ಐಸಿಸಿ ವಿಶ್ವಕಪ್ ಹೊಸ್ತಿಲಲ್ಲೇ 'ಮಂಡೆಬಿಸಿ'ಯಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ!

ಲಂಡನ್, ಮೇ 24: ಇವತ್ತಿಗೆ (ಮೇ 24) ಬರೀ ಒಂದು ವಾರದಲ್ಲಿ ಕುತೂಹಲಕಾರಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭಗೊಳ್ಳುವುದರಲ್ಲಿದೆ. ಆದರೆ ಈ ಸಮಯದಲ್ಲೇ ಆತಿಥೇಯ ಇಂಗ್ಲೆಂಡ್ ತಂಡ ಭೀತಿಗೊಳಗಾಗುವಂತಾಗಿದೆ. ಕಾರಣ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಗಾಯ ಮಾಡಿಕೊಂಡಿದ್ದಾರೆ.

ಆಲ್ ರೌಂಡರ್‌ಗಳ ಆಟ ಭಾರತದ ವಿಶ್ವಕಪ್ ಭವಿಷ್ಯ ನಿರ್ಧರಿಸಲಿದೆಯಾ?!

ಶುಕ್ರವಾರ (ಮೇ 24) ಸೌತಾಂಪ್ಟನ್‌ ನ ಏಜೀಸ್ ಬೌಲ್‌ನಲ್ಲಿ ಇಂಗ್ಲೆಂಡ್ ತಂಡದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದ ಮಾರ್ಗನ್ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ಅವರು ಎಕ್‌ ರೇ ಮೊರೆ ಹೋಗುವುದರಲ್ಲಿದ್ದಾರೆ ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.

'ಮುಂಜಾನೆ ಅಭ್ಯಾಸದ ವೇಳೆ ಫೀಲ್ಡಿಂಗ್ ಮಾಡುವಾಗ ಮಾರ್ಗನ್ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಪಂದ್ಯದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಎಕ್ಸ್‌ ರೇ ತೆಗಿಸಲು ಅವರು ಆಸ್ಪತ್ರೆಗೆ ತೆರಳಿದ್ದಾರೆ' ಎಂದು ಇಸಿಬಿ ಸಂಕ್ಷಿಪ್ತ ಪ್ರಕಟಣೆಯಲ್ಲಿ ಹೇಳಿದೆ.

ಬುಮ್ರಾ ಬೌಲಿಂಗ್‌ನಲ್ಲಿ ರನ್‌ ಗಳಿಸುವ ತಂತ್ರ ಬಿಚ್ಚಿಟ್ಟ ಬ್ರಿಯಾನ್‌ ಲಾರಾ

ಇಯಾನ್ ಮಾರ್ಗನ್ ನಾಯಕತ್ವದಲ್ಲಿರುವ ಬಲಿಷ್ಠ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್‌ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದೆ. ಜೊತೆಗೆ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮಾರ್ಗನ್ ಪ್ರಮುಖ ಆಟಗಾರರೂ ಹೌದು. ಸಾಲದಕ್ಕೆ ಮೇ 30ರಂದು ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ದಕ್ಷಿಣ ಆಫ್ರಿಕಾದ ಸವಾಲು ಸ್ವೀಕರಿಸಲಿದೆ. ಹೀಗಾಗಿ ಮಾರ್ಗನ್ ಗಾಯ ಸಹಜವಾಗೇ ತಂಡವನ್ನು ಭೀತಿಗೊಡ್ಡಿದೆ.

For Quick Alerts
ALLOW NOTIFICATIONS
For Daily Alerts
Story first published: Friday, May 24, 2019, 18:40 [IST]
Other articles published on May 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X