'ಯುಎಇ ಸುರಕ್ಷಿತವಲ್ಲ, ಐಪಿಎಲ್‌ಅನ್ನು ಭಾರತದಲ್ಲೇ ಆಯೋಜಿಸಿ'

ಐಪಿಎಲ್ 13ನೇ ಆವೃತ್ತಿ ಯುಎಇನಲ್ಲಿ ಆಯೋಜಿಸುವುದಕ್ಕೆ ಎಲ್ಲಾ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದೆ. ಈ ಮಧ್ಯೆ ಐಪಿಎಲ್ ಯುಎಇನಲ್ಲಿ ಕೂಡ ಸುರಕ್ಷಿತವಲ್ಲ ಎಂಬ ಮಾತನ್ನು ಆದಿತ್ಯ ವರ್ಮ ಹೇಳಿದ್ದು ಭಾರತದಲ್ಲೇ ನಡೆಸಿ ಎಂದು ಐಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಪತ್ರ ಬರೆದಿರುವುದಾಗಿ ಹೇಳಿದ್ದಾರೆ.
ಆದಿತ್ಯ ವರ್ಮ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ ಮೂಲ ಅರ್ಜಿದಾರ ಆಗಿದ್ದಾರೆ. ಈ ಬಾರಿಯ ಐಪಿಎಲ್‌ಅನ್ನು ಸೆಪ್ಟಂಬರ್ 19 ರಿಂದ ಆಯೋಜಿಸಲು ನಿರ್ಧರಿಸಲಾಗಿದ್ದು ಐಪಿಎಲ್ ಆಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಬಿಸಿಸಿಐ ಕಾಯುತ್ತಿದೆ. ಈ ಮಧ್ಯೆ ಭಾರತದಲ್ಲೇ ಯಾಕೆ ಐಪಿಎಲ್ ನಡೆಯಬೇಕೆಂದು ಆದಿತ್ಯ ವರ್ಮ ಕೆಲ ಕಾರಣಗಳನ್ನು ಮುಂದಿಟ್ಟು ಪತ್ರ ಬರೆದಿದ್ದಾರೆ.
ಪಿಟಿಐ ಗೊತೆಗೆ ಮಾತನಾಡಿದ ಆದಿತ್ಯ ವರ್ಮ 'ಯುಎಇನ ಅತಿ ದೊಡ್ಡ ಕ್ರೀಡಾಕೂಟವಾದ ದುಬೈ ರಗ್ಬಿ ಸೆವೆನ್ಸ್ ನವೆಂಬರ್‌ನಲ್ಲಿ ಆಯೋಜನೆಗೆ ನಿಗದಿಯಾಗಿತ್ತು. ಆದರೆ ಕೊರೊನ ಆವೈರಸ್‌ನ ಕಾರಣದಿಂದಾಗಿ ಅದನ್ನು ಮುಂದೂಡಲಾಗಿದೆ. ಹೀಗಿದ್ದಾಗ ಅದಕ್ಕೂ ಮುನ್ನವೇ ಐಪಿಎಲ್‌ಅನ್ನು ಅಲ್ಲಿ ಆಯೋಜಿಸಲು ಹೇಗೆ ಸಾಧ್ಯವಾಗುತ್ತದೆ. ಇದಕ್ಕಾಗಿ ಗಂಗೂಲಿಗೆ ಪತ್ರವನ್ನು ಬರೆದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಐದು ಲಕ್ಷದಷ್ಟು ಸಕ್ರಿಯ ಕೊರೊನ ವೈರಸ್ ಪ್ರಕರಣಗಳು ಹಾಗೂ 36000ದಷ್ಟು ಸಾವುನೋವುಗಳು ಸಂಭವಿಸಿದೆ. ಈ ಮಧ್ಯೆಯೂ ಯುಎಇನ ಮೂರು ವಿಭಿನ್ನ ಕ್ರೀಡಾಂಗಣಗಳಲ್ಲಿ ಐಪಿಎಲ್‌ಗಿಂತ ಮುಂಬೈನಲ್ಲಿ ಜೈವಿಕ ಸುರಕ್ಷಿತಾ ವಲಯವನ್ನು ನಿರ್ಮಾಣ ಮಾಡಿ ಐಪಿಎಲ್ ನಡೆಸುವುದು ಸೂಕ್ತ ಎಂದು ಒತ್ತಾಯಿಸಿದ್ದಾರೆ.
ಮುಂಬೈನಲ್ಲೇ ಐಪಿಎಲ್ ಆಯೋಜಿಸುವ ಬಗ್ಗೆ ಅವರು ಗರಿಷ್ಠ ಪ್ರಯತ್ನನ್ನು ಮಾಡಬಹುದಾಗಿತ್ತು ಎಂದು ವರ್ಮ ಹೇಳಿದ್ದಾರೆ. ಇನ್ನು ಭಾರತದಲ್ಲೇ ನಡೆದರೆ ವಿದೇಶಿ ಆಟಗಾರರು ಪಾಲ್ಗೊಳ್ಳಲು ಹಿಂಜರಿಯಬಹುದು ಎಂಎಂಬುದಕ್ಕೆ 60 ವಿದೇಶಿ ಆಟಗಾಋರ ಬದಲಿಗೆ ಭಾರತೀಯ ಆಟಗಾರರನ್ನೇ ಬಳಸಿಕೊಂಡು ಈ ಟೂರ್ನಿಯನ್ನು ನಡೆಸಬಹುದು ಎಂದು ಅವರು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications