ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಜೋಸ್ ಬಟ್ಲರ್ ಕಣಕ್ಕೆ?

England confident of Jos Buttler fitness despite hip injury

ಲಂಡನ್, ಜೂನ್, 9: ಕಾರ್ಡಿಫ್‌ನಲ್ಲಿ ಭಾನುವಾರ (ಜೂನ್ 8) ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಗಾಯಕ್ಕೀಡಾಗಿದ್ದರು. ಆದರೆ ಮುಂದೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ಬಟ್ಲರ್ ಚೇತರಿಸಿಕೊಳ್ಳುವ ವಿಶ್ವಾಸವನ್ನು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ವ್ಯಕ್ತಪಡಿಸಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಬಾಂಗ್ಲಾ ವಿರುದ್ಧ ಬಟ್ಲರ್ 44 ಎಸೆತಗಳಿಗೆ 64 ರನ್ ಬಾರಿಸಿ ಸೈಫುದ್ದೀನ್ ಗೆ ವಿಕೆಟ್ ಒಪ್ಪಿಸಿದ್ದರು. ಬ್ಯಾಟಿಂಗ್ ಮಾಡುತ್ತಿದ್ದಾಗಲೇ ಬಟ್ಲರ್ ಸೊಂಟ ನೋವಿನಿಂದ ಬಳಲಿದ್ದರು. ಹೀಗಾಗಿ ಇಂಗ್ಲೆಂಡ್ ಇನ್ನಿಂಗ್ಸ್ ಬಳಿಕ ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ಬಟ್ಲರ್ ಮೈದಾನಕ್ಕಿಳಿದಿರಲಿಲ್ಲ.

'ಅಂಥ ಗಂಭೀರ ಗಾಯವೇನೂ ಆಗಿಲ್ಲ. ಇನ್ನು 48 ಗಂಟೆಗಳಲ್ಲಿ ಬಟ್ಲರ್ ಆರೋಗ್ಯ ಸ್ಥಿತಿಯ ಬಗ್ಗೆ ಚಿತ್ರಣ ದೊರೆಯಲಿದೆ. ಗಾಯಕ್ಕೊಳಗಾದ ಆ ಕ್ಷಣದಲ್ಲಿ ಮುಂಜಾಗೃತಾ ಕ್ರಮವಾಗಿ ಬಟ್ಲರ್ ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ಮೈದಾನಕ್ಕಿಳಿದಿರಿಲ್ಲ. ಆದರೆ ಅದು ಗಂಭೀರ ಗಾಯವಲ್ಲ ಎಂದು ನನಗೆ ವಿಶ್ವಾಸವಿದೆ' ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾರ್ಗನ್ ತಿಳಿಸಿದರು.

ಅಂಕಿ ಅಂಶದಲ್ಲಿ ಇಂಡೋ -ಆಸೀಸ್ ಸಮರ, ರನ್ ಗಳಿಕೆಯಲ್ಲಿ ಸಚಿನ್ ಬೆಸ್ಟ್!ಅಂಕಿ ಅಂಶದಲ್ಲಿ ಇಂಡೋ -ಆಸೀಸ್ ಸಮರ, ರನ್ ಗಳಿಕೆಯಲ್ಲಿ ಸಚಿನ್ ಬೆಸ್ಟ್!

ಅಂದ್ಹಾಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಆಂಗ್ಲರು 106 ರನ್‌ಗಳಿಂದ ಗೆದ್ದುಕೊಂಡಿದ್ದಾರೆ. ಜೂನ್ 14ರಂದು ಸೌತಾಂಪ್ಟನ್‌ನ ರೋಸ್ ಬೌಲ್‌ನಲ್ಲಿ ವಿಶ್ವಕಪ್ 19ನೇ ಪಂದ್ಯಕ್ಕಾಗಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಬಟ್ಲರ್ ಆಡುವುದನ್ನು ನಿರೀಕ್ಷಿಸಲಾಗಿದೆ.

Story first published: Sunday, June 9, 2019, 11:01 [IST]
Other articles published on Jun 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X