ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸ್ಪಿನ್‌ ಮಾಂತ್ರಿಕ ಹರ್ಭಜನ್ ಸಿಂಗ್ ನಿವೃತ್ತಿ?!

Harbhajan Singh might announce international retirement to take part in England’s ‘The Hundred’

ನವದೆಹಲಿ, ಅಕ್ಟೋಬರ್ 4: ಭಾರತದ ಆಫ್‌ ಸ್ಪಿನ್ನರ್ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ. ಇಂಗ್ಲೆಂಡ್‌ನ ನ್ಯೂ ಸಿಟಿ ಮೂಲದ ಫ್ರಾಂಚೈಸಿ ಲೀಗ್ 'ದ ಹಂಡ್ರೆಡ್ಸ್‌'ಗೆ ಯಾವುದಾದರೂ ತಂಡ ಭಜ್ಜಿ ಅವರನ್ನು ಆರಿಸಿದರೆ ಸಿಂಗ್ ನಿವೃತ್ತಿ ಘೋಷಿಸುವುದರಲ್ಲಿದ್ದಾರೆ ಎಂದು ವರದಿಯೊಂದು ಹೇಳಿದೆ.

ಚೆಂಡಿನ ಬಳಿಯೇ ಚೆಂಡಿಗಾಗಿ ಹುಡುಕಾಡಿದ ದ.ಆಫ್ರಿಕಾ ಆಟಗಾರರು: ವಿಡಿಯೋಚೆಂಡಿನ ಬಳಿಯೇ ಚೆಂಡಿಗಾಗಿ ಹುಡುಕಾಡಿದ ದ.ಆಫ್ರಿಕಾ ಆಟಗಾರರು: ವಿಡಿಯೋ

ಅಂತಾರಾಷ್ಟ್ರೀಯ ಲೀಗ್‌ನಲ್ಲಿ ಭಾರತೀಯ ಆಟಗಾರರು ಪಾಲ್ಗೊಳ್ಳುವ ವಿಚಾರದಲ್ಲಿ ಬಿಸಿಸಿಐ ಕಠಿಣ ನಿಯಮಗಳನ್ನು ಒಳಗೊಂಡಿದೆ. ಬಿಸಿಸಿಐ ಅಡಿಯಲ್ಲಿರುವ ಸಕ್ರಿಯ ಆಟಗಾರ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಇದೇ ಕಾರಣಕ್ಕಾಗಿ ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿ ಆ ಬಳಿಕ ಕೆನಡಾದ ಗ್ಲೋಬಲ್ ಟಿ20 ಲೀಗ್‌ನಲ್ಲಿ ಪಾಲ್ಗೊಂಡಿದ್ದರು.

ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!

2016ರಲ್ಲಿ ಏಷ್ಯಾಕಪ್‌ನಲ್ಲಿ ಕೊನೆಯ ಬಾರಿಗೆ ಹರ್ಭಜನ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದರು. ಭಜ್ಜಿ ಸೇರಿ ಒಟ್ಟು 25 ವಿದೇಶಿ ಆಟಗಾರರು 'ದ ಹಂಡ್ರೆಡ್ಸ್‌' ಯೋಜಿತ ಆಟಗಾರರ ಪಟ್ಟಿಯಲ್ಲಿದ್ದಾರೆ. ಲೀಗ್‌ನಲ್ಲಿ ಭಜ್ಜಿ ಯುಎಸ್‌ಎಡಿ124,000 (ಸುಮಾರು 87,89,802 ರೂ.) ಮೂಲಬೆಲೆ ಹೊಂದಿದ್ದಾರೆ.

ಭಾರತ vs ದ.ಆಫ್ರಿಕಾ: ಸ್ಮಿತ್ ದಾಖಲೆ ಮುರಿದ ಮಯಾಂಕ್ ಅಗರ್ವಾಲ್ಭಾರತ vs ದ.ಆಫ್ರಿಕಾ: ಸ್ಮಿತ್ ದಾಖಲೆ ಮುರಿದ ಮಯಾಂಕ್ ಅಗರ್ವಾಲ್

'ದ ಹಂಡ್ರೆಡ್ಸ್' ಅನ್ನೋದು 100 ಎಸೆತಗಳ ಟಿ20 ಟೂರ್ನಿ. 2020ರ ಜುಲೈನಲ್ಲಿ ಇಂಗ್ಲೆಂಡ್ ಕ್ರಿಕೆಟ್‌ ಬೋರ್ಡ್ (ಇಸಿಬಿ) ಇದನ್ನು ನಡೆಸಲು ಉದ್ದೇಶಿಸಿದೆ. ಟೂರ್ನಿಯಲ್ಲಿ ಎಂಟು ಫ್ರಾಂಚೈಸಿಗಳು ಪಾಲ್ಗೊಳ್ಳಲಿವೆ. ಲೀಗ್‌ನಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವಂತೆ ಹರ್ಭಜನ್ ಬಿಸಿಸಿಐ ಕೋಡಿಕೊಂಡಿದ್ದಾದರೂ ಬಿಸಿಸಿಐ ಇದಕ್ಕೆ ನಿರಾಕರಿಸಿದೆ.

ಭಾರತ ವಿರುದ್ಧವೇ ಪಾದಾರ್ಪಣೆ ಮಾಡಿದ ಭಾರತ ಮೂಲದ ಸೇನುರಾನ್!ಭಾರತ ವಿರುದ್ಧವೇ ಪಾದಾರ್ಪಣೆ ಮಾಡಿದ ಭಾರತ ಮೂಲದ ಸೇನುರಾನ್!

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಭಜ್ಜಿ ಉತ್ತಮ ಪ್ರದರ್ಶನ ನೀಡಿದ್ದರೂ ಭಜ್ಜಿಯನ್ನು ಬಿಸಿಸಿಐ ಅಂತಾರಾಷ್ಟ್ರೀಯ ಟಿ20ಗಳಿಗೆ ಪರಿಗಣಿಸುತ್ತಿಲ್ಲ. ಹೀಗಾಗಿ ದ ಹಂಡ್ರೆಡ್ಸ್ ಲೀಗ್‌ ನ ಯಾವುದಾದರೂ ಫ್ರಾಂಚೈಸಿ ಭಜ್ಜಿಯನ್ನು ಆರಿಸಿದರೆ, ಭಜ್ಜಿ ನಿವೃತ್ತಿ ಘೋಷಿಸುವುದರಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Story first published: Friday, October 4, 2019, 17:24 [IST]
Other articles published on Oct 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X