ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡು, ಮಳೆ, ವಿಶ್ವಕಪ್‌ ಟೈಮ್ ಟೇಬಲ್ಲು: ಅಚ್ಚರಿಯ ಸಂಗತಿಗಳು!

By Pavan Prasad Mp
England, Rain, World Cup Time Table: Interesting Facts

(ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪವನ್ ಪ್ರಸಾದ್ ಎಂಪಿ ಅವರು ಈ ಬಾರಿಯ ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರ ವೇಳಾಪಟ್ಟಿ ಮತ್ತು ಮಳೆಯಾಟಕ್ಕೆ ಸಂಬಂಧಿಸಿ ಒಂದಿಷ್ಟು ವಿಚಾರಗಳನ್ನು ತಮ್ಮದೇ ಶೈಲಿಯಲ್ಲಿ ಬರೆದಿದ್ದಾರೆ. ಓದುತ್ತಾ ಹೋಗಿ; 'ಮಳೆಗಾಲದಲ್ಲಿ ವರ್ಲ್ಡ್ ಕಪ್‌ ಮ್ಯಾಚು ಯಾಕಾದ್ರೂ ಇಟ್ಟವ್ರಪ್ಪ..' ಅನ್ನೋ ನಿಮ್ಮ ಗೊಣಗಾಟ ವರಸೆ ಬದಲಿಸೀತು).

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಂದ್ಯವೊಂದು ಮಳೆಗೆ ಆಹುತಿಯಾದಾಗಲೇ ಯುನೈಟೆಡ್ ಕಿಂಗ್ಡಮ್ ನ ವಾರ್ಷಿಕ ಹವಾಮಾನದ ಬಗ್ಗೆ ಮತ್ತು ಈ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದಿರುವ ವಿಶ್ವಕಪ್ ವೇಳಾಪಟ್ಟಿಯ ಮಾಹಿತಿಯನ್ನು ಓದಿ ತಿಳಿದುಕೊಂಡೆ. ಆಗ ಬಿಸಿಸಿಐ ನಿರ್ದೇಶಿತ ಐಪಿಎಲ್ ಗೋಸ್ಕರ, ಐಸಿಸಿ ನಿರ್ದೇಶಿತ ವರ್ಲ್ಡ್ ಕಪ್ ವೇಳಾಪಟ್ಟಿಯಲ್ಲಿ ಯಾವುದೇ ಹಸ್ತಕ್ಷೇಪದ ಸಾಧ್ಯತೆ ಇಲ್ಲವೆಂಬುದನ್ನು ಅರಿತೆ.

ಧೋನಿ-ಯುವಿ ನಡುವಣ ಗೆಳೆತನ ವೈರತ್ವಕ್ಕೆ ತಿರುಗಿದೆಯೇ?ಧೋನಿ-ಯುವಿ ನಡುವಣ ಗೆಳೆತನ ವೈರತ್ವಕ್ಕೆ ತಿರುಗಿದೆಯೇ?

ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಈ ಬಾರಿ ನಡೆಯುತ್ತಿರುವ 12ನೇ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನ vs ಶ್ರೀಲಂಕಾ, ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, ಬಾಂಗ್ಲಾದೇಶ vs ಶ್ರೀಲಂಕಾ, ಭಾರತ vs ನ್ಯೂಜಿಲೆಂಡ್ ಹೀಗೆ ನಾಲ್ಕು ಪಂದ್ಯಗಳು ಮಳೆಗೆ ಬಲಿಯಾಗಿರುವ ಸಂಗತಿ ಕ್ರಿಕೆಟ್ ಪ್ರಿಯರಿಗೆ ಮಂಡೆಬಿಸಿ ತಂದಿದೆ.

ಆದರೆ ಕ್ರಿಕೆಟ್ ಅಭಿಮಾನಿಗಳು ತಮ್ಮ ಬೇಸರದಲ್ಲಿ ವೇಳಾಪಟ್ಟಿಯನ್ನು ದೂರುತ್ತಾ, ಯಾಕೆ ನಾಲ್ಕು ವರ್ಷಗಳಿಗೊಮ್ಮೆ ಬರುವ ಈ ಪಂದ್ಯಾವಳಿಯನ್ನು ಮಳೆಗಾಲದಲ್ಲಿ ನಡೆಸುತ್ತಿದ್ದಾರೆಂಬ ಗುಮಾನಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅಸಲಿ ಸಂಗತಿ ಹಂಗಿಲ್ಲ.

ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ?ಗಾಯಾಳುಗಳಿಂದ ಕಳೆಗುಂದಿತೆ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ?

ವಾಸ್ತವ ಸಂಗತಿ ಏನೆಂದರೆ, ಈಗ ಇಂಗ್ಲೆಂಡ್ ನಲ್ಲಿ ಸಮ್ಮರ್ ಸೀಸನ್ (ಜೂನ್, ಜುಲೈ, ಮತ್ತು ಆಗಸ್ಟ್‌ ತಿಂಗಳಿನ ಅವಧಿ ಇಂಗ್ಲೆಂಡ್ ನಲ್ಲಿ ಬೇಸಿಗೆ ಕಾಲವಾಗಿರುತ್ತದೆ). ಅಲ್ಲದೆ ಸಾಮಾನ್ಯವಾಗಿ ಈ ಸಮ್ಮರ್ ಸೀಸನ್ ಅಲ್ಲಿ ಯು.ಕೆ. ಯಲ್ಲಿ ದೀರ್ಘ ಕಾಲ ಹಗಲಿದ್ದು ಮತ್ತು ಅತಿ ಹೆಚ್ಚು ಬಿಸಿಲನ್ನು ಹೊಂದುವ ಕಾಲವಾಗಿರುತ್ತದೆ.

ದಾಖಲೆ ಐದನೇ ಬಾರಿಗೆ ವಿಶ್ವಕಪ್ ಆತಿಥ್ಯವನ್ನು ಇಂಗ್ಲೆಂಡ್ ವಹಿಸಿಕೊಂಡಿದ್ದು, ಹಿಂದಿನ ನಾಲ್ಕು ಬಾರಿಯೂ ಇದೇ ಸಮ್ಮರ್ ಸೀಸನ್ ಅಲ್ಲಿ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು.

England, Rain, World Cup Time Table: Interesting Facts

ಮೊದಲ ಮೂರು ವಿಶ್ವಕಪ್ ಗಳನ್ನು (1975, 1979, 1982) ಇಂಗ್ಲೆಂಡ್ ಆತಿಥ್ಯದಲ್ಲಿ ಜೂನ್ ತಿಂಗಳಲ್ಲಿಯೇ ನಡೆಸಲಾಗಿತ್ತು.
1999ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಅನ್ನು ಮೇ 14ರಿಂದ ಜೂನ್ 30ರವರೆಗಿನ ಅವಧಿಯಲ್ಲಿ ನಡೆಸಲಾಗಿತ್ತು.

ಇಲ್ಲಿಯವರೆಗೂ ಇಂಗ್ಲೆಂಡ್‌ನಲ್ಲಿ ನಡೆದ ನಾಲ್ಕು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಕೇವಲ ಎರಡು ಪಂದ್ಯಗಳು ಮಾತ್ರ ಮಳೆಯಿಂದಾಗಿ ಕೊಚ್ಚಿ ಹೋಗಿದ್ದವು. ಒಂದು 1979ರಲ್ಲಿ ಮತ್ತು ಇನ್ನೊಂದು 1999ರಲ್ಲಿ; ಈ ಎರಡು ಪಂದ್ಯಗಳೂ ಮೀಸಲು ದಿನಗಳಲ್ಲಿ ಕೂಡ ಮಳೆಯಿಂದಾಗಿ ನಡೆದಿರಲಿಲ್ಲ.

ಭಾರತ Vs ಕಿವೀಸ್ : ರಾತ್ರಿಯೂ ಸೂರ್ಯ ಬೆಳಗಿದ್ದರೆ ಮಾತ್ರ ಪಂದ್ಯ ಸಾಧ್ಯವಿತ್ತುಭಾರತ Vs ಕಿವೀಸ್ : ರಾತ್ರಿಯೂ ಸೂರ್ಯ ಬೆಳಗಿದ್ದರೆ ಮಾತ್ರ ಪಂದ್ಯ ಸಾಧ್ಯವಿತ್ತು

ಇಂಗ್ಲೆಂಡ್‌ನ ಹವಾಮಾನ ಅತ್ಯಂತ ಅನಿಶ್ಚಿತತೆಯಿಂದ ಕೂಡಿದ್ದು, ಒಂದೇ ದಿನದಲ್ಲಿ ವಿವಿಧ ವಾತಾವರಣಕ್ಕೆ ತೆರೆದುಕೊಳ್ಳುತ್ತದೆ. ಅಲ್ಲದೆ ಇಂಗ್ಲೆಂಡ್‌ನಲ್ಲೀಗ ಸಮ್ಮರ್ ಸೀಸನ್ ಆಗಿದ್ದು, ಜಾಸ್ತಿ ಸನ್ನೀ ಡೇ ಇರುವ ಕಾರಣ, ಪಿಚ್ ಬ್ಯಾಟಿಂಗ್ ಗೆ ಹೆಚ್ಚು ಅನುಕೂಲವಾಗಿರುವುದೆಂದು ಜೂನ್ ಮತ್ತು ಜುಲೈ ಮೊದಲರ್ಧ ಭಾಗಕ್ಕೆ ಆದ್ಯತೆ ಕೊಟ್ಟಿರುತ್ತಾರೆ ಎಂಬುದು ನನ್ನ ನಿಲುವು.

ಓವರ್‌ಕಾಸ್ಟ್ ಹವಾಮಾನದಲ್ಲಿ ಪಂದ್ಯ ನಡೆದರೆ, ಬಲಾಢ್ಯ ಫೇಸ್ ಬೌಲಿಂಗ್ ಇರುವ (ತೀಕ್ಷ್ಣ ವೇಗಿಗಳಿರುವ ಆತಿಥೇಯ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ) ತಂಡಗಳಿಗೆ ಮಾತ್ರ ಹೆಚ್ಚು ಅನುಕೂಲವಾಗುವುದನ್ನು ತಪ್ಪಿಸುವ ಉದ್ದೇಶದಿಂದ ವೇಳಾಪಟ್ಟಿಯನ್ನು ಸಿದ್ಧಪಡಿಸಿರಬಹುದು.

ಭಾರತ Vs ಪಾಕಿಸ್ತಾನ: ವಿಶ್ವಕಪ್‌ನ ಮರೆಯಲಾಗದ ಐದು ಕ್ಷಣಗಳುಭಾರತ Vs ಪಾಕಿಸ್ತಾನ: ವಿಶ್ವಕಪ್‌ನ ಮರೆಯಲಾಗದ ಐದು ಕ್ಷಣಗಳು

ಆಶ್ಚರ್ಯವೆಂದರೆ, ಇಂಗ್ಲೆಂಡ್‌ನಲ್ಲಿ ನಡೆದ ಕಳೆದ‌ ನಾಲ್ಕು ವಿಶ್ವಕಪ್ ಗಳ ಎಲ್ಲ ಪಂದ್ಯಗಳಿಗೂ ರಿಸರ್ವ್ ಡೇ (ಮೀಸಲು ದಿನ) ನಿಗದಿಪಡಿಸಿದ್ದು, ಈ ಬಾರಿ ಕೇವಲ ನಾಕ್‌ಔಟ್‌ ಹಂತದ ಪಂದ್ಯಗಳಿಗೆ ಮಾತ್ರ ಮೀಸಲು ದಿನಗಳಿರುತ್ತವೆ.

ಇಂಗ್ಲೆಂಡ್‌ನಲ್ಲಿ ನಡೆದ ಕಳೆದ ನಾಲ್ಕು ವಿಶ್ವಕಪ್ ಅಲ್ಲಿ ಕೇವಲ ಎರಡು ಪಂದ್ಯಗಳು ಮಳೆಯ ಕಾರಣ ರದ್ದಾಗಿದ್ದು; ಈ ಬಾರಿ ಲೀಗ್ ಹಂತ ಅರ್ಧ ಮುಟ್ಟುವುದರೊಳಗೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿರುವುದು ವಿಪರ್ಯಾಸ.

ಕ್ರಿಕೆಟ್ ಪ್ರೇಮಿಗಳೆಲ್ಲರ ಹಾರೈಕೆಯಿಂದಾಗಿ ಇನ್ನುಳಿದ ಪಂದ್ಯಗಳು ಮಳೆರಾಯನ ಅವಕೃಪೆಗೆ ಒಳಗಾಗದಿರಲಿ.

Story first published: Friday, June 14, 2019, 16:57 [IST]
Other articles published on Jun 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X