ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾದಲ್ಲಿ ಈ ಆಟಗಾರ ಇರುವುದೇ ಕೊಹ್ಲಿಯ ದೊಡ್ಡ ಅದೃಷ್ಟ: ಸ್ಟೀವ್ ವಾ

ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಎರಡು ಟೆಸ್ಟ್ ಸರಣಿಗಳ ಪಂದ್ಯ, ಇದೇ ಶುಕ್ರವಾರ (ಫೆ 21) ಆರಂಭವಾಗಲಿದೆ. ಏಕದಿನ ಸರಣಿಯನ್ನು ಸೋತಿರುವ ವಿರಾಟ್ ಕೊಹ್ಲಿ ಪಡೆ ತುಸು ಒತ್ತಡದಲ್ಲಿದೆ.

ನ್ಯೂಜಿಲ್ಯಾಂಡ್ ತಂಡಕ್ಕೆ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಸೇರ್ಪಡೆಯಾಗಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ಇನ್ನಷ್ಟು ಬಲಬಂದಂತಾಗಿದೆ. ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭಾರತ ನಂಬರ್ ಒನ್ ಸ್ಥಾನದಲ್ಲಿದ್ದರೆ, ನ್ಯೂಜಿಲ್ಯಾಂಡ್ ಆರನೇ ಸ್ಥಾನದಲ್ಲಿದೆ.

ಈ ವರ್ಷಾಂತ್ಯದಲ್ಲಿ ಅಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲು ಆಸೀಸ್ ನೆಲಕ್ಕೆ ಭಾರತ ಪ್ರವಾಸ ತೆರಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಒಂದು ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲಿದೆ.

ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ: ಕೊಹ್ಲಿ ಪಡೆಗೆ ಕಾಡುತಿದೆ ಅದೇ ಕಣ್ಣು..ಅದೇ ಕಣ್ಣು ಬೇಟೆ ಆಡುತಿದೆ..ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ: ಕೊಹ್ಲಿ ಪಡೆಗೆ ಕಾಡುತಿದೆ ಅದೇ ಕಣ್ಣು..ಅದೇ ಕಣ್ಣು ಬೇಟೆ ಆಡುತಿದೆ..

ಪ್ರಮುಖವಾಗಿ, ಭಾರತದ ಅಸ್ಟ್ರೇಲಿಯಾ ಪ್ರವಾಸದ ಬಗ್ಗೆ ಮಾತನಾಡುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ವಾ, ಕೊಹ್ಲಿ ತಂಡಕ್ಕಿಂತ, ಆಸೀಸ್ ತಂಡ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ. ಟೀ ಇಂಡಿಯಾದಲ್ಲಿ ಈ ಆಟಗಾರ ಇರುವುದು ಕೊಹ್ಲಿ ಅದೃಷ್ಟ, ಮುಂದೆ ಓದಿ..

ಗಂಗೂಲಿಗೆ ಥ್ಯಾಂಕ್ಸ್ ಹೇಳಿದ ಸ್ಟೀವ್ ವಾ

ಗಂಗೂಲಿಗೆ ಥ್ಯಾಂಕ್ಸ್ ಹೇಳಿದ ಸ್ಟೀವ್ ವಾ

ಈ ವರ್ಷಾಂತ್ಯದಲ್ಲಿ ಅಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲು ಭಾರತ ಪ್ರವಾಸ ತೆರಳಲಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಒಂದು ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಹಗಲು-ರಾತ್ರಿ ಪಂದ್ಯವನ್ನಾಡಲು ಭಾರತ ಒಪ್ಪಿದ್ದಕ್ಕೆ ಸ್ಟೀವ್ ವಾ, ಬಿಸಿಸಿಐಗೆ ಥ್ಯಾಂಕ್ಸ್ ಹೇಳಿದ್ದಾರೆ.

ಕೊಹ್ಲಿ ನಾಯಕತ್ವ

ಕೊಹ್ಲಿ ನಾಯಕತ್ವ

ಟೀ ಇಂಡಿಯಾದ ಬಗ್ಗೆ ಮಾತನಾಡುತ್ತಿದ್ದ ಸ್ಟೀವ್ ವಾ, "ವಿರಾಟ್ ಕೊಹ್ಲಿ ಪಡೆ ಸದ್ಯ ಏಕದಿನ, ಟಿ-20 ಟೆಸ್ಟ್​ ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಬಲಿಷ್ಠವಾಗಿ ಹೊರಹೊಮ್ಮುತ್ತಿದೆ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಪ್ರತೀದಿನ ಯಶಸ್ಸನ್ನು ಗಳಿಸುತ್ತಿದೆ. ಭಾರತ ತಂಡ ವಿಶ್ವದಲ್ಲೇ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ" ಎನ್ನುವ ಅಭಿಪ್ರಾಯವನ್ನು ವಾ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಡೇ-ನೈಟ್ ಟೆಸ್ಟ್‌ ಪಂದ್ಯವನ್ನಾಡಲಿದೆ ಟೀಮ್ ಇಂಡಿಯಾ

ಬುಮ್ರಾ ಭಾರತ ತಂಡದಲ್ಲಿರುವುದು ವಿರಾಟ್ ಕೊಹ್ಲಿಯ ಅದೃಷ್ಟ

ಬುಮ್ರಾ ಭಾರತ ತಂಡದಲ್ಲಿರುವುದು ವಿರಾಟ್ ಕೊಹ್ಲಿಯ ಅದೃಷ್ಟ

"ಭಾರತದ ಬೌಲಿಂಗ್ ಮೊನಚು ವಿದೇಶದ ನೆಲದಲ್ಲಿ ಅಷ್ಟಾಗಿ ವರ್ಕೌಟ್ ಆಗುವುದಿಲ್ಲ. ನನ್ನ ಪ್ರಕಾರ ಜಸಪ್ರೀತ್ ಬುಮ್ರಾ ಭಾರತ ತಂಡದಲ್ಲಿರುವುದು ವಿರಾಟ್ ಕೊಹ್ಲಿಯ ಅದೃಷ್ಟ. ಬುಮ್ರಾ ನಿಜಕ್ಕೂ ಅದ್ಭುತ ಪ್ರತಿಭೆ. ಬುಮ್ರಾಗೆ ಬೌಲಿಂಗ್ ಶೈಲಿಯ ಕುರಿತು ಯಾರೂ ಪಾಠ ಮಾಡಬಾರದು. ಅವರದ್ದೇ ಶೈಲಿಯ ಬೌಲಿಂಗ್ ಕಂಡುಕೊಳ್ಳಲು ಇದರಿಂದ ಅವರಿಗೆ ಸಾಧ್ಯವಾಗಿದೆ" - ಸ್ಟೀವ್ ವಾ.

ಆಸ್ಟ್ರೇಲಿಯಾದ ಈಗಿನ ಫಾಸ್ಟ್ ಬೌಲರ್ ಗಳು ಅಪಾಯಕಾರಿ, ಸ್ಟೀವ್ ವಾ

ಆಸ್ಟ್ರೇಲಿಯಾದ ಈಗಿನ ಫಾಸ್ಟ್ ಬೌಲರ್ ಗಳು ಅಪಾಯಕಾರಿ, ಸ್ಟೀವ್ ವಾ

"ಆಸ್ಟ್ರೇಲಿಯಾದ ಈಗಿನ ಫಾಸ್ಟ್ ಬೌಲರ್ ಗಳು ಅಪಾಯಕಾರಿ. ಆಸೀಸ್ ನೆಲದಲ್ಲಿ ಉತ್ತಮ ಲಯವನ್ನು ಹೊಂದಿರುತ್ತಾರೆ. ಮುಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಸೀಸ್ ಬೌಲರ್​ಗಳು ಟೀಂ ಇಂಡಿಯಾ ಬೌಲರ್​ಗಳಿಗಿಂತಲೂ ಮೇಲುಗೈ ಪಡೆಯಲಿದ್ದಾರೆ. ಒಟ್ಟಿನಲ್ಲಿ ಇದೊಂದು ಕುತೂಹಲಕಾರಿ ಸರಣಿಯಾಗಲಿದೆ" ಎಂದು ಸ್ಟೀವ್ ವಾ ಅಭಿಪ್ರಾಯ ಪಟ್ಟಿದ್ದಾರೆ.

Story first published: Wednesday, February 19, 2020, 20:01 [IST]
Other articles published on Feb 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X