ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂದಿನಿಂದ ಏಕದಿನ ಸರಣಿ: ಮೊದಲ ಏಕದಿನ ಪಂದ್ಯಕ್ಕೆ ಐರ್ಲೆಂಡ್ ಇಂಗ್ಲೆಂಡ್ ಸಜ್ಜು

England Not Taking Ireland Lightly, Says Skipper Eoin Morgan

ಕರೊನಾ ವೈರಸ್ ಭೀತಿ ನಡುವೆಯೂ 117 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಚಾಲನೆ ದೊರೆಯಿತು. ಕೊರೊನಾ ವೈರಸ್‌ ಬಳಿಕದ ಮೊತ್ತಮೊದಲ ಏಕದಿನ ಸರಣಿಯೂ ಇಂದಿನಿಂದ ಆರಂಭವಾಗಲಿದೆ.

ಕ್ರಿಕೆಟ್ ಇಂಗ್ಲೆಂಡ್ ನೆಲದಲ್ಲೇ ಏಕದಿನ ಕ್ರಿಕೆಟ್‌ ಸರಣಿಯೂ ಚಾಲನೆ ಪಡೆದುಕೊಳ್ಳಲಿದೆ. ಐರ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯಲ್ಲಿ ಸೆಣೆಸಾಟವನ್ನು ನಡೆಸಲಿದೆ. ಈ ಸರಣಿ ಚೊಚ್ಚಲ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದ್ದು 13ನೇ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲು ಇದು ಪರಿಗಣನೆಗಾಗುತ್ತದೆ.

ಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವುಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವು

ಇಂಗ್ಲೆಂಡ್ ತಂಡ ವಿಶ್ವಕಪ್ ವಿಜೇತ ತಂಡವಾಗಿದ್ದು ಸಹಜವಾಗಿಯೇ ಗೆಲುವಿನ ಫೇವರೀಟ್ ಎನಿಸಿದೆ. ಇಂಗ್ಲೆಂಡ್ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸುತ್ತಿದ್ದು ತಂಡದಲ್ಲಿ ಮೊಯಿನ್ ಅಲಿ, ಜಾನಿ ಬೇರ್‌ಸ್ಟೋ, ಜೇಸರ್ ರಾಯ್, ಡೇವಿಡ್ ವಿಲ್ಲಿರಂಥ ಬಲಿಷ್ಠ ಆಟಗಾರರಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ ಇಂಗ್ಲೆಮಡ್ ತಂಡದ ನಾಯಕ ಇಯಾನ್ ಮಾರ್ಗನ್ ಈ ಹಿಂದೆ ಐರ್ಲೆಂಡ್ ತಂಡದಲ್ಲಿ ನಾಯಕಾಗಿದ್ದರು. ಇಂದಿನ ಪಂದ್ಯದಲ್ಲಿ ಎದುರಾಳಿ ತಂಡದ ನಾಯಕತ್ವ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಎರಡು ದೇಶದ ಪರವಾಗಿ ಶತಕಗಳಿಸಿರುವ ಏಕೈಕ ಆಟಗಾರ ಎಂಬ ವಿಶಿಷ್ಟ ದಾಖಲೆಯನ್ನು ಹೊಂದಿದ್ದಾರೆ ಇಯಾನ್ ಮಾರ್ಗನ್.

ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಸೋಲಿಗೆ ಪ್ರಮುಖ ಕಾರಣ ಹೇಳಿದ ವಾಲ್ಷ್ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಸೋಲಿಗೆ ಪ್ರಮುಖ ಕಾರಣ ಹೇಳಿದ ವಾಲ್ಷ್

ಇನ್ನು 2023 ಏಕದಿನ ವಿಶ್ವಕಪ್‌ಗೆ ಅರ್ಹತೆ ಮೇಲೆ ಕಣ್ಣಿಟ್ಟಿರುವ ಐರ್ಲೆಂಡ್ ಇಂಗ್ಲೆಂಡ್‌ಗೆ ಪ್ರಬಲ ಪ್ರತಿಸ್ಪರ್ಧೆ ನೀಡಲು ಸಜ್ಜಾಗಿದೆ. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಐರ್ಲೆಂಡ್ ತಂಡವನ್ನು ಸುಲಭವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಸರಣಿಯ ಎರಡನೇ ಏಕದಿನ ಪಂದ್ಯ ಆ.1 ರಂದು ಹಾಗೂ ಆ. 4 ರಂದು 3ನೇ ಏಕದಿನ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 6:30ಕ್ಕೆ ಪಂದ್ಯ ಆರಂಭವಾಗಲಿದೆ.

Story first published: Thursday, July 30, 2020, 18:25 [IST]
Other articles published on Jul 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X