ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

Glenn Maxwell picks his IPL Eleven

ಐಪಿಎಲ್ 13ನೇ ಆವೃತ್ತಿ ಯುಎಇನಲ್ಲಿ ನಡೆಯಲಿದ್ದು ಎಲ್ಲವೂ ಸುಸೂತ್ರವಾಗಿ ಮುಂದುವರಿಯುತ್ತಿದೆ. ಅಂತಿಮ ಹಂತದ ತಯಾರಿಗಳನ್ನು ಎಲ್ಲಾ ತಂಡಗಳು ನಡೆಸಿಕೊಳ್ಳುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ, ಕಿಂಗ್ಸ್ ಇಲವೆಲ್ ಪಂಜಾಬ್ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನ ಶ್ರೇಷ್ಠ ತಂಡವನ್ನು ಪ್ರಕಟಿಸಿದ್ದಾರೆ.

ಐಪಿಎಲ್ ಆರಂಭಕ್ಕೆ ಒಂದೂವರೆ ತಿಂಗಳಷ್ಟೇ ದೂರವಿದೆ. ಈ ಸಂದರ್ಭದಲ್ಲಿ ಕ್ರಿಕ್ ಇನ್ಫೋ ಚಾಟ್ ಶೋದಲ್ಲಿ ಕಾಮೆಂಟೇಟರ್ ಹರ್ಷ ಭೋಗ್ಲೆ ಜೊತಗೆ ಸಂವಾದವನ್ನು ನಡೆಸಿದರು, ಈ ಸಂವಾದದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಶ್ರೇಷ್ಠ ಐಪಿಎಲ್ ತಂಡವನ್ನು ಹೆಸರಿಸಿದ್ದಾರೆ. ಮಾಕ್ಸ್‌ವೆಲ್ ಹೆಸರಿಸಿದ ಈ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ..

ಐಪಿಎಲ್ ನಡೆಸಲು ಬಿಸಿಸಿಐಯ ಅಧಿಕೃತ ಅನುಮೋದನೆ ಪಡೆದ ಇಸಿಬಿಐಪಿಎಲ್ ನಡೆಸಲು ಬಿಸಿಸಿಐಯ ಅಧಿಕೃತ ಅನುಮೋದನೆ ಪಡೆದ ಇಸಿಬಿ

ಆರಂಭಿಕ ಆಟಗಾರರು

ಆರಂಭಿಕ ಆಟಗಾರರು

ಮ್ಯಾಕ್ಸ್‌ವೆಲ್ ಆರಂಭಿಕರಾಗಿ ಆಸ್ಟ್ರೇಲಿಯಾ ತಂಡದಲ್ಲಿ ಸಹ ಆಟಗಾರ ಡೇವಿಡ್ ವಾರ್ನರ್ ಆವರನ್ನು ಆಯ್ಕೆ ಮಾಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ವಾರ್ನರ್ ನಾಲ್ಕನೃ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಇನ್ನೋರ್ವ ಆರಂಭಿಕನಾಗಿ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಆರಂಭಿಕ ಸ್ಲಾಟ್ ಅತ್ಯಂತ ಬಲಿಷ್ಠವಾಗಿದೆ.

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕದಲ್ಲೂ ಐಪಿಎಲ್‌ನ ಅತಿ ದೊಡ್ಡ ಹೆಸರುಗಳೇ ಇದೆ. ಎಬಿ ಡಿವಿಲಿಯರ್ಸ್ ಮೂರನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾಗೆ ನಾಲ್ಕನೇ ಕ್ರಮಾಂಕವನ್ನು ನೀಡಲಾಗಿದೆ. ಐದನೇ ಕ್ರಮಾಂಕದಲ್ಲಿ ಸ್ವತಃ ಗ್ಲೆನ್ ಮ್ಯಾಕ್ಸ್‌ವೆಲ್ ಅವರೇ ಕಾಣಿಸಿಕೊಂಡಿದ್ದಾರೆ.

ಕೆಳ ಕ್ರಮಾಂಕ

ಕೆಳ ಕ್ರಮಾಂಕ

ಕೆಳ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್‌ನ ಆಂಡ್ರೆ ರಸೆಲ್‌ಗೆ ಆಲ್‌ರೌಂಡರ್ ಜವಾಬ್ಧಾರಿಯನ್ನು ನೀಡಿದ್ದಾರೆ ಮ್ಯಾಕ್ಸ್‌ವೆಲ್. ಆಂಡ್ರೆ ರಸೆಲ್ ಆರನೇ ಕ್ರಮಾಂಕದಲ್ಲಿದ್ದಾರೆ. ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕೂಡ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

ಬೌಲಿಂಗ್ ವಿಭಾಗ

ಬೌಲಿಂಗ್ ವಿಭಾಗ

ಸ್ಪಿನ್ ಬೌಲಿಂಗ್‌ ವಿಭಾಗದ ಜವಾಬ್ಧಾರಿಯನ್ನು ಹರ್ಭಜನ್‌ಗೆ ನೀಡಲಾಗಿದೆ. ಅಚ್ಚರಿಯೇನೆಂದರೆ ವೇಗದ ಬೌಲಿಂಗ್ ನೇತೃತ್ವವನ್ನು ಮೋಹಿತ್ ಶರ್ಮಾಗೆ ನೀಡಿದ್ದಾರೆ ಮ್ಯಾಕ್ಸ್‌ವೆಲ್. ಭುವನೇಶ್ವರ್ ಕುಮಾರ್ ಹಾಗೂ ಜಸ್ಪ್ರೀತ್ ಬೂಮ್ರಾ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಉಳಿದಿಬ್ಬರು ವೇಗಿಗಳಾಗಿದ್ದಾರೆ.

ಮ್ಯಾಕ್ಸ್‌ವೆಲ್ ಅತ್ಯುತ್ತಮ ಐಪಿಎಲ್ XI

ಮ್ಯಾಕ್ಸ್‌ವೆಲ್ ಅತ್ಯುತ್ತಮ ಐಪಿಎಲ್ XI

ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಸುರೇಶ್ ರೈನಾ, ಗ್ಲೆನ್ ಮ್ಯಾಕ್ಸ್ ವೆಲ್, ಆಂಡ್ರೆ ರಸ್ಸೆಲ್, ಎಂಎಸ್ ಧೋನಿ, ಹರ್ಭಜನ್ ಸಿಂಗ್, ಮೋಹಿತ್ ಶರ್ಮಾ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ

Story first published: Wednesday, August 12, 2020, 15:56 [IST]
Other articles published on Aug 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X