ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಆಡುವ ಆಸ್ಟ್ರೇಲಿಯಾ ಆಟಗಾರರಿಗೆ ನಿರ್ಬಂಧ ಹೇರಿದ ಸಿಎ

Cricket Australia imposes limitations on use of Australian players in IPL advertising

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಆಡುವ ಆಸ್ಟ್ರೇಲಿಯಾ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿರ್ಬಂಧ ಹೇರಿದೆ. ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ವೇಳೆ ಬೆಟ್ಟಿಂಗ್, ಫಾಸ್ಟ್ ಫುಡ್, ಮದ್ಯಪಾನ, ತಂಬಾಕಿನ ಉತ್ಪನ್ನಗಳ ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸಿಎ ಹೇಳಿದೆ.

ಕುಟುಂಬದ ಮುದ್ದಾದ ಫೋಟೋ ಹಂಚಿಕೊಂಡು ಮಗುವಿನ ಹೆಸರು ಘೋಷಿಸಿದ ನಟರಾಜನ್ಕುಟುಂಬದ ಮುದ್ದಾದ ಫೋಟೋ ಹಂಚಿಕೊಂಡು ಮಗುವಿನ ಹೆಸರು ಘೋಷಿಸಿದ ನಟರಾಜನ್

ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಇತ್ತೀಚಿನ ಪ್ರಕಟಣೆಯಲ್ಲಿ, ಐಪಿಎಲ್‌ನ ಎಲ್ಲಾ ಫ್ರಾಂಚೈಸಿಗಳಿಗೆ ಕ್ರಿಕೆಟ್‌ ಆಸ್ಟ್ರೇಲಿಯಾವನ್ನು ಉಲ್ಲೇಖಿಸಿ ಸೂಚನೆ ನೀಡಲಾಗಿದೆ. ಮುದ್ರಣ ಮಾದ್ಯಮಕ್ಕೆ ಐಪಿಎಲ್ ತಂಡಗಳ ಪ್ರಾಯೋಜಕರು ತಂಡದ ಸಂಪೂರ್ಣ ಫೋಟೋವನ್ನಷ್ಟೇ ಬಳಸಬಹುದು ಎಂದು ಬಿಸಿಸಿಐ ಹೇಳಿದೆ.

'ಪೂರ್ಣ ತಂಡದ ಫೋಟೋವನ್ನು ಭಾರತದಲ್ಲಿ ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿ ಐಪಿಎಲ್ ತಂಡದ ಪ್ರಾಯೋಜಕರು ಮಾತ್ರ ಬಳಸಬಹುದು ಮತ್ತು ಅಂತಹ ಯಾವುದೇ ಫೋಟೋ ಮುಖ್ಯವಾಗಿ ಆಲ್ಕೋಹಾಲ್, ಫಾಸ್ಟ್ ಫುಡ್/ ರೆಸ್ಟೋರೆಂಟ್‌ ವ್ಯವಹಾರದಲ್ಲಿ ತೊಡಗಿರುವ ಅಥವಾ ತಂಬಾಕು ಕಂಪನಿಯ ಹೆಸರು ಅಥವಾ ಬ್ರ್ಯಾಂಡಿಂಗ್ ಅನ್ನು ಒಳಗೊಂಡಿರಬಾರದು,' ಎಂದು ಬಿಸಿಸಿಐ ಸೂಚಿಸಿದೆ.

AUS vs NZ, 1ನೇ ಟಿ20: ಆರ್‌ಸಿಬಿ ಆಟಗಾರರ ಪ್ರದರ್ಶನ ಹೇಗಿತ್ತು ಗೊತ್ತಾ!?AUS vs NZ, 1ನೇ ಟಿ20: ಆರ್‌ಸಿಬಿ ಆಟಗಾರರ ಪ್ರದರ್ಶನ ಹೇಗಿತ್ತು ಗೊತ್ತಾ!?

Modi's best 3 advise to avoid covid 19 | Oneindia Kannada

ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಇನ್ನೂ ಕೆಲ ನಿರ್ಬಂಧಗಳನ್ನು ಹೇರಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಒಬ್ಬ ಆಟಗಾರ ಅಥವಾ ಆಸ್ಟ್ರೇಲಿಯಾ ರಾಜ್ಯದ ಒಬ್ಬ ಆಟಗಾರ ಇಲ್ಲವೆ ಬಿಗ್‌ ಬ್ಯಾಷ್‌ ಲೀಗ್‌ನ ಒಬ್ಬ ಆಟಗಾರನನ್ನಷ್ಟೇ ಜಾಹೀರಾತಿನಲ್ಲಿ ಬಳಸಬಹುದು. ಒಬ್ಬನಿಗಿಂತ ಹೆಚ್ಚು ಮಂದಿಯನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುವಂತೆ ಇಲ್ಲ ಎಂದು ಸಿಎ ಹೇಳಿದೆ.

Story first published: Wednesday, February 24, 2021, 23:12 [IST]
Other articles published on Feb 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X