ಭಾರತ ವಿರುದ್ಧ ಸರಣಿಯಿಂದ ಫಾಪ್‌ ಡುಪ್ಲಿಸಿಸ್ ಹೊರಕ್ಕೆ

Posted By:
Du Plessis out for remaining ODIs and T20s against India

ಜೊಹಾನ್ಸ್‌ಬರ್ಗ್, ಫೆಬ್ರವರಿ 03: ಮೊದಲ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಮುಗ್ಗಿರಿಸಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ.

ಈಗಾಗಲೇ ಸ್ಟಾರ್ ಬ್ಯಾಟ್ಸ್‌ಮನ್ ಎ.ಬಿ.ಡಿವಿಲಿಯರ್ಸ್ ಅವರ ಸೇವೆಯಿಂದ ವಂಚಿತವಾಗಿರುವ ದಕ್ಷಿಣ ಆಫ್ರಿಕಾ ತಂಡ ಈಗ ನಾಯಕ ಫಾಪ್ ಡುಪ್ಲಿಸ್ ಅವರನ್ನೂ ಕಳೆದುಕೊಂಡಿದೆ.

ಮೊದಲ ಏಕದಿನ ಪಂದ್ಯದ ವೇಳೆ ಬೆರಳಿಗೆ ಗಾಯಮಾಡಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಪ್ ಡುಪ್ಲಿಸಿಸ್ ಅವರು ಏಕದಿನ ಸರಣಿಯ ಇನ್ನುಳಿದ 5 ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅಷ್ಟೆ ಅಲ್ಲದೆ ಏಕದಿನ ಸರಣಿ ನಂತರ ನಡೆಯಲಿರುವ ಟಿ20 ಸರಣಿಯಿಂದಲೂ ಅವರು ಹೊರಗುಳಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತಕ್ಕೆ ಅಭಿನಂದನೆಯ ಮಹಾಪೂರ

ಮೊದಲ ಪಂದ್ಯದಲ್ಲಿ ಆಡುವ ವೇಳೆ ತೋರು ಬೆರಳಿಗೆ ಗಾಯ ಡು ಪ್ಲಿಸಿಸ್ ಗಾಯ ಮಾಡಿಕೊಂಡಿದ್ದು, ಗಾಯ ಗುಣವಾಗಲು ಆರು ವಾರ ಬೇಕು ಎನ್ನಲಾಗಿದೆ. ಹಾಗಾಗಿ ಭಾರತದ ಸರಣಿಯ ನಂತರ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಸರಣಿ ವೇಳೆಗೆ ಫಿಟ್ ಆಗುವುದಕ್ಕಾಗಿ ಡು ಪ್ಲಿಸ್‌ಗೆ ಈಗ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.

ಫಾಪ್‌ ಅನುಪಸ್ಥಿತಿಯಲ್ಲಿ ಪಂದ್ಯವನ್ನು ಹಶೀಮ್ ಆಮ್ಲಾ ಮುನ್ನೆಡಸಲಿದ್ದಾರೆ ಎನ್ನಲಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಶತಕ ಭಾರಿಸಿ ಉತ್ತಮ ಲಯದಲ್ಲಿದ್ದ ಫಾಪ್‌ ಡು ಪ್ಲಿಸಿಸ್ ಅವರು ಸರಣಿಗೆ ಅಲಭ್ಯವಾಗಿರುವುದು ದಕ್ಷಿಣ ಆಫ್ರಿಕಾಕ್ಕೆ ಭಾರಿ ಪೆಟ್ಟು ಬೀಳಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, February 3, 2018, 10:30 [IST]
Other articles published on Feb 3, 2018
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ