ವಿರಾಟ್ ಮತ್ತು ಧೋನಿಗೆ ವೀರೇಂದ್ರ ಸೆಹ್ವಾಗ್ ಖಡಕ್ ಕ್ಲಾಸ್

ವೀರೇಂದ್ರ ಸೆಹ್ವಾಗ್ ಟ್ವೀಟ್‌ಗಳ ಮೂಲಕ ಹಾಸ್ಯಮಯವಾಗಿ ಅಭಿಮಾನಿಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ರಂಜಿಸಿ ಸುದ್ದಿಯಾಗುತ್ತಿದ್ದಾರೆ. ಆದರೆ ಇಂದು ಸೆಹ್ವಾಗ್ ಸುದ್ದಿಯಾಗಿರೋದು ಖಡಕ್ ಮಾತುಗಳಿಗೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಖಡಕ್ ಮಾತುಗಳಿಂದ ತಿವಿಯುತ್ತಾ ನಾಯಕನಾಗಿದ್ದಾಗ ಧೋನಿಯ ವರ್ತನೆ ಬಗ್ಗೆಯೂ ಸೆಹ್ವಾಗ್ ಖಡಕ್ಕಾಗಿ ಮಾತನಾಡಿದ್ದಾರೆ.

ವೀರೇಂದ್ರ ಸೆಹ್ವಾಗ್ ಯಾವತ್ತೂ ಯಾರ ಬಗ್ಗೆಯೂ ಕಟು ಮಾತುಗಳಿಂದ ಮಾತನಾಡಿದವರಲ್ಲ. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಸೆಹ್ವಾಗ್ ಅಸಮಾದಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂತಿಮ ಪಂದ್ಯವನ್ನು ಗೆದ್ದು ವಿಶ್ವದಾಖಲೆಯತ್ತ ಟೀಮ್ ಇಂಡಿಯಾ ಚಿತ್ತಅಂತಿಮ ಪಂದ್ಯವನ್ನು ಗೆದ್ದು ವಿಶ್ವದಾಖಲೆಯತ್ತ ಟೀಮ್ ಇಂಡಿಯಾ ಚಿತ್ತ

ರಿಷಬ್ ಪಂತ್ ಅವರನ್ನು ಆಡುವ ಬಳಗದಿಂದ ಕೈ ಬಿಟ್ಟಿರುವ ಬಗ್ಗೆ ಸೆಹ್ವಾಗ್ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಪಂತ್ ಉತ್ತಮವಾಗಿ ಆಡುತ್ತಿದ್ದರೂ ಕೈ ಬಿಡಲಾಗುತ್ತಿದೆ ಎಂದು ವೀರೇಂದ್ರ ಸೆಹ್ವಾಗ್ ಗುಡುಗಿದ್ದಾರೆ. ಈ ವಿಚಾರವಾಗಿ ಕೊಹ್ಲಿಗೆ ಕ್ಲಾಸ್ ತೆಗೆದುಕೊಂಡಿರುವ ಸೆಹ್ವಾಗ್ ಧೋನಿಯ ಬಗ್ಗೆಯೂ ಹೇಳಿಕೆ ನೀಡಿದ್ದಾರೆ

ಪಂತ್ ಬಳಿ ಚರ್ಚಿಸಿದ್ದೀರಾ?

ಪಂತ್ ಬಳಿ ಚರ್ಚಿಸಿದ್ದೀರಾ?

ಸೆಹ್ವಾಗ್ ಅಸಮಾದಾನಕ್ಕೆ ಕಾರಣವಾಗಿರೋದು ಪಂದ್ಯದಲ್ಲಿ ಆಟಗಾರರನ್ನು ಹೊರಗಿಡುವ ವಿಚಾರವಾಗಿ. ರಿಷಬ್ ಪಂತ್ ಕೈ ಬಿಟ್ಟಿರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿರುವ ವೀರೇಂದ್ರ ಸೆಹ್ವಾಗ್ ತಮ್ಮ ಖಡಕ್ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ರಿಷಬ್ ಪಂತ್ ಅವರನ್ನು ತಂಡದಿಂದ ಹೊರಗಿಡುತ್ತಿರುವ ಬಗ್ಗೆ ಪಂತ್ ಬಳಿ ಚರ್ಚೆಯನ್ನು ನಡೆಸಿದ್ದೀರಾ ಎಂದು ಕೊಹ್ಲಿಯನ್ನು ಖಡಕ್ಕಾಗಿ ಪ್ರಶ್ನಿಸಿದ್ದಾರೆ.

ಧೋನಿಯನ್ನೇ ಅನುಸರಿಸುತ್ತಿದ್ದೀರಾ?

ಧೋನಿಯನ್ನೇ ಅನುಸರಿಸುತ್ತಿದ್ದೀರಾ?

ವಿರಾಟ್ ಕೊಹ್ಲಿಗೆ ಖಡಕ್ ಪ್ರಶ್ನೆಯನ್ನು ಮುಂದಿಡುತ್ತಾ ವೀರೇಂದ್ರ ಸೆಹ್ವಾಗ್ ಧೋನಿ ವಿಚಾರವಾಗಿಯೂ ಮಾತನಾಡಿದ್ದಾರೆ. ತಾವು ಆಟಗಾರನಾಗಿದ್ದಾಗ ಟೀಮ್ ಇಂಡಿಯಾ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿಯೂ ಕೂಡ ತಂಡದಿಂದ ಕೈ ಬಿಡುವ ಬಗ್ಗೆ ಆಟಗಾರರಿಗೆ ಯಾವುದೇ ಮಾಹಿತಿಯನ್ನು ನೀಡುತ್ತಿರಲಿಲ್ಲ ಎಂದಿದ್ದಾರೆ.

ಧೋನಿ ಹೇಳಿಕೆ ಮಾಧ್ಯಮಗಳ ಮೂಲಕ ಅರಿವಿಗೆ ಬಂದಿತ್ತು

ಧೋನಿ ಹೇಳಿಕೆ ಮಾಧ್ಯಮಗಳ ಮೂಲಕ ಅರಿವಿಗೆ ಬಂದಿತ್ತು

2012ರಲ್ಲಿ ಮಹೇಂದ್ರ ಸಿಂಗ್ ಧೋನಿ ತನ್ನನ್ನು(ವಿರೇಂದ್ರ ಸೆಹ್ವಾಗ್) ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರನ್ನು ರೊಟೇಷನ್ ಪದ್ದತಿಯಲ್ಲಿ ಆಡಿಸಿದ್ದರು. ಇದಕ್ಕೆ ಮಾಧ್ಯಮಗಳ ಮೂಲಕ ಫೀಲ್ಡಿಂಗ್‌ನಲ್ಲಿ ಈ ಆಟಗಾರರು ನಿಧಾನವಾಗಿರುತ್ತಾರೆ ಎಂಬ ಕಾರಣವನ್ನು ನೀಡಿದ್ದರು. ಆದರೆ ಈ ವಿಚಾರವನ್ನು ಟೀಮ್ ಮೀಟಿಂಗ್‌ನಲ್ಲಿ ನಮ್ಮ ಮುಂದೆ ಹೇಳಿಕೊಂಡೇ ಇಲ್ಲ, ಮಾಧ್ಯಮಗಳ ಮೂಲಕ ನಮಗೆ ಅರಿವಿಗೆ ಬಂತು ಎಂಬ ಮಾತನ್ನು ಹೇಳಿದ್ದಾರೆ.

ರೋಹಿತ್ ಉತ್ತಮ

ರೋಹಿತ್ ಉತ್ತಮ

ಸದ್ಯದ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಕೂಡ ಧೋನಿ ಮಾಡುತ್ತಿದ್ದ ರೀತಿಯಲ್ಲೇ ಮಾಡುತ್ತಿದ್ದಾರೆ ಎಂದು ಎನಿಸುತ್ತಿದೆ. ಮಾಜಿ ವಿರಾಟ್ ಕೊಹ್ಲಿಯೂ ಆಟಗಾರರ ಜೊತೆ ಚರ್ಚಿಸುತ್ತಿದ್ದಾರೆ ಎಂದು ನನಗನಿಸುತ್ತಿಲ್ಲ. ಆದರೆ ರೋಹಿತ್ ಶರ್ಮಾ ನಾಯಕರಾದ್ದ ಸಂದರ್ಭದಲ್ಲಿ ಆಟಗಾರರ ಜೊತೆ ಉತ್ತಮ ಸಂವಹನವನ್ನು ಇಟ್ಟುಕೊಂಡಿದ್ದರು ಎಂದು ತಂಡದೊಳಗಿನಿಂದಲೇ ಮಾಹಿತಿ ಸಿಕ್ಕಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, February 1, 2020, 21:11 [IST]
Other articles published on Feb 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X