ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೋಸ್ ಬಟ್ಲರ್-ಕ್ರಿಸ್ ವೋಕ್ಸ್ ಅರ್ಧಶತಕ, ಇಂಗ್ಲೆಂಡ್‌ಗೆ 3 ವಿಕೆಟ್ ಜಯ

England vs Pakistan, 1st Test, Day 4 - Live Score

ಮ್ಯಾನ್ಚೆಸ್ಟರ್‌, ಆಗಸ್ಟ್ 8: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಪಡೆ 3 ವಿಕೆಟ್ ಜಯ ದಾಖಲಿಸಿದೆ. ಇಂಗ್ಲೆಂಡ್ ಅಂತಿಮ ಇನ್ನಿಂಗ್ಸ್‌ನಲ್ಲಿ ಜೋಸ್ ಬ್ಲಟರ್ ಮತ್ತು ಕ್ರಿಸ್ ವೋಕ್ಸ್ ಅವರ ಅರ್ಧಶತಕದಾಟ ಆಂಗ್ಲರನ್ನು ಗೆಲುವಿನ ದಡ ಸೇರಿಸಿದೆ.

ಹಿಂದು ಅನ್ನೋ ಕಾರಣಕ್ಕೆ ಪಿಸಿಬಿ ನನ್ನನ್ನು ಮೂಲೆಗುಂಪು ಮಾಡುತ್ತಿದೆ: ಕನೇರಿಯಾಹಿಂದು ಅನ್ನೋ ಕಾರಣಕ್ಕೆ ಪಿಸಿಬಿ ನನ್ನನ್ನು ಮೂಲೆಗುಂಪು ಮಾಡುತ್ತಿದೆ: ಕನೇರಿಯಾ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 326, ದ್ವಿತೀಯ ಇನ್ನಿಂಗ್ಸ್‌ನಲ್ಲಿ 169 ರನ್ ಗಳಿಸಿತ್ತು. ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 219 ರನ್ ಗಳಿಸುವ ಮೂಲಕ ಹಿನ್ನಡೆ ಅನುಭವಿಸಿತ್ತು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ಜೋಸ್ ಬ್ಲಟರ್ ಮತ್ತು ಕ್ರಿಸ್ ವೋಕ್ಸ್ ಬೆಂಬಲ ದೊರೆಯಿತು. ಬಟ್ಲರ್ 75, ವೋಕ್ಸ್ ಅಜೇಯ 84 ರನ್‌ನೊಂದಿಗೆ ಇಂಗ್ಲೆಂಡ್ 82.1 ಓವರ್‌ಗೆ 277 ರನ್ ಬಾರಿಸಿ ಗೆಲುವಿನ ನಗೆ ಬೀರಿದೆ.

ಇಂಗ್ಲೆಂಡ್ vs ಪಾಕಿಸ್ತಾನ, 1ನೇ ಟೆಸ್ಟ್, ಸ್ಕೋರ್‌ಕಾರ್ಡ್

1
46762

ಪಾಕ್ ಮೊದಲ ಇನ್ನಿಂಗ್ಸ್‌ನಲ್ಲಿ ಶಾನ್ ಮಸೂದ್ 156 ರನ್ ಗಳಿಸಿದ್ದರಿಂದ ಮುನ್ನಡೆ ಸಾಧಿಸಲು ಸಾಧ್ಯವಾಗಿತ್ತು. ಇಂಗ್ಲೆಂಡ್ ಬೌಲಿಂಗ್ ವಿಭಾಗದಲ್ಲಿ ಸ್ಟುವರ್ಟ್ ಬ್ರಾಡ್ (3+3 ವಿಕೆಟ್), ಜೋಫ್ರಾ ಆರ್ಚರ್ (3+1) ಮಿನುಗಿದರೆ, ಪಾಕ್ ತಂಡದಲ್ಲಿ ಯಾಸಿರ್ ಶಾ 4+4 ವಿಕೆಟ್‌ಗಳೊಂದಿಗೆ ಗಮನ ಸೆಳೆದರು. ಕ್ರಿಸ್ ವೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸರಣಿಯಲ್ಲಿ 1-0ಯ ಮುನ್ನಡೆ ಪಡೆದುಕೊಂಡಿದೆ.

ಇಂಗ್ಲೆಂಡ್ ತಂಡ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜೋ ರೂಟ್ (ಸಿ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆ), ಕ್ರಿಸ್ ವೋಕ್ಸ್, ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್.

ಐಸಿಸಿಯಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷ ಭಾರತದಲ್ಲೇ ಟಿ20 ವಿಶ್ವಕಪ್ಐಸಿಸಿಯಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷ ಭಾರತದಲ್ಲೇ ಟಿ20 ವಿಶ್ವಕಪ್

ಪಾಕಿಸ್ತಾನ ತಂಡ: ಶಾನ್ ಮಸೂದ್, ಅಬಿದ್ ಅಲಿ, ಅಜರ್ ಅಲಿ (ಸಿ), ಬಾಬರ್ ಅಜಮ್, ಅಸಾದ್ ಶಫೀಕ್, ಮೊಹಮ್ಮದ್ ರಿಜ್ವಾನ್ (ವಿಕೆ), ಶಾದಾಬ್ ಖಾನ್, ಯಾಸಿರ್ ಶಾ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ, ನಸೀಮ್ ಶಾ.

Story first published: Saturday, August 8, 2020, 23:29 [IST]
Other articles published on Aug 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X