ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೇವಿಡ್ ವಾರ್ನರ್‌ಗೆ ಸನ್‌ರೈಸರ್ಸ್ ತಂಡದೊಂದಿಗೆ ಪ್ರಯಾಣಕ್ಕೂ ಅವಕಾಶ ನೀಡದ ಫ್ರಾಂಚೈಸಿ!: ವರದಿ

David Warner Wasnt Allowed To Travel With The SRH Team In CSK Match- report

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವೀ ವಿದೇಶಿ ಆಟಗಾರರ ಪೈಕಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಪ್ರಮುಖ ಹೆಸರು. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿಯಾದ ಐಪಿಎಲ್‌ನಲ್ಲಿ ವಾರ್ನರ್ ಸಾಕಷ್ಟು ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಪ್ರತೀ ಬಾರಿಯೂ ವಾರ್ನರ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ತಂಡಕ್ಕೆ ಬಲವಾಗಿದ್ದರು. 2017ರ ಐಪಿಎಲ್ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಚಾಂಪಿಯನ್ ಪಟ್ಟಕ್ಕೂ ಏರಿಸಿದ್ದರು. ಆದರೆ ಈ ಬಾರಿ ವಾರ್ನರ್ ಐಪಿಎಲ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿದ್ದು ನಾಯಕತ್ವ ಕಿತ್ತುಕೊಂಡು ಬಳಿಕ ಆಡುವ ಬಳಗದಿಂದಲೂ ಹೊರಗಿಟ್ಟಿತ್ತು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ.

ಆದರೆ ಈಗ ನಡೆದಿರುವ ಬೆಳವಣಿಗೆ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಹಾಗೂ ಡೇವಿಡ್ ವಾರ್ನರ್ ನಡುವಿನ ಬಾಂಧವ್ಯ ಸಂಪೂರ್ಣ ಹಳಸಿದೆ ಎಂಬುದು ಸ್ಪಷ್ಟಪಡಿಸುತ್ತಿದೆ. ಡೇವಿಡ್ ವಾರ್ನರ್ ಆಡುವ ಬಳಗದಿಂದ ಹೊರಗುಳಿದಿದ್ದು ಮಾತ್ರವಲ್ಲದೆ ಸಿಎಸ್‌ಕೆ ವಿರುದ್ಧದ ಪಂದ್ಯಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಜೊತೆಗೆ ಪ್ರಯಾಣಿಸುವುದಕ್ಕೂ ಫ್ರಾಂಚೈಸಿ ಅವಕಾಶ ನೀಡಿಲ್ಲ ಎನ್ನಲಾಗಿದೆ.

ತಂಡದ ಅನುಭವಿ ಆಟಗಾರನಾಗಿರುವ ಡೇವಿಡ್ ವಾರ್ನರ್ ತಂಡದೊಂದಿಗೆ ಪ್ರಯಾಣಿಸುವುದಕ್ಕೆ ಸಿದ್ಧವಾಗಿದ್ದರೂ ಅದಕ್ಕೆ ಫ್ರಾಂಚೈಸಿಯೇ ಅವಕಾಶ ನೀಡಿಲ್ಲ ಎಂದು ವರದಿಯಾಗಿದೆ. ಇದು ಐಪಿಎಲ್ ಅಭಿಮಾನಿಗಳಿಗೆ ಆಘಾತ ನೀಡುವ ಬೆಳವಣಿಗೆಯಾಗಿದ್ದು ಯಾವ ಕಾರಣಕ್ಕಾಗಿ ಹೈದರಾಬಾದ್ ಮೂಲದ ಪ್ರಾಂಚೈಸಿ ಈ ರೀತಿ ವರ್ತಿಸಿದೆ ಎಂಬುದು ಕೂಡ ಪ್ರಶ್ನೆಯಾಗಿದೆ.

ಆರು ಆವೃತ್ತಿಯಲ್ಲಿ ಹೈದರಾಬಾದ್ ಪರ ಅಬ್ಬರಿಸಿದ್ದ ವಾರ್ನರ್

ಆರು ಆವೃತ್ತಿಯಲ್ಲಿ ಹೈದರಾಬಾದ್ ಪರ ಅಬ್ಬರಿಸಿದ್ದ ವಾರ್ನರ್

ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಕಳೆದ ಆರು ಆವೃತ್ತಿಗಳಲ್ಲಿ ಪಾಲ್ಗೊಂಡಿದ್ದು ಅಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. ನಿರಂತರವಾಗಿ ರನ್‌ಗಳಿಸುತ್ತಿದ್ದ ವಾರ್ನರ್ ಒಂದು ಬಾರಿ ತಂಡವನ್ನು ಚಾಂಪಿಯನ್ ಸ್ಥಾನಕ್ಕೂ ಏರಿಸಿದ್ದಾರೆ. ತಮ್ಮ ಅಮೋಘ ಪ್ರದರ್ಶನದ ಮೂಲಕ ಐಪಿಎಲ್ ಇತಿಹಾಸದ ದಿಗ್ಗಜನಾಗಿ ಗುರುತಿಸಿಕೊಳ್ಳುವ ಭರವಸೆಯನ್ನು ಮೂಡಿಸಿದ್ದರು ಡೇವಿಡ್ ವಾರ್ನರ್. ಭಾರತದ ಕ್ರಿಕೆಟ್ ಅಭಿಮಾನಿಗಳೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ವಾರ್ನರ್‌ಗೆ ಐಪಿಎಲ್‌ನ ಕಾರಣದಿಂದಾಗಿ ಕೋಟ್ಯಂತರ ಅಭಿಮಾನಿಗಳು ಇದ್ದಾರೆ.

ಕಳಪೆ ಆರಂಭ, ನಾಯಕತ್ವ ಬದಲಾವಣೆ

ಕಳಪೆ ಆರಂಭ, ನಾಯಕತ್ವ ಬದಲಾವಣೆ

ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಭಾರತದಲ್ಲಿ ನಡೆದ ಮೊದಲ ಚರಣದ ಪಂದ್ಯದ ಆರಂಭದಿಂದಲೂ ನಾಯಕ ವಾರ್ನರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕಳಪೆ ಪ್ರದರ್ಶನ ಆರಂಭವಾಗಿತ್ತು. ಅದಾದ ನಂತರ ಕೇನ್ ವಿಲಿಯಮ್ಸನ್‌ರನ್ನು ನಾಯಕನನ್ನಾಗಿ ನೇಮಿಸಿ ಡೇವುಡ್ ವಾರ್ನರ್‌ರನ್ನು ಆಡುವ ಬಳಗದಿಂದ ಎಸ್‌ಆರ್‌ಹೆಚ್ ಹೊರಗಿಟ್ಟಿತ್ತು. ನಂತರ ಯುಎಇ ಚರಣದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ವಾರ್ನರ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಎರಡು ಪಂದ್ಯಗಳಲ್ಲಿಯೂ ವಾರ್ನರ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. 0 ಮತ್ತು 2 ರನ್‌ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಮತ್ತೆ ಆಡುವ ಬಳಗದಿಂದ ವಾರ್ನರ್ ಹೊರಬಿದ್ದರು.

ಡಗೌಟ್‌ನಲ್ಲೂ ಕಾಣಿಸಿರಲಿಲ್ಲ ವಾರ್ನರ್

ಡಗೌಟ್‌ನಲ್ಲೂ ಕಾಣಿಸಿರಲಿಲ್ಲ ವಾರ್ನರ್

ಕಳೆದ ಎರಡು ಪಂದ್ಯಗಳಲ್ಲಿ ಡೇವಿಡ್ ವಾರ್ನರ್ ಆಡುವ ಬಳಗದಿಂದ ಹೊರಬಿದ್ದಿದ್ದು ಮಾತ್ರವಲ್ಲದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಡಗೌಟ್‌ನಲ್ಲಿಯೂ ಕಾಣಿಸಿರಲಿಲ್ಲ. ಆಗಲೇ ವಾರ್ನರ್ ತಂಡದ ಜೊತೆಗೆ ಪ್ರಯಾಣಿಸಿಲ್ಲ ಎಂಬ ಮಾಹಿತಿಗಳು ಹರಿದಾಡಿತ್ತು. ಇದೀಗ ಈ ವರದಿಗಳಿಗೆ ಪೂರಕವಾದ ಮಾಹಿತಿಗಳು ಲಭ್ಯವಾಗುತ್ತಿದೆ. ಹೀಗಾಗಿ ಫ್ರಾಂಚೈಸಿಗಾಗಿ ಸಾಕಷ್ಟು ಕೊಡುಗೆ ನಿಡಿದ್ದ ಈ ಆಸಿಸ್ ಆಟಗಾರನನ್ನು ಯಾವ ಕಾರಣಕ್ಕಾಗಿ ಈ ರೀತಿಯಾಗಿ ನಡೆಸಿಕೊಳ್ಳುತ್ತಿದೆ ಎಂಬುದು ಈಗ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದ ಸನ್‌ರೈಸರ್ಸ್

ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದ ಸನ್‌ರೈಸರ್ಸ್

ಇನ್ನು ಹೈದರಾಬಾದ್ ಮೂಲದ ಪ್ರಾಂಚೈಸಿ ಈ ಬಾರಿಯ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಟೂರ್ನಿಯಲ್ಲಿ ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ಹಂತಕ್ಕೇರುವ ಸ್ಪರ್ಧೆಯಿಂದಲೂ ಹೊರಬಿದ್ದಿದೆ. 11 ಪಂದ್ಯಗಳನ್ನು ಆಡಿರುವ ಕೇನ್ ವಿಲಿಯಮನ್ಸನ್ ಪಡೆ ಕೇವಲ 2 ಪಂದ್ಯಗಳಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ಈ ಮೂಲಕ ನಾಲ್ಕು ಅಂಕಗಳನ್ನು ಮಾತ್ರವೇ ಖಾತೆಯಲ್ಲಿ ಹೊಂದಿದೆ. ಟೂರ್ನಿಯಲ್ಲಿ ಇನ್ನು ಮೂರು ಪಂದ್ಯಗಳು ಮಾತ್ರವೇ ಹೈದರಾಬಾದ್ ತಂಡಕ್ಕೆ ಉಳಿದುಕೊಂಡಿದೆ. ಈ ಬಾರಿಯ ಐಪಿಎಲ್‌ನ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದ ಮೊದಲ ತಂಡವಾಗಿದೆ ಸನ್‌ರೈಸರ್ಸ್ ಹೈದರಾಬಾದ್.

Story first published: Friday, October 1, 2021, 19:41 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X