ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯಿಂದ ಕಲಿಯಲು ನಾನು ಉತ್ಸುಕನಾಗಿದ್ದೇನೆ: ಗ್ಲೆನ್ ಮ್ಯಾಕ್ಸ್‌ವೆಲ್

Glenn Maxwell eager to learn from pinnacle of the game Virat Kohli at RCB

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡಕ್ಕೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಈ ಬಗ್ಗೆ ಆಸಿಸ್ ಆಲ್‌ರೌಂಡರ್ ಸಂತಸವನ್ನು ವ್ಯಕ್ತಪಡಿಸಿದ್ದರು ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿಯಿಂದ ಕಲಿಯಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ವಿರಾಟ್ ಕೊಹ್ಲಿಯನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್‌ 'ಆಟದ ಶಿಖರಪ್ರಾಯ' ಎಂದು ಹೇಳಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಪ್ರಾಬಲ್ಯವನ್ನು ಉದ್ದೇಶಿಸಿ ಗ್ಲೆನ್ ಮ್ಯಾಕ್ಸ್‌ವೆಲ್ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಭಾರತ vs ಇಂಗ್ಲೆಂಡ್: ಟಿ20 ಸರಣಿಗೆ ಮತ್ತೆ ವರುಣ್ ಚಕ್ರವರ್ತಿ ಅನುಮಾನ!ಭಾರತ vs ಇಂಗ್ಲೆಂಡ್: ಟಿ20 ಸರಣಿಗೆ ಮತ್ತೆ ವರುಣ್ ಚಕ್ರವರ್ತಿ ಅನುಮಾನ!

ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಈ ಬಾರಿಯ ಐಪಿಎಲ್‌ಗಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 14.25 ಕೋಟಿ ನೀಡಿ ಖರೀದಿಸಿದೆ. ಕಳೆದ ತಿಂಗಳು ನಡೆದ ಹರಾಜು ಪ್ರಕ್ರಿಯೆಯಲ್ಲಿ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.

ಕಳೆದ ಬಾರಿಯ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಆದರೆ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಪರಿಣಾಮವಾಗಿ ಅವರನ್ನು ಈ ಬಾರಿಯ ಹರಾಜಿಗಾಗಿ ಪಂಜಾಬ್ ಬಿಡುಗಡೆಗೊಳಿಸಿತ್ತು. ಆದರೆ ಈ ಹಿಂದಿನ ಮೊತ್ತಕ್ಕೂ ಅಧಿಕ ಮೊತ್ತಕ್ಕೆ ಈ ಬಾರಿ ಮ್ಯಾಕ್ಸ್‌ವೆಲ್ ಆರ್‌ಸಿಬಿ ತಂಡಕ್ಕೆ ಹರಾಜಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪಿಚ್ ದೂಷಿಸುವ ಮೂಲಕ ನಾವು ನಮಗೇ ಅಪಚಾರ ಮಾಡುತ್ತಿದ್ದೇವೆ: ಇಂಗ್ಲೆಂಡ್ ಬ್ಯಾಟಿಂಗ್ ಕೋಚ್ಪಿಚ್ ದೂಷಿಸುವ ಮೂಲಕ ನಾವು ನಮಗೇ ಅಪಚಾರ ಮಾಡುತ್ತಿದ್ದೇವೆ: ಇಂಗ್ಲೆಂಡ್ ಬ್ಯಾಟಿಂಗ್ ಕೋಚ್

"ನಾನು ವಿರಾಟ್ ಕೊಹ್ಲಿಯ ಆಟದ ಬಗ್ಗೆ ಗಮನಿಸಲು ಉತ್ಸುಕನಾಗಿದ್ದೇನೆ. ಕೇವಲ ಆಟದಲ್ಲಿ ಮಾತ್ರವಲ್ಲ ತರಬೇತಿ ಸಂದರ್ಭದಲ್ಲೂ ಅವರನ್ನು ಗಮನಿಸಲು ಕುತೂಹಲದಿಂದಿದ್ದೇನೆ. ಆತನಿಂದ ನಾಯಕತ್ವದ ಗುಣವನ್ನು ಕಲಿಯಲು ಬಯಸುತ್ತೇನೆ" ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ಭಾರತ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದ್ದು ಬಳೀಕ ಐದು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಯ ಅಂತ್ಯದ ಬಳಿಕ ಏಪ್ರಿಲ್ ತಿಂಗಳಿನಿಂದ ಐಪಿಎಲ್ ಆರಂಭವಾಗಲಿದೆ.

Story first published: Monday, March 1, 2021, 16:36 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X