ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಖಾಲಿ ಮೈದಾನದಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ!

Coronavirus: India may play against South Africa in empty Dharamsala stadium

ಧರ್ಮಶಾಲಾ, ಮಾರ್ಚ್ 11: ಗುರುವಾರ (ಮಾರ್ಚ್ 12) ನಡೆಯಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಮೊದಲ ಏಕದಿನ ಪಂದ್ಯ ಬಹುತೇಕ ಖಾಲಿ ಮೈದಾನದಲ್ಲಿ ನಡೆಯುವುದರಲ್ಲಿದೆ. ಕೊರೊನಾ ವೈರಸ್ ಭೀತಿ, ಇತ್ತಂಡಗಳ ಏಕದಿನ ಸರಣಿಗೂ ಹೊಡೆತ ನೀಡಿದೆ. ಇದೇ ಕಾರಣದಿಂದ ಮಾರ್ಚ್ 12ರಂದು 1.30 pmಗೆ ಆರಂಭಗೊಳ್ಳುವ ಅಂತಾರಾಷ್ಟ್ರೀಯ ಪಂದ್ಯದ ಟಿಕೆಟ್ ಕೊಳ್ಳುವವರೇ ಇಲ್ಲವಾಗಿದೆ.

ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!ಐಪಿಎಲ್ ಪಂದ್ಯಗಳ ವಿರುದ್ಧ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ!

ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯ ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿನ ಹಿಮಾಚಲ್ ಪ್ರದೇಶ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಪಿಸಿಎ) ಸ್ಟೇಡಿಯಂನಲ್ಲಿ ನಡೆಯಲಿದೆ. ಈ ತಾಣ ರಾಜ್ಯದ ರಾಜಧಾನಿಯಿಂದ ಸುಮಾರು 250 ಕಿಮೀ ದೂರದಲ್ಲಿ ಬರುತ್ತದೆ.

1
46133

ಎಬಿ ಡಿ'ವಿಲಿಯರ್ಸ್ ಕಮ್‌ಬ್ಯಾಕ್ ಕೆಲ ಆಟಗಾರರಿಗೆ ಇಷ್ಟವಾಗಲಾರದು: ಜಾಂಟಿ ರೋಡ್ಸ್ಎಬಿ ಡಿ'ವಿಲಿಯರ್ಸ್ ಕಮ್‌ಬ್ಯಾಕ್ ಕೆಲ ಆಟಗಾರರಿಗೆ ಇಷ್ಟವಾಗಲಾರದು: ಜಾಂಟಿ ರೋಡ್ಸ್

ಭಾರತ-ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯಕ್ಕೆ ಕೊರೊನಾ ವೈರಸ್ ಮಾಡಿರುವ ನಷ್ಟದ ಬಗ್ಗೆ, ತೊಂದರೆಯ ಬಗ್ಗೆ ಇಲ್ಲೊಂದು ಇಣುಕುನೋಟವಿದೆ.

ಖಾಲಿ ಖಾಲಿ ಮೈದಾನ

ಖಾಲಿ ಖಾಲಿ ಮೈದಾನ

ಭಾರತ ಆಡುವ ಯಾವುದೇ ಪಂದ್ಯಗಳ ವೇಳೆಯೂ ತುಂಬಿಕೊಂಡಿರುವ ಸ್ಟೇಡಿಯಂ ಈ ಬಾರಿ ಪಂದ್ಯದ ವೇಳೆ ಖಾಲಿ ಖಾಲಿ ಅನ್ನಿಸಿಕೊಳ್ಳಲಿದೆ. ಸುಮಾರು 22,000 ಜನರಿಗೆ ಬೇಕಾದ ಆಸನ ವ್ಯವಸ್ಥೆಯಿರುವ ಸ್ಟೇಡಿಯಂನಲ್ಲಿ ಮೊದಲ ಪಂದ್ಯಕ್ಕೆ ಶೇ. 40ರಷ್ಟು ಟಿಕೆಟ್‌ಗಳು ಮಾತ್ರ ಮಾರಾಟವಾಗಿವೆ. ಬುಧವಾರದ ವರೆಗೂ ಇಷ್ಟು ಟಿಕೆಟ್‌ಗಳು ಸೇಲಾಗಿವೆ ಎನ್ನುತ್ತಾರೆ ಆಯೋಜಕರು.

ಖಾಲಿ ಮೈದಾನಕ್ಕೆ ಕಾರಣ

ಖಾಲಿ ಮೈದಾನಕ್ಕೆ ಕಾರಣ

ಮಾರಕ ಸೋಂಕು ಕೊರೊನಾ ವೈರಸ್ ಹಬ್ಬುವುದನ್ನು ತಪ್ಪಿಸಲು ಜನ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಪ್ರಯಾಣ ಮತ್ತು ಸಾರ್ವಜನಿಕವಾಗಿ ಒಂದೆಡೆ ಸೇರುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮೈದಾನ ಈ ಬಾರಿ ಭರ್ತಿಯಾಗಿಲ್ಲ. ಕಾರ್ಪೊರೇಟ್ ಬಾಕ್ಸ್‌ಗಳೂ ಹೆಚ್ಚಿನವು ಖಾಲಿಖಾಲಿಯಾಗಿ ಉಳಿದಿವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಕುಸಿದ ಕಾರ್ಪೊರೇಟ್ ಬಾಕ್ಸ್‌ ಬೇಡಿಕೆ

ಕುಸಿದ ಕಾರ್ಪೊರೇಟ್ ಬಾಕ್ಸ್‌ ಬೇಡಿಕೆ

'ಈ ಬಾರಿ ಬರೀ ಎರಡು-ಮೂರು ಕಾರ್ಪೊರೇಟ್ ಬಾಕ್ಸ್‌ಗಳಷ್ಟೇ ಸೇಲಾಗಿವೆ,' ಎಂದು ಎಚ್‌ಪಿಸಿಎ ಕಾರ್ಯಕಾರಿ ಸಮಿತಿ ಹೇಳಿದೆ. ಧರ್ಮಶಾಲಾ ಸ್ಟೇಡಿಯಂನಲ್ಲಿ ಒಟ್ಟಿಗೆ 12 ಕಾರ್ಪೊರೇಟ್ ಬಾಕ್ಸ್‌ಗಳಿವೆ. ಪ್ರತಿ ಬಾಕ್ಸ್‌ನಲ್ಲೂ 20 ಆಸನ ವ್ಯವಸ್ಥೆಯಿದೆ. ಟಿ20 ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಿಗನುಸಾರ ಪ್ರತೀ ಪಂದ್ಯಕ್ಕೆ ಸುಮಾರು 2,00,000ರವರೆಗೂ ಪ್ರತೀ ಬಾಕ್ಸ್‌ಗಳ ಬೆಲೆಯಿರುತ್ತದೆ.

ಆಟಗಾರರಲ್ಲೂ ಭೀತಿ

ಆಟಗಾರರಲ್ಲೂ ಭೀತಿ

ಪ್ರವಾಸದ ವೇಳೆ ಕೈಕುಲುಕುವುದನ್ನು ಮಾಡಕೂಡದು ಎಂದು ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ತನ್ನ ಆಟಗಾರರಿಗೆ ಸೂಚಿಸಿದ್ದಾರೆ. ಮಂಗಳವಾರ (ಮಾರ್ಚ್ 10) ಭಾರತದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಕೂಡ ಮಾಸ್ಕ್‌ನೊಂದಿಗೆ ಕಾಣಿಸಿಕೊಂಡಿದ್ದರು (ಸಾಂಧರ್ಭಿಕ ಚಿತ್ರ).

Story first published: Thursday, March 12, 2020, 10:15 [IST]
Other articles published on Mar 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X