ಕಾರ್ ಟೈರ್ ಸ್ಫೋಟ, ಪ್ರಾಣಾಪಾಯದಿಂದ ಪಾರಾದ ಸುರೇಶ್ ರೈನಾ

Posted By:

ಕಾನ್ಪುರ್, ಸೆಪ್ಟೆಂಬರ್ 13 : ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಸಂಚರಿಸುತ್ತಿದ್ದ ಕಾರಿನ ಟೈರ್ ಸಿಡಿದಿದ್ದು, ಅದೃಷ್ಟವಶಾತ್ ರೈನಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುರೇಶ್ ರೈನಾ ಅವರು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸಲು ಮಂಗಳವಾರ ಘಾಜಿಯಾಬಾದ್ ನಿಂದ ಕಾನ್ಪುರ್‍ ಗೆ ರೇಂಜ್ ರೋವರ್ ಕಾರಿಲ್ಲಿ ತೆರಳುತ್ತಿದ್ದರು. ವೇಳೆ ಇಟಾವಾದ ಫ್ರೆಂಡ್ಸ್ ಕಾಲೋನಿ ಬಳಿ ರೈನಾ ಸಂಚರಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Cricketer Suresh Raina Escapes Major Accident While Driving

ಘಟನೆ ನಡೆದ ಬಳಿಕ ಸ್ಥಳೀಯ ಪೊಲೀಸರು ರೈನಾಗೆ ಮತ್ತೊಂದು ವಾಹನದ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ. ಘಟನೆಯಲ್ಲಿ ರೈನಾ ಅವರಿಗೆ ಯಾವುದೇ ತರಹದ ಗಾಯಗಳಾಗಿಲ್ಲ ಎಂದು ಅಲ್ಲಿನ ಡಿಎಸ್ ಪಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

Story first published: Wednesday, September 13, 2017, 16:45 [IST]
Other articles published on Sep 13, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ