ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟೆಸ್ಟ್ 2ನೇ ದಿನ: ದಾಖಲೆಗಳ ಮೇಲೆ ದಾಖಲೆ ಬರೆದ ಆಶ್ವಿನ್

England in India 2021: R Ashwin smashes many record in Second Test match day 2

ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಹೊಸ ದಾಖಲೆ ಬರೆದಿದ್ದಾರೆ.ಭಾರತದ ಮೊದಲ ಇನ್ನಿಂಗ್ಸ್ ಮೊತ್ತ 329ಕ್ಕೆ ಪ್ರತಿಯಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 134 ರನ್ನಿಗೆ ಆಲೌಟ್ ಆಗಿದೆ. ಭಾರತ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಟ್ಟಿಯಲ್ಲಿ ಬಾಥಮ್ ಅವರ 383 ವಿಕೆಟ್ ದಾಟಿ ಅಶ್ವಿನ್ ಮುಂದಕ್ಕೆ ಸಾಗಿದ್ದರು. 2ನೇ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ ದಾಖಲೆ ಮುರಿದಿದ್ದಾರೆ. ತವರಿನಲ್ಲಿ 265 ವಿಕೆಟ್ ಕಬಳಿಸಿದ್ದ ಹರ್ಭಜನ್ ಸಿಂಗ್ ಸಾಧನೆಯನ್ನು ಅಶ್ವಿನ್ ಹಿಂದಿಕ್ಕಿದ್ದಾರೆ.

ಟೆಸ್ಟ್ ಕ್ರಿಕೆಟ್: 5 ವಿಕೆಟ್ ಗಳಿಕೆ, ಬಾಥಮ್ ದಾಖಲೆ ಮುರಿದ ಅಶ್ವಿನ್ಟೆಸ್ಟ್ ಕ್ರಿಕೆಟ್: 5 ವಿಕೆಟ್ ಗಳಿಕೆ, ಬಾಥಮ್ ದಾಖಲೆ ಮುರಿದ ಅಶ್ವಿನ್

ಇದಲ್ಲದೆ, ಸ್ಟುವರ್ಟ್ ಬ್ರಾಡ್ ವಿಕೆಟ್ ಪಡೆಯುತ್ತಿದ್ದಂತೆ, ಟೆಸ್ಟ್ ಕ್ರಿಕೆಟ್ ನಲ್ಲಿ 200 ಎಡಗೈ ಬ್ಯಾಟ್ಸ್ ಮನ್ ವಿಕೆಟ್ ಪಡೆದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡರು. ಅಶ್ವಿನ್ ಅವರ ಟೆಸ್ಟ್ ವೃತ್ತಿ ಬದುಕಿನ ಮೊದಲ ವಿಕೆಟ್ ಕೂಡಾ ಎಡಗೈ ಬ್ಯಾಟ್ಸ್ ಮನ್ ರದ್ದು ಎಂಬುದು ವಿಶೇಷ.

ಅಶ್ವಿನ್ ಅಂಕಿ ಅಂಶ

ಅಶ್ವಿನ್ ಅಂಕಿ ಅಂಶ

34ವರ್ಷ ವಯಸ್ಸಿನ ಅಶ್ವಿನ್ ಅವರು ಒಟ್ಟಾರೆ 74 ಟೆಸ್ಟ್ ಪಂದ್ಯಗಳಿಂದ 386 ವಿಕೆಟ್ ಗಳಿಸಿದ್ದು, 28 ಬಾರಿ 5 ವಿಕೆಟ್ ಗಳಿಸಿದ್ದಾರೆ, 7 ಬಾರಿ 10 ವಿಕೆಟ್ ಪಡೆದಿದ್ದಾರೆ, 7/59 ಶ್ರೇಷ್ಠ ಪ್ರದರ್ಶನ. ಬ್ಯಾಟಿಂಗ್ ನಲ್ಲೂ ಮಿಂಚಿ 4 ಟೆಸ್ಟ್ ಶತಕ, 11 ಅರ್ಧಶತಕ ಗಳಿಸಿದ್ದಾರೆ.

ಅಶ್ವಿನ್ ಭಾರತದಲ್ಲಿ ಸಾಧನೆ

ಅಶ್ವಿನ್ ಭಾರತದಲ್ಲಿ ಸಾಧನೆ

ಭಾರತದಲ್ಲಿ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದು 22.69ರ ಸರಾಸರಿಯಲ್ಲಿ 266 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 22 ಬಾರಿ 5 ವಿಕೆಟ್‌ಗಳ ಗೊಂಚಲು ಪಡೆದಿರುವ ಅಶ್ವಿನ್ 6 ಬಾರಿ 10 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಭಾರತ vs ಇಂಗ್ಲೆಂಡ್: ತವರಿನಲ್ಲಿ ಹರ್ಭಜನ್ ಸಾಧನೆ ಹಿಂದಿಕ್ಕಿದ ಆರ್ ಅಶ್ವಿನ್

ಅತಿ ಹೆಚ್ಚು 5 ವಿಕೆಟ್ ಗಳಿಕೆ ಟಾಪ್ 10 ಬೌಲರ್ಸ್

ಅತಿ ಹೆಚ್ಚು 5 ವಿಕೆಟ್ ಗಳಿಕೆ ಟಾಪ್ 10 ಬೌಲರ್ಸ್

ಮುರಳಿಧರನ್ (ಶ್ರೀಲಂಕಾ): 67 ಬಾರಿ
ಶೇನ್ ವಾರ್ನ್(ಆಸ್ಟ್ರೇಲಿಯಾ): 37
ಸರ್ ರಿಚರ್ಡ್ ಹ್ಯಾಡ್ಲಿ(ನ್ಯೂಜಿಲೆಂಡ್): 36
ಅನಿಲ್ ಕುಂಬ್ಳೆ (ಭಾರತ): 35
ರಂಗನಾ ಹೆರಾತ್ (ಶ್ರೀಲಂಕಾ): 34
ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್): 30
ಗ್ಲೆನ್ ಮೆಗ್ರಾ (ಆಸ್ಟ್ರೇಲಿಯಾ): 29
ಆರ್ ಅಶ್ವಿನ್ (ಭಾರತ): 29
ಇಯಾನ್ ಬಾಥಮ್ (ಇಂಗ್ಲೆಂಡ್): 27
ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ): 26
ವಾಸಿಂ ಅಕ್ರಂ (ಪಾಕಿಸ್ತಾನ): 25
ಹರ್ಭಜನ್ ಸಿಂಗ್ (ಭಾರತ) : 25

ಜೇಮ್ಸ್ ಆಂಡರ್ಸನ್ ದಾಖಲೆ ಧೂಳಿಪಟ

ಜೇಮ್ಸ್ ಆಂಡರ್ಸನ್ ದಾಖಲೆ ಧೂಳಿಪಟ

ತವರು ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ದಾಖಲೆ ಹೊಂದಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ದಾಖಲೆಯನ್ನು ಆರ್ ಅಶ್ವಿನ್ ಮುರಿದಿದ್ದಾರೆ. 89 ಟೆಸ್ಟ್ ಪಂದ್ಯಗಳಲ್ಲಿ ಆಂಡರ್ಸನ್ 22 ಬಾರಿ 5 ವಿಕೆಟ್ ಪಡೆದಿದ್ದರು. ಅಶ್ವಿನ್ ಅವರು 45 ತವರು ನೆಲದಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ 23 ಬಾರಿ 5 ವಿಕೆಟ್ ಗಳಿಸಿದ್ದಾರೆ. ಅತಿ ಹೆಚ್ಚು ಬಾರಿ ತವರು ನೆಲದಲ್ಲಿ 5 ವಿಕೆಟ್ ಪಡೆದವರ ಪಟ್ಟಿಯಲ್ಲಿ ಮುರಳಿಧರನ್ (45), ರಂಗನಾ ಹೆರಾತ್ (26), ಅನಿಲ್ ಕುಂಬ್ಳೆ(25) ಮಾತ್ರ ಅಶ್ವಿನ್ ಗಿಂತ ಮುಂದಿದ್ದಾರೆ.

ಎಡಗೈ ಬ್ಯಾಟ್ಸ್ ಮನ್ ಗಳ ಪೈಕಿ ಯಾರು ಹೆಚ್ಚು ಬಾರಿ ಬಲಿ

ಎಡಗೈ ಬ್ಯಾಟ್ಸ್ ಮನ್ ಗಳ ಪೈಕಿ ಯಾರು ಹೆಚ್ಚು ಬಾರಿ ಬಲಿ

200 ಬಾರಿ ಎಡಗೈ ಬ್ಯಾಟ್ಸ್ ಮನ್ ವಿಕೆಟ್ ಪಡೆದ ಏಕೈಕ ಬೌಲರ್ ಎನಿಸಿಕೊಂಡಿರುವ ಅಶ್ವಿನ್ ಅವರು 10 ಬಾರಿ ಡೇವಿಡ್ ವಾರ್ನರ್ ವಿಕೆಟ್ ಉರುಳಿಸಿದ್ದಾರೆ. ಮಿಕ್ಕಂತೆ ಬೆನ್ ಸ್ಟೋಕ್ಸ್ ಹಾಗೂ ಅಲೆಸ್ಟರ್ ಕುಕ್ 9 ಬಾರಿ ವಿಕೆಟ್ ಒಪ್ಪಿಸಿದ್ದರೆ, ಎಕ್ ಕೋವನ್ ಹಾಗೂ ಜೇಮ್ಸ್ ಆಂಡರ್ಸನ್ 7 ಬಾರಿ ಅಶ್ವಿನ್ ಗೆ ವಿಕೆಟ್ ನೀಡಿದ್ದಾರೆ.

Story first published: Sunday, February 14, 2021, 16:01 [IST]
Other articles published on Feb 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X