ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ವಿತೀಯ ಹಂತದ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅಪ್‌ಡೇಟ್ ಕೊಟ್ಟ ಡೇವಿಡ್ ವಾರ್ನರ್

David Warner gives update on his participation in second half of IPL 2021

ಸಿಡ್ನಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಆಟಗಾರರು ಆಡೋದಿಲ್ಲ ಎಂಬ ಗಾಳಿ ಸುದ್ದಿಗಳು ಕೇಳಿ ಬಂದಿದ್ದವು. ಭಾರತದಲ್ಲಿ ಕೋವಿಡ್ 19 ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟ ಐಪಿಎಲ್ 2021ರ ಆವೃತ್ತಿಯ ದ್ವಿತೀಯ ಹಂತದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಯಲ್ಲಿ ಸೆಪ್ಟೆಂಬರ್‌ 19ನಿಂದ ಆರಂಭಗೊಳ್ಳಲಿದೆ. ಇದರಲ್ಲಿ ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ಒಂದಿಷ್ಟು ಆಟಗಾರರು ಆಡ್ತಾರಾ ಅನ್ನೋದರ ಬಗ್ಗೆ ಈಗಲೂ ಗೊಂದಲಗಳಿವೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿ

ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಾನು ಐಪಿಎಲ್ ದ್ವಿತೀಯ ಹಂತದ ಸ್ಪರ್ಧೆಯಲ್ಲಿ ಆಡ್ತೀನಾ ಇಲ್ವಾ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಐಪಿಎಲ್‌ನಲ್ಲಿ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕರಾಗಿದ್ದವರು. ಈಗ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರು ಎಸ್‌ಆರ್‌ಎಚ್ ನಾಯಕತ್ವ ವಹಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಬಗ್ಗೆ ಅಪ್‌ಟೇಟ್ಸ್‌ ನೀಡಿದ ಡೇವಿಡ್ ವಾರ್ನರ್

ಐಪಿಎಲ್‌ನಲ್ಲಿ ಆಡುವ ಬಗ್ಗೆ ಅಪ್‌ಟೇಟ್ಸ್‌ ನೀಡಿದ ಡೇವಿಡ್ ವಾರ್ನರ್

ಯುಎಇಯಲ್ಲಿ ನಡೆಯಲಿರುವ ಐಪಿಎಲ್ ದ್ವಿತೀಯ ಹಂತದ ಪಂದ್ಯಗಳಲ್ಲಿ ತಾನು ಆಡ್ತೀನಾ ಇಲ್ವಾ ಬಗ್ಗೆ ಹೇಳಿಕೊಂಡಿದ್ದಾರೆ. ಮಂಗಳವಾರ (ಆಗಸ್ಟ್ 11) ಇನ್‌ಸ್ಟಾಗ್ರಾಮ್‌ ಮೂಲಕ ವಾರ್ನರ್ ಐಪಿಎಲ್‌ನಲ್ಲಿ ತಾನು ಆಡಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹೈದರಾಬಾದ್ ಜೆರ್ಸಿಯಲ್ಲಿರುವ ಫೋಟೋ ಹಾಕಿಕೊಂಡಿರುವ ವಾರ್ನರ್, 'ಐ ವಿಲ್‌ ಬಿ ಬ್ಯಾಕ್' (ನಾನು ಮರಳಲಿದ್ದೇನೆ) ಎಂದು ಬರೆದುಕೊಂಡಿದ್ದಾರೆ. ಮುಂದಿನ ತಿಂಗಳು ಐಪಿಎಲ್ ಆರಂಭವಾಗುತ್ತಲೇ ಹೈದರಾಬಾದ್ ಸ್ಪರ್ಧೆ ಆರಂಭಗೊಳ್ಳಲಿದೆ. ಆದರೆ ಐಪಿಎಲ್ ಮೊದಲನೇ ಹಂತದ ಪಂದ್ಯಗಳ ವೇಳೆ ಮಾತ್ರ ಎಸ್‌ಆರ್‌ಎಚ್ ನೀರಸ ಪ್ರದರ್ಶನ ನೀಡಿತ್ತು. ಇದೇ ಕಾರಣಕ್ಕೆ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.

ಮೂರು ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದ ಡೇವಿಡ್ ವಾರ್ನರ್

ಮೂರು ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದ ಡೇವಿಡ್ ವಾರ್ನರ್

ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಬಲಿಷ್ಠ ಆಟಗಾರರ ಸಾಲಿನಲ್ಲಿರುವವರು. ಯಾಕೆಂದರೆ ಸೀಸನ್‌ ಒಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಕೊಡುವ ಆರೆಂಜ್ ಕ್ಯಾಪ್‌ ಅನ್ನು ವಾರ್ನರ್ ಮೂರು ಸಾರಿ ಗೆದ್ದಿದ್ದರು. 2015, 2017 ಮತ್ತು 2019ರ ಸೀಸನ್‌ಗಳಲ್ಲಿ ವಾರ್ನರ್‌ಗೆ ಆರೆಂಜ್ ಕ್ಯಾಪ್ ಲಭಿಸಿತ್ತು. ಆದರೆ ಇತ್ತೀಚಿನ ಸೀಸನ್‌ಗಳಲ್ಲಿ ವಾರ್ನರ್ ಅಷ್ಟೇನು ಮಿಂಚುತ್ತಿಲ್ಲ. ಆಸ್ಟ್ರೇಲಿಯಾದಿಂದ ವಾರ್ನರ್ ಒಂದು ವರ್ಷದ ನಿಷೇಧಕ್ಕೂ ಗುರಿಯಾಗಿದ್ದರು. ಆ ಬಳಿಕ ವಾರ್ನರ್ ಬ್ಯಾಟಿಂಗ್‌ ಕೊಂಚ ಮಟ್ಟಿಗೆ ಕಳೆಗುಂದಿದೆ. 2018ರಲ್ಲಿ ಚೆಂಡು ವಿರೂಪ ಪ್ರಕರಣದಲ್ಲಿ ವಾರ್ನರ್, ಸ್ಟೀವ್ ಸ್ಮಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ಯಾನ್ ಆಗಿದ್ದರು. ಐಪಿಎಲ್ ಆರಂಭಿಕ ಹಂತದಲ್ಲಿ 7 ಪಂದ್ಯಗಳನ್ನಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ 1 ಪಂದ್ಯ ಗೆದ್ದು, 6ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೆಳ ಸ್ಥಾನಕ್ಕೆ ಕುಸಿದಿದೆ.

ದ್ವಿತೀಯ ಹಂತದ ಐಪಿಎಲ್ ಆರಂಭ, ಅಂತ್ಯದ ದಿನಾಂಕ

ದ್ವಿತೀಯ ಹಂತದ ಐಪಿಎಲ್ ಆರಂಭ, ಅಂತ್ಯದ ದಿನಾಂಕ

ಮೊದಲ ಹಂತದ ಐಪಿಎಲ್‌ನಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು ಉಳಿದ 31 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನಲ್ಲಿ ನಡೆಯಲಿವೆ. ದ್ವಿತೀಯ ಹಂತದ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್‌ 19ರಿಂದ ಆರಂಭಗೊಳ್ಳಲಿವೆ. ಅಕ್ಟೋಬರ್‌ 13ರಂದು ಫೈನಲ್‌ ನಡೆಯಲಿದೆ. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸದ್ಯಕ್ಕೆ ಐಪಿಎಲ್ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ಮೊದಲ ಸ್ಥಾನದಲ್ಲಿ, ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿವೆ.

Story first published: Wednesday, August 11, 2021, 20:22 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X