For Quick Alerts
ALLOW NOTIFICATIONS  
For Daily Alerts
 

ಭಾರತದ ಮಾಜಿ ಕ್ರಿಕೆಟರ್ ಚೇತನ್ ಚೌಹಾಣ್ ಆರೋಗ್ಯ ಸ್ಥಿತಿ ಗಂಭೀರ

Former cricketer Chetan Chauhan on ventilator after testing positive for coronavirus and kidney failure

ನವದೆಹಲಿ, ಆಗಸ್ಟ್ 15: ಭಾರತದ ಮಾಜಿ ಆಟಗಾರ ಚೇತನ್ ಚೌಹಾಣ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊರೊನಾವೈರಸ್ ಸೋಂಕಿಗೆ ತುತ್ತಾಗಿದ್ದ ಚೌಹಾಣ್ ಅವರ ಕಿಡ್ನಿ ವೈಫಲ್ಯಗೊಂಡಿದ್ದು, ಅವರನ್ನು ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿ ಇಡಲಾಗಿದೆ.

ಕಳೆದ ಜುಲೈನಲ್ಲಿನಲ್ಲಿ ಚೇತನ್ ಚೌಹಾಣ್‌ಗೆ ಕೋವಿಡ್-19 ತಗುಲಿತ್ತು. ಅವರನ್ನು ಲಕ್ನೋದಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದ ಕಾರಣ ಚೌಹಾಣ್ ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಕೊರೊನಾ ಸೋಂಕಿನಿಂದ ಚೌಹಾಣ್ ಸುಧಾರಿಸುವುದರಲ್ಲಿದ್ದಾಗಲೇ ಅವರಿಗೆ ಕಿಡ್ನಿ ವೈಫಲ್ಯ ಮತ್ತು ರಕ್ತದೊತ್ತಡ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ವೆಂಟಿಲೇಟರ್‌ ಬೆಂಬಲದಲ್ಲಿ ಇಡಲಾಗಿದೆ ಎಂದು ವೈದ್ಯ ಮೂಲ ತಿಳಿಸಿದೆ.

72ರ ಹರೆಯದ ಚೌಹಾಣ್ ಎರಡು ಬಾರಿ ಲೋಕಸಭಾ ಎಂಪಿ ಕೂಡ ಆಗಿದ್ದರು. ಟೀಮ್ ಇಂಡಿಯಾ ಪರ 1969ರಿಂದ 1978ರ ವರೆಗೆ ಆಡಿದ್ದ ಚೌಹಾಣ್, 40 ಟೆಸ್ಟ್ ಪಂದ್ಯಗಳಲ್ಲಿ 31.57ರ ಸರಾಸರಿಯಂತೆ 2084 ರನ್ ಗಳಿಸಿದ್ದಾರೆ. 7 ಏಕದಿನ ಪಂದ್ಯಗಳನ್ನೂ ಆಡಿರುವ ಚೌಹಾಣ್ 153 ರನ್ ಗಳಿಸಿದ್ದಾರೆ.

Story first published: Saturday, August 15, 2020, 17:50 [IST]
Other articles published on Aug 15, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+