ನಾಯಕನಾಗಿ ಘರ್ಜಿಸಲಿದ್ದಾನೆ: ಪಂತ್ ನಾಯಕತ್ವದ ಮೇಲೆ ಗವಾಸ್ಕರ್‌ಗೆ ವಿಶ್ವಾಸ

ಐಪಿಎಲ್ 2021ರ ಆವೃತ್ತಿಯಲ್ಲಿ ನಾಯಕತ್ವದ ಜವಾಬ್ಧಾರಿ ವಹಿಸಿಕೊಂಡ ರಿಷಭ್ ಪಂತ್ ಉತ್ತಮ ಪ್ರದರ್ಶನ ತೋರಿದ್ದಾರೆ. ಪಂತ್ ನಾಯಕನಾಗಿ ನೀಡಿದ ಪ್ರದರ್ಶನಕ್ಕೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನಾಯಕನಾಗಿ ಪಂತ್ ತೋರಿಸಿದ ಕಿಡಿ ಮುಂದೆ ಘರ್ಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ ಗವಾಸ್ಕರ್.

ನಾಯಕನಾಗಿ ಯುದ್ಧಕಲೆಯಲ್ಲಿ ರಿಷಭ್ ಪಂತ್ ಅತ್ಯುತ್ತಮವಾಗಿದ್ದಾರೆ. ತಮ್ಮ ಕೌಶಲ್ಯವನ್ನು ನಾಯಕತ್ವದಲ್ಲಿಯೂ ಪಂತ್ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಗಾಯದ ಕಾರಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಟೂರ್ನಿಯಿಂದ ಹೊರ ಬಿದ್ದ ಕಾರಣ ಈ ಬಾರಿಯ ನಾಯಕತ್ವದ ಜವಾಬ್ಧಾರಿ ರಿಷಭ್ ಪಂತ್ ಹೆಗಲಿಗೆ ಬಿದ್ದಿತ್ತು.

ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್ನಮ್ಮ ತಲೆಯನ್ನು ದ್ರಾವಿಡ್ ಭಾರತಕ್ಕೆ ಬಳಸಿಕೊಂಡರು: ಗ್ರೆಗ್ ಚಾಪೆಲ್

ಕಳೆದ ಆಸ್ಟ್ರೇಲಿಯಾ ಪ್ರವಾಸದ ನಂತರ ರಿಷಭ್ ಪಂತ್ ಅತ್ಯುತ್ಭುತ ಫಾರ್ಮ್‌ನಲ್ಲಿದ್ದರು. ಈ ಪ್ರದರ್ಶನವನ್ನು ಅವರು ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿಯೂ ವ್ಯಕ್ತಪಡಿಸಿದರು. ಈ ಪ್ರದರ್ಶನಕ್ಕೆ ಪ್ರತಿಯಾಗಿ ಅವರು ಡೆಲ್ಲಿ ತಂಡದ ನಾಯಕತ್ವದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ.

"ಆತನೋರ್ವ ಭವಿಷ್ಯದ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾರಣದಿಂದಾಗಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಅವರಲ್ಲಿ ಇದೆ" ಎಂದು ಸುನಿಲ್ ಗವಾಸ್ಕರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, May 13, 2021, 11:56 [IST]
Other articles published on May 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X