ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಪಡೆಗೆ ಗರ್ವಭಂಗ: ಇನ್ನಿಂಗ್ಸ್ ಅಂತರದಿಂದ ಗೆಲುವು ಸಾಧಿಸಿದ ದ. ಆಫ್ರಿಕಾ

Eng vs Sa: South Africa won 1st test by innings and 12 runs at Lords

ಬೆನ್ ಸ್ಟೋಕ್ಸ್ ನೇತೃತ್ವದಲ್ಲಿ ಗೆಲುವಿನ ಮೇಲೆ ಗೆಲುವು ಸಾಧಿಸಿ ಬೀಗುತ್ತಿದ್ದ ಇಂಗ್ಲೆಂಡ್ ತಂಡ ತವರಿನಲ್ಲಿಯೇ ಭಾರೀ ಮುಖಭಂಗವನ್ನು ಅನುಭವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಹಾಗೂ 12 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆಯನ್ನು ಅನುಭವಿಸಿದೆ.

ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ದಾಳಿಯನ್ನು ಎರಡು ಇನ್ನಿಂಗ್ಸ್‌ನಲ್ಲಿಯೂ ಎದುರಿಸಲು ಇಂಗ್ಲೆಂಡ್ ತಂಡ ವಿಫಲವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 165 ರನ್‌ಗಳಿಗೆ ಆಲೌಟ್ ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ 149 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಎರಡು ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಕೇವಲ ಒಂದು ಅರ್ಧ ಶತಕ ಮಾತ್ರವೇ ದಾಖಲಾಗಿದೆ.

ಭಾರತ vs ಜಿಂಬಾಬ್ವೆ: 2ನೇ ಏಕದಿನ ಪಂದ್ಯ ಗೆಲ್ಲೋದು ಯಾರು? ಸಂಭಾವ್ಯ ಆಡುವ ಬಳಗಭಾರತ vs ಜಿಂಬಾಬ್ವೆ: 2ನೇ ಏಕದಿನ ಪಂದ್ಯ ಗೆಲ್ಲೋದು ಯಾರು? ಸಂಭಾವ್ಯ ಆಡುವ ಬಳಗ

ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಮೊತ್ತ

ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಮೊತ್ತ

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದ ಇಂಗ್ಲೆಂಡ್ ತಂಡದ ಪರವಾಗಿ ಒಲ್ಲೀ ಪೋಪ್ ಮಾತ್ರವೇ 73 ರನ್‌ಗಳನ್ನು ಬಾರಿಸಿದ್ದರು. ಉಳಿದಂತೆ ಯಾವ ಆಟಗಾರನಿಂದಲೂ ಸಮರ್ಥ ಬ್ಯಾಟಿಂಗ್ ಪ್ರದರ್ಶನ ಬಾರದ ಪರಿಣಾಮವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 165 ರನ್‌ಗೆ ಆಲೌಟ್ ಆಯಿತು. ಕಗಿಸೋ ರಬಡಾ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದು ಆತಿಥೇಯ ಇಂಗ್ಲೆಂಡ್‌ಗೆ ದೊಡ್ಡ ಆಘಾತ ನೀಡಿದ್ದಾರೆ.

ಉತ್ತಮ ಪ್ರದರ್ಶನ ನೀಡಿದ ದ. ಆಫ್ರಿಕಾ

ಉತ್ತಮ ಪ್ರದರ್ಶನ ನೀಡಿದ ದ. ಆಫ್ರಿಕಾ

ಇನ್ನು ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. 326 ರನ್‌ಗಳನ್ನು ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 161 ರನ್‌ಗಳ ಬೃಹತ್ ಮುನ್ನಡೆಯನ್ನು ಗಳಿಸಿತು. ಸೆರೆಲ್ ಇರ್ವೀ ಅರ್ಧ ಶತಕ ಮಿಂಚಿದರೆ ನಾಯಕ ಡೀನ್ ಎಲ್ಗರ್, ಮಾರ್ಕೋ ಜಾನ್ಸನ್, ಕೇಶವ್ ಮಹಾರಾಜ್ ಅವರಿಂದ ಬಂದ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ನೆರವಾಯಿತು.

ಇನ್ನಿಂಗ್ಸ್ ಅಂತರದಿಂದ ಸೋಲು

ಇನ್ನಿಂಗ್ಸ್ ಅಂತರದಿಂದ ಸೋಲು

ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ಇನ್ನಿಂಗ್ಸ್ ಅಂತರದಿಂದ ಸೋಲು ಅನುಭವಿಸಿದೆ. ತಂಡದ ಪ್ರಮುಖ ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ ಸೇರಿದಂತೆ ಯಾವ ಆಟಗಾರರಿಂದಲೂ ಉತ್ತಮ ಪ್ರದರ್ಶನ ಬಾರಲಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನದೇ ಆದ ಶೈಲಿಯನ್ನು ಅಳವಡಿಸಿಕೊಂಡಿದ್ದ ಇಂಗ್ಲೆಂಡ್ ಈ ಪಂದ್ಯದಲ್ಲಿ ಅದ್ಯಾವುದನ್ನೂ ವ್ಯಕ್ತಪಡಿಸಲು ಸಂಪೂರ್ಣವಾಗಿ ವಿಫಲವಾಯಿತು. ಈ ಮೂಲಕ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ಮೊದಲ ಟೆಸ್ಟ್ ಸೋಲು ಅನುಭವಿಸಿದೆ.

UAE ನಲ್ಲಿ ಅನುಭವವಿಲ್ಲದ ಭಾರತ ಪಾಕಿಸ್ತಾನದ‌ ಮುಂದೆ ಸೋಲೋದು‌ ಗ್ಯಾರೆಂಟಿ ಅಂತೆ!! | Oneindia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್ ಆಡುವ ಬಳಗ: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಮ್ಯಾಟಿ ಪಾಟ್ಸ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ರಾಬಿನ್ಸನ್, ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್

ದಕ್ಷಿಣ ಆಫ್ರಿಕಾ ತಂಡ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಕಿಯಾ, ಲುಂಗಿ ಎನ್‌ಗಿಡಿ
ಬೆಂಚ್: ಲುಥೋ ಸಿಪಾಮ್ಲಾ, ಸೈಮನ್ ಹಾರ್ಮರ್, ಖಯಾ ಜೊಂಡೋ, ರಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್

Story first published: Saturday, August 20, 2022, 9:55 [IST]
Other articles published on Aug 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X