆ ಕಾಲಿಟ್ಟಿದ್ದರು.

ಆದರೆ ಅಷ್ಟರಲ್ಲಿ ಕೊರೊನಾ ವೈರಸ್‌ಗೆ ಇಡೀ ಕ್ರೀಡಾ ಲೋಕವೇ ಸ್ತಬ್ಧವಾದ ಕಾರಣ ತಮ್ಮ ಸಾಮರ್ಥ್ಯ ಮತ್ತು ಫಾರ್ಮ್ ತೋರಿಸಲು ವೇದಿಕೆ ಸಿಗದಂತಾಗಿದೆ. ಆದರೆ ಇದು ಹಾರ್ದಿಕ್ ಪಾಂಡ್ಯಾಗೆ ಯಾವುದೇ ರೀತಿಯಲ್ಲು ಪರಿಣಾಮ ಬೀರದು ಎಂದು ಭಜ್ಜಿ ಹೇಳಿದ್ದಾರೆ. ಆತನಿದ್ದರೆ ತಂಡ ಸಮತೋಲನವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ದಾಲ್ಮಿಯಾ ಅಲ್ಲದಿದ್ದರೆ ಅಖ್ತರ್ ಕ್ರಿಕೆಟ್ ಜೀವನ 2000ದಲ್ಲೇ ಅಂತ್ಯ: ಮಾಜಿ ಪಿಸಿಬಿ ಅಧ್ಯಕ್ಷದಾಲ್ಮಿಯಾ ಅಲ್ಲದಿದ್ದರೆ ಅಖ್ತರ್ ಕ್ರಿಕೆಟ್ ಜೀವನ 2000ದಲ್ಲೇ ಅಂತ್ಯ: ಮಾಜಿ ಪಿಸಿಬಿ ಅಧ್ಯಕ್ಷ

ತಂಡದ ಸಮತೋಲನವನ್ನು ಕಾಪಾಡಲು ಹಾರ್ದಿಕ್ ಪಾಂಡ್ಯನಿಗೆ ಸಾಧ್ಯ. ಆತನನ್ನು ಐಪಿಎಲ್ ಫಾರ್ಮ್‌ನಿಂದ ಅಳೆಯುವುದು ಸರಿಯಲ್ಲ, ಆತನನ್ನು ತಂಡಕ್ಕೆ ಐಪಿಎಲ್ ಹೊರತಾಗಿಯೂ ಸೇರಿಸಿಕೊಳ್ಳಬೇಕು ಎಂದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಬಳಿಕ ಬೆನ್ನು ನೋವಿಗೆ ತುತ್ತಾಗಿ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಚೇತರಿಸಿದ ಪಾಂಡ್ಯಾ ಡಿವೈ ಪಾಟೀಮ್ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನವನ್ನು ನೀಡಿ ತಮ್ಮ ಪುನರಾಗಮನವನ್ನು ಸಾರಿದ್ದರು.

For Quick Alerts
ALLOW NOTIFICATIONS
For Daily Alerts
Story first published: Friday, April 17, 2020, 12:57 [IST]
Other articles published on Apr 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X