ದ.ಆಫ್ರಿಕಾಕ್ಕೆ ನಿಲ್ಲದ ಗಾಯದ ಸಮಸ್ಯೆ, ಸರಣಿಯಿಂದ ಡಿ ಕಾಕ್ ಔಟ್

Posted By:
De Kock ruled out for rest of the odi series

ಕೇಪ್‌ಟೌನ್‌, ಫೆಬ್ರವರಿ 05: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಅದೃಷ್ಟವೇ ಸರಿ ಇದ್ದಂತಿಲ್ಲ, ಗಾಯದ ಸಮಸ್ಯೆ ಆ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಎಬಿ ಡಿವಿಲಿಯರ್ಸ್, ಫಾಪ್ ಡು ಪ್ಲಿಸಿಸ್ ನಂತರ ಈಗ ದ.ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ವೆಂಟನ್ ಡಿ ಕಾಕ್ ಅವರು ಭಾರತದ ಎದುರಿಗಿನ ಕ್ರಿಕೆಟ್ ಏಕದಿನ ಸರಣಿಯ ಉಳಿದ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಎರಡನೇ ಏಕದಿನ ಪಂದ್ಯದ ವೇಳೆ ಮಣಿಕಟ್ಟಿಗೆ ಗಾಯ ಮಾಡಿಕೊಂಡ ಡಿಕಾಕ್ ಅವರಿಗೆ ಕನಿಷ್ಟ ಎರಡು ವಾರಗಳ ಕಾಲ ವಿಶ್ರಾಂತಿ ಬೇಕಿರುವ ಕಾರಣ ಅವರು ಏಕದಿನ ಸರಣಿಯ ಉಳಿದ ನಾಲ್ಕು ಮತ್ತು ಟಿ20 ಸರಣಿ ಇಂದ ಹೊರ ನಡೆದಿದ್ದಾರೆ.

ಭಾರತ ವಿರುದ್ಧ ಟೆಸ್ಟ್ ಸರಣಿ ಮುಗಿದ ಕೂಡಲೇ ದ.ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಗಾಯದ ಸಮಸ್ಯೆಯಿಂದ ಏಕದಿನ ಸರಣಿಯಿಂದ ಹೊರಗುಳಿಯಬೇಕಾಯಿತು. ಆ ನಂತರ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿ ಮೆರೆದಿದ್ದ ನಾಯಕ ಡು ಪ್ಲಿಸಿಸ್ ಗಾಯಗೊಂಡು ಸರಣಿಯಿಂದ ಹೊರನಡೆದರು ಈಗ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಡಿ ಕಾಕ್ ಸರಣಿಯಿಂದ ಹೊರನಡೆದಿದ್ದಾರೆ.

ಈಗಾಗಲೇ ಆರು ಏಕದಿನ ಪಂದ್ಯದ ಸರಣಿಯಲ್ಲಿ ಮೊದಲೆರಡು ಪಂದ್ಯ ಸೋತಿರುವ ದ.ಆಫ್ರಿಕಾಕ್ಕೆ ಗಾಯದ ಸಮಸ್ಯೆ ಭಾರಿ ಹಿನ್ನಡೆ ಉಮಟು ಮಾಡುತ್ತಿದೆ, ತಂಡದ ನಂಬಿಕಸ್ತ ಬ್ಯಾಟ್ಸ್‌ಮನ್‌ ಡಿ ಕಾಕ್ ಕೂಡಾ ಅಲಭ್ಯರಾಗಿರುವುದು ಸರಣಿಯ ಉಳಿದ ನಾಲ್ಕು ಪಂದ್ಯಗಳ ಮೆಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಸರಣಿಯ ಮೂರನೇ ಪಂದ್ಯ ಕೇಪ್‌ಟೌನ್‌ನಲ್ಲಿ ನಡೆಯಲಿದ್ದು ಡಿ ಕಾಕ್ ಅವರ ಸ್ಥಾನಕ್ಕೆ ಹೊಸ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರು ಬರುವ ಸಾಧ್ಯತೆ ಇದೆ. ಇದು ಅವರಿಗೆ ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, February 5, 2018, 16:30 [IST]
Other articles published on Feb 5, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ