79 ನಿಮಿಷದಲ್ಲಿ 58 ಸ್ಕೋರಿಗೆ ಇಂಗ್ಲೆಂಡ್ ಆಲೌಟ್!

Posted By:
Ten wickets in 79 minutes - a timeline of Englands Auckland horror show

ಆಕ್ಲೆಂಡ್, ಮಾರ್ಚ್ 22 : ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಹೀನಾಯವಾಗಿ ಆಲೌಟ್ ಆಗಿದೆ. ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟದಲ್ಲಿ ಐದು ಬ್ಯಾಟ್ಸ್ ಮನ್ ಗಳು ಶೂನ್ಯ ಸುತ್ತಿ ಪೆವಿಲಿಯನ್ ಗೆ ತೆರಳಿದ್ದು, ಕೇವಲ 79 ನಿಮಿಷಗಳ ಆಟದಲ್ಲಿ 58 ಸ್ಕೋರಿಗೆ ಇಂಗ್ಲೆಂಡಿನ 10 ವಿಕೆಟ್ ಗಳನ್ನು ಕಿವೀಸ್ ಬೌಲರ್ ಗಳು ಕಿತ್ತು ಹಾಕಿದ್ದಾರೆ. 10 ವಿಕೆಟ್ ಗಳ ಪತನದ ಟೈಮ್ ಲೈನ್ ಇಲ್ಲಿದೆ

ಪಂದ್ಯದ ಸ್ಕೋರ್ ಕಾರ್ಡ್
ನ್ಯೂಜಿಲೆಂಡ್ ನ ವೇಗಿಗಳಾದ ಟ್ರೆಂಟ್ ಬೌಲ್ಟ್ (6/32) ಹಾಗೂ ಟಿಮ್ ಸೌಥಿ (4/25) ಅವರು ಜೋ ರೂಟ್ ಅವರ ತಂಡದ ಬೆನ್ನೆಲುಬು ಮುರಿದರು. 20.4 ಓವರ್ ಗಳಲ್ಲಿ ಇಂಗ್ಲೆಂಡ್ 58ರನ್ನಿಗೆ ಆಲೌಟ್ ಆಯಿತು. ಮೊದಲ ದಿನದ ಅಂತ್ಯಕ್ಕೆ ನ್ಯೂಜಿಲೆಂಡ್ 175/3 ಸ್ಕೋರ್ ಮಾಡಿದೆ.

2:14pm local time: ಕುಕ್ c ಲಾಥಮ್ b ಬೌಲ್ಟ್ - 5 (21 ಎಸೆತಗಳು) - ಇಂಗ್ಲೆಂಡ್ 6-1 - ಆಟ ಶುರುವಾದ 14 ನಿಮಿಷಕ್ಕೆ ಮೊದಲ ವಿಕೆಟ್ ಪತನ,ಎರಡನೇ ಸ್ಲಿಪ್ ನಲ್ಲಿ ಲಾಥಮ್ ಗೆ ಕ್ಯಾಚಿತ್ತ ಅಲೆಸ್ಟರ್ ಕುಕ್

2:23pm: ರೂಟ್ b ಬೌಲ್ಟ್ - 0 (6ಎಸೆತ) - ಇಂಗ್ಲೆಡ್ 6-2 - ಮತ್ತೆ ಬೌಲ್ಟ್ ಬೌಲಿಂಗ್, ಇನ್ ಸ್ವಿಂಗರ್ ಗೆ ಇಂಗ್ಲೆಂಡ್ ನ ನಾಯಕ ರೂಟ್ ಕ್ಲೀನ್ ಬೋಲ್ಡ್

2:33pm: ಮಲಾನ್ c ವಾಟ್ಲಿಂಗ್ b ಬೌಲ್ಟ್ - 2 (6 ಎಸೆತ) - ಇಂಗ್ಲೆಂಡ್ 16-3 - ವಿಕೆಟ್ ಕೀಪರ್ ವಾಟ್ಲಿಂಗ್ ಗೆ ಕ್ಯಾಚ್ ನೀಡಿದ ಬೌಲ್ಟ್.

2:39pm: ಸ್ಟೋನೆಮನ್ c ವಾಟ್ಲಿಂಗ್ b ಸೌಥಿ - 11 (20 ಎಸೆತ) - ಇಂಗ್ಲೆಂಡ್ 18-4 - ಸ್ವಿಂಗ್ ಬೌಲಿಂಗ್ ಗೆ ಬಲಿಯಾದ ಸ್ಟೋನೆಮನ್, ಸೌಥಿಗೆ ಮೊದಲ ವಿಕೆಟ್.

2:44pm: ಸ್ಟೋಕ್ b ಬೌಲ್ಟ್ - 0 (8 ಎಸೆತ) - ಇಂಗ್ಲೆಂಡ್ 18-5 - ಬೌಲ್ಟ್ ಎಸೆತವನ್ನು ಅರಿಯದೆ ಬೋಲ್ಡ್ ಆದ ಸ್ಟೋಕ್.

2:48pm: ಬೈಸ್ಟೋ c&b ಸೌಥಿ- 0 (4ಎಸೆತ) - ಇಂಗ್ಲೆಂಡ್ 18-6 - ತಮ್ಮ ಬೌಲಿಂಗ್ ನಲ್ಲಿ ಕ್ಯಾಚ್ ಹಿಡಿದು, 6ನೇ ವಿಕೆಟ್ ಉದುರಿಸಿದ ಸೌಥಿ.

2:57pm: ವೋಕ್ಸ್ b ಬೌಲ್ಟ್ - 5 (9b) - ಇಂಗ್ಲೆಂಡ್ 23-7 - ಸತತ ಐದನೆ ಓವರ್ ನಲ್ಲಿ ಮತ್ತೆ ವಿಕೆಟ್ ಪಡೆದ ಬೌಲ್ಟ್. ಇನ್ ಸ್ವಿಂಗರ್ ಗೆ ವೋಕ್ಸ್ ಬೋಲ್ಡ್.

3:02pm: ಮೋಯಿನ್ b ಸೌಥಿ- 0 (8b) -ಇಂಗ್ಲೆಂಡ್ 23-8 - ನಾಲ್ಕನೆ ಬ್ಯಾಟ್ಸ್ ಮನ್ ಶೂನ್ಯಕ್ಕೆ ಔಟ್.

3:11pm: ಬ್ರಾಡ್ c ವಿಲಿಯಮ್ಸನ್ b ಸೌಥಿ - 0 (6b) -ಇಂಗ್ಲೆಂಡ್ 27-9 - ಗಲ್ಲಿಯಲ್ಲಿದ್ದ ವಿಲಿಯಮ್ಸನ್ ಗೆ ಕ್ಯಾಚಿತ್ತ ಬ್ರಾಡ್, 45 ರನ್ ಗಳ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿ ಇಂಗ್ಲೆಂಡ್.

3:33pm: ಆಂಡರ್ಸನ್ c ನಿಕೋಲ್ಸ್ b ಬೌಲ್ಟ್ - 1 (11b) -ಇಂಗ್ಲೆಂಡ್ 58 ಆಲೌಟ್ - 5 ಬೌಂಡರಿ, ಒಂದು ಸಿಕ್ಸ್ ಬಾರಿಸಿ ಅಜೇಯ 33 ರನ್ ಗಳಿಸಿದ ಓವರ್ಟನ್. ಆದರೆ, ಆಂಡರ್ಸನ್ ಕ್ಯಾಚ್ ನೀಡಿ ಔಟಾಗುವ ಮೂಲಕ ಇಂಗ್ಲೆಂಡ್ ಸರ್ವಪತನ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, March 22, 2018, 20:52 [IST]
Other articles published on Mar 22, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ