ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ನಾಯಕತ್ವದ ಸ್ಥಾನಕ್ಕೆ ವಾರ್ನರ್ ಹತ್ತಿರ: ನಾಯಕತ್ವದ ನಿಷೇಧ ತೆರವಿಗೆ ಒಲವು

David Warners captaincy ban might be lifted As Cricket Australia Provides Huge Update

ಆಸ್ಟ್ರೇಲಿಯಾದ ಏಕದಿನ ಕ್ರಿಕೆಟ್ ಮಾದರಿಗೆ ಆರೋನ್ ಫಿಂಚ್ ಈಗಾಗಲೇ ವಿದಾಯವನ್ನು ಘೋಷಣೆ ಮಾಡಿದ್ದು ನಾಯಕನ ಸ್ಥಾನಕ್ಕೆ ಈವರೆಗೆ ಯಾರನ್ನೂ ಆಯ್ಕೆ ಮಾಡಿಲ್ಲ. ಸದ್ಯ ಟಿ20 ವಿಶ್ವಕಪ್‌ನಲ್ಲಿ ಆಸಿಸ್ ತಂಡವನ್ನು ಫಿಂಚ್ ಮುನ್ನಡೆಸುತ್ತಿದ್ದು ವಿಶ್ವಕಪ್ ಬಳಿಕ ಚುಟುಕು ಮಾದರಿಯ ನಾಯಕತ್ವವನ್ನು ಕೂಡ ತೊರೆಯುವ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ. ಹೀಗಾಗಿ ಬಳಿಕ ಆಸ್ಟ್ರೇಲಿಯಾ ವೈಟ್‌ಬಾಲ್ ತಂಡದ ನಾಯಕತ್ವವನ್ನು ಯಾರಿಗೆ ನೀಡಬೆಕು ಎಂಬ ಬಗ್ಗೆ ಆಸ್ಟ್ರೇಲಿಯಾ ಮಂಡಳಿ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ಅನುಭವಿ ಆಟಗಾರ ಡೇವಿಡ್ ವಾರ್ನರ್ ಮೇಲಿನ ಆಜೀವ ನಾಯಕತ್ವದ ಮೇಲಿನ ನಿಷೇಧವನ್ನು ಹಿಂಪಡೆಯುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಉತ್ಸುಕವಾಗಿದೆ ಎನ್ನಲಾಗಿದ್ದು ಮಂಡಳಿಯ ನಿರ್ದೇಶಕರು ಈ ನಿರ್ಧಾರವನ್ನು ಪರಾಮರ್ಶಿಸಲು ಬಯಸಿದ್ದಾರೆ ಎಂದು ವರದಿಯಾಗಿದೆ.

BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿಯನ್ನ ಬೆಂಬಲಿಸಿದ ರವಿಶಾಸ್ತ್ರಿ: ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಬಲ!BCCI ಅಧ್ಯಕ್ಷ ಸ್ಥಾನಕ್ಕೆ ರೋಜರ್ ಬಿನ್ನಿಯನ್ನ ಬೆಂಬಲಿಸಿದ ರವಿಶಾಸ್ತ್ರಿ: ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಬಲ!

ವಾರ್ನರ್ ಮೇಲಿಗೆ ಆಜೀವ ನಾಯಕತ್ವ ನಿಷೇಧ

ವಾರ್ನರ್ ಮೇಲಿಗೆ ಆಜೀವ ನಾಯಕತ್ವ ನಿಷೇಧ

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ 2018ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಡೆದ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಟೆಸ್ಟ್ ಮಾದರಿಯಲ್ಲಿ ಉಪನಾಯಕನಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು ವಾರ್ನರ್. ಈ ಪ್ರಕರಣದಲ್ಲಿ ವಾರ್ನರ್ ತಪ್ಪಿತಸ್ಥರು ಎಂದು ಸಾಬೀತಾದ ಬಳಿಕ ಒಂದು ವರ್ಷಗಳ ಕಾಲ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ವಾರ್ನರ್‌ಗೆ ನಾಯಕತ್ವದಿಂದ ಆಜೀವ ನಿಷೇಧವನ್ನು ಹೇರಲಾಗಿತ್ತು.

ಮತ್ತೆ ನಾಯಕತ್ವದ ರೇಸ್‌ನಲ್ಲಿ ವಾರ್ನರ್

ಮತ್ತೆ ನಾಯಕತ್ವದ ರೇಸ್‌ನಲ್ಲಿ ವಾರ್ನರ್

ಇನ್ನು ಇತ್ತೀಚೆಗೆ ಏಕದಿನ ಕ್ರಿಕೆಟ್ ಮಾದರಿಗೆ ಆರೋನ್ ಫಿಂಚ್ ನಿವೃತ್ತಿ ಘೋಷಿಸಿದ ಬಳಿಕ ಏಕದಿನ ಮಾದರಿಗೆ ಡೇವಿಡ್ ವಾರ್ನರ ನಾಯಕನಾಗಲಿ ಎಂಬ ಅಭಿಪ್ರಾಯಗಳನ್ನು ಹಲವರು ವ್ಯಕ್ತಪಡಿಸಿದ್ದರು. ಆದರೆ ವಾರ್ನರ್ ಮೇಲೆ ನಾಯಕತ್ವದ ನಿಷೇಧವಿರುವ ಕಾರಣ ಆ ನಿಷೇಧ ತೆರವಾಗದ ಹೊರತು ಇದು ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ನಿರ್ದೇಶಕರು ಕೂಡ ವಾರ್ನರ್ ಮೇಲಿನ ನಾಯಕತ್ವದ ನಿಷೇಧವನ್ನು ಹಿಂಪಡೆಯಲು ಒಲವು ಹೊಮದಿದ್ದಾರೆ ಎಂಬುದು ತಿಳಿದು ಬಂದಿದೆ. ವರದಿಗಳ ಪ್ರಕಾರ ಸಂಸ್ಥೆಯ ಕೆಲ ನಿಯಮಗಳನ್ನು ಬದಲಾಯಿಸಿ ವಾರ್ನರ್‌ ಮೇಲಿನ ನಿಷೇಧ ತೆರವಿಗೆ ಚಿಂತನೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಸ್ಟೀವ್ ಸ್ಮಿತ್ ಮೇಲೆ ಇತ್ತು ನಾಯಕತ್ವದ ನಿಷೇಧ

ಸ್ಟೀವ್ ಸ್ಮಿತ್ ಮೇಲೆ ಇತ್ತು ನಾಯಕತ್ವದ ನಿಷೇಧ

ಇನ್ನು ಸ್ಯಾಂಡ್ ಪೇಪರ್ ಪ್ರಕೆರಣದಲ್ಲಿ ಭಾಗಿಯಾಗಿದ್ದ ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಹಾಗೂ ಅಂದಿನ ನಾಯಕ ಸ್ಟೀವ್ ಸ್ಮಿತ್ ಮೇಲೆ ಕೂಡ ಕಠಿಣ ಕ್ರಮವನ್ನು ಕ್ರಿಕೆಟ್ ಆಸ್ಟ್ರೇಲಿಯಾ ತೆಗೆದುಕೊಂಡಿತ್ತು. ಒಂದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಕ್ಕೆ ಒಳಗಾಗಿದ್ದ ಸ್ಟೀವ್ ಸ್ಮಿತ್ ಎರಡು ವರ್ಷಗಳ ಕಾಲ ನಾಯಕತ್ವದ ನಿಷೇಧಕ್ಕೂ ಒಳಗಾಗಿದ್ದರು. 2020ರ ಮಾರ್ಚ್‌ನಲ್ಲಿ ಸ್ಟೀವ್ ಸ್ಮಿತ್ ಅವರ ನಾಯಕತ್ವದ ನಿಷೇಧ ಮುಕ್ತಾಯಗೊಂಡಿತ್ತು. ಆದರೆ ಡೇವಿಡ್ ವಾರ್ನರ್‌ಗೆ ವೃತ್ತಿ ಜೀವನವಿಡೀ ನಾಯಕತ್ವದ ನಿಷೇಧ ಹೇರಿರುವ ಕಾರಣ ಈ ನಿರ್ಧಾರದ ಪರಾಮರ್ಶೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಚಿಂತಿಸಿದೆ.

ಕ್ರಿಕೆಟ್ ಲೋಕದಲ್ಲಿ ಆಸ್ಟ್ರೇಲಿಯಾಗೆ ಕಪ್ಪುಚುಕ್ಕೆಯಿಟ್ಟ ಪ್ರಕರಣ

ಕ್ರಿಕೆಟ್ ಲೋಕದಲ್ಲಿ ಆಸ್ಟ್ರೇಲಿಯಾಗೆ ಕಪ್ಪುಚುಕ್ಕೆಯಿಟ್ಟ ಪ್ರಕರಣ

ಸ್ಯಾಂಡ್ ಪೇಪರ್ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಮುಖಭಂಗಕ್ಕೆ ಒಳಗಾಗಿತ್ತು. ಹೀಗಾಗಿ ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಘಿದ್ದ ಆಟಗಾರರ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯಾ ಕಠಿಣ ಕ್ರಮವನ್ನು ತೆಗೆದುಕೊಂಡಿತ್ತು. ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್‌ಗೆ ಒಂದು ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆಯಿಂದ ಸಂಪೂರ್ಣ ನಿಷೇಧ ಹೇರಲಾಗಿದ್ದರೆ ಬೌಲರ್ ಬೆನ್‌ಕ್ರಾಫ್ಟ್‌ಗೆ 9 ತಿಂಗಳ ಕಾಳ ನಿಷೇಧ ಹೇರಲಾಗಿತ್ತು. ಅಲ್ಲದೆ ಕೋಚ್ ಆಗಿದ್ದ ಡ್ಯಾರನ್ ಲೆಹ್ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಜೇಮ್ಸ್ ಸದರ್ಲ್ಯಾಂಡ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.

Story first published: Thursday, October 13, 2022, 14:52 [IST]
Other articles published on Oct 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X