ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ ಸೋಲಿನ ಗಾಯದ ಮೇಲೆ ಟಿ20 ಬರೆ!

england vs Australia only t20: Australia lost again

ಎಡ್ಜ್‌ಬಾಸ್ಟನ್, ಜೂನ್ 28: ಏಕದಿನ ಸರಣಿಯಲ್ಲಿ ಹೀನಾಯ ರೀತಿಯಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಏಕೈಕ ಟಿ20 ಪಂದ್ಯದಲ್ಲಿಯೂ ಸೋಲಿನ ಕಹಿ ಉಂಡಿದೆ.

ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್‌ಗೆ ಆಸ್ಟ್ರೇಲಿಯಾದ ಬೌಲರ್‌ಗಳು ಬೆವರಳಿಸಿ ಸುಸ್ತಾದರೆ, ಬಳಿಕ ಆದಿಲ್ ರಷೀದ್ ಬೌಲಿಂಗ್‌ಗೆ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಏಕದಿನ ಸರಣಿಯ ಸೋಲಿನ ಗಾಯದ ಮೇಲೆ ಟಿ20ರ ಬರೆ ಬಿದ್ದಿತು.

ಮೊದಲ ಟಿ20ಐ : ಐರ್ಲೆಂಡ್ ವಿರುದ್ಧ ಭಾರತಕ್ಕೆ 76ರನ್ ಗಳ ಜಯಮೊದಲ ಟಿ20ಐ : ಐರ್ಲೆಂಡ್ ವಿರುದ್ಧ ಭಾರತಕ್ಕೆ 76ರನ್ ಗಳ ಜಯ

ತನ್ನ ಕಳಪೆ ಪ್ರದರ್ಶನ ಮುಂದುವರಿಸಿದ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ 28 ರನ್‌ಗಳ ಸೋಲು ಅನುಭವಿಸಿ ಮತ್ತೆ ನಿರಾಶೆ ಹೊಂದಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಲೆಕ್ಕಾಚಾರವನ್ನು ಇಂಗ್ಲೆಂಡ್ ತಲೆಕೆಳಗಾಗಿ ಮಾಡಿತು.

ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಜೇಸನ್ ರಾಯ್ ಆಸೀಸ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ದಂಡಿಸಿದರು. ಮೊದಲ ವಿಕೆಟ್‌ಗೆ 8.5 ಓವರ್‌ಗಳಲ್ಲಿಯೇ 95 ರನ್ ಕಲೆಹಾಕಿದರು. ಇದರಲ್ಲಿ ಬಟ್ಲರ್ ಸ್ಕೋರ್ 61. ಕೇವಲ 30 ಎಸೆತಗಳನ್ನು ಎದುರಿಸಿದ ಬಟ್ಲರ್ 6 ಬೌಂಡರಿ ಮತ್ತು 5 ಸಿಕ್ಸರ್ ಸಿಡಿಸಿದರು.

ನಂತರ ಅಲ್ಪ ಅಂತರದಲ್ಲಿ ಜೇಸನ್ ರಾಯ್ ಮತ್ತು ಇಯಾನ್ ಮಾರ್ಗನ್ ವಿಕೆಟ್ ಒಪ್ಪಿಸಿದರೂ, ರನ್ ವೇಗಕ್ಕೆ ಕಡಿವಾಣ ಹಾಕಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.

ಐಸಿಸಿ ಸಮೀಕ್ಷೆ: ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು! ಐಸಿಸಿ ಸಮೀಕ್ಷೆ: ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚು!

ಅಲೆಕ್ಸ್ ಹೇಲ್ಸ್ ಮತ್ತು ಜೋ ರೂಟ್ ತಂಡದ ಮೊತ್ತವನ್ನು ಹಿಗ್ಗಿಸಿದರು.

222 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಒಂದೆಡೆಯಿಂದ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಬಂದಿತು. ನಾಯಕ ಆರೋನ್ ಫಿಂಚ್ ಮಾತ್ರ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರಿಗೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಬೆಂಬಲ ಸಿಗಲಿಲ್ಲ.

ಕೊನೆಯಲ್ಲಿ ಆಷ್ಟೊನ್ ಅಗರ್ ಮತ್ತು ಆಂಡ್ರೂ ಟೈ ತಕ್ಕಮಟ್ಟಿನ ಹೋರಾಟ ನಡೆಸಿದರೂ ಗುರಿ ತಲುಪಲು ಅದು ಸಾಕಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 221/5 (20) ಜೋಸ್ ಬಟ್ಲರ್ 61, ಜೇಸನ್ ರಾಯ್ 44, ಅಲೆಕ್ಸ್ ಹೇಲ್ಸ್ 49, ಜೋ ರೂಟ್ 35. ಮಿಚೆಲ್ ಸ್ವೆಪ್ಸನ್ 37/2, ಮಾರ್ಕಸ್ ಸೋನಿಸ್ 9/1

ಆಸ್ಟ್ರೇಲಿಯಾ: 193/10 (19.4) ಆರೋನ್ ಫಿಂಚ್ 84, ಆಷ್ಟೊನ್ ಅಗರ್ 29, ಆಂಟ್ರೂ ಟೈ 20, ಟ್ರಾವಿಸ್ ಹೆಡ್ 15. ಆದಿಲ್ ರಷೀದ್ 27/3, ಕ್ರಿಸ್ ಜೋರ್ಡನ್ 42/3, ಲಿಯಾಮ್ ಪ್ಲಂಕೆಟ್ 34/2

Story first published: Thursday, June 28, 2018, 15:39 [IST]
Other articles published on Jun 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X